ಸ್ನಾನಕ್ಕೆಂದು ತುಂಗಾಭದ್ರಾ ನದಿಗಿಳಿದ ಸಹೋದರಿಯರಿಬ್ಬರು ನೀರುಪಾಲು
ಸಾಂದರ್ಭಿಕ ಚಿತ್ರ
ಮಲೆಬೆನ್ನೂರು, ಸೆ.6: ಹರಿಹರ ತಾಲೂಕಿನ ಸುಕ್ಷೇತ್ರ ಉಕ್ಕಡಗಾತ್ರಿಯ ತುಂಗಭದ್ರಾ ನದಿಯಲ್ಲಿ ಕೊಚ್ಚಿಹೋಗಿದ್ದ ಸಹೋದರಿಯರ ಪೈಕಿ ಪುಷ್ಪಾ (17) ಎಂಬವರ ಶವ ಮಂಗಳವಾರ ಪತ್ತೆಯಾಗಿದ್ದು, ಚೈತ್ರ(19) ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
ಘಟನಾ ಸ್ಥಳದಿಂದ ಸುಮಾರು ಒಂದೂವರೆ ಕಿಮೀ ದೂರದಲ್ಲಿ ದಂಡೆ ಪಕ್ಕದ ಪೆಳೆಗೆ ಸಿಕ್ಕಿ ಹಾಕಿಕೊಂಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಚೈತ್ರಳ ಶವಕ್ಕಾಗಿ ಎನ್ಡಿಆರ್ಎಫ್ ಹಾಗೂ ಅಗ್ನಿಶಾಮಕ ದಳ ಬೋಟ್ನಲ್ಲಿ ಶೋಧ ಕಾರ್ಯ ಮುಂದುವರೆಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ದಾವಣಗೆರೆ ತಾಲೂಕು ಹುಚ್ಚವ್ವನಹಳ್ಳಿಯ ರಾಧಮ್ಮ ವೀರಾಚಾರಿ ದಂಪತಿ ಪುತ್ರಿಯರಾದ ಚೈತ್ರ ಹಾಗೂ ಪುಷ್ಪಾ ಸಹೋದರಿಯರು ಭಾನುವಾರ ಉಕ್ಕಡಗಾತ್ರಿ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡುವಾಗ ಸೆಳವಿಗೆ ಸಿಲುಕಿ ಕೊಚ್ಚಿಹೋಗಿದ್ದರು ಎನ್ನಲಾಗಿದೆ.
ಈ ಸಂಬಂಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೊಪ್ಪಳ: ಇಬ್ಬರು ಪೊಲೀಸರು ನೀರುಪಾಲು
Next Story