ಮಧ್ಯಪ್ರದೇಶ: ಸೇನಾ ಆಕಾಂಕ್ಷಿಗಳ ನಡುವೆ ಘರ್ಷಣೆ

ಭೋಪಾಲ, ಸೆ. 6: ಮಧ್ಯಪ್ರದೇಶದ ಮೊರೇನಾ ಜಿಲ್ಲೆಯಲ್ಲಿರುವ ಕ್ರೀಡಾಂಗಣವೊಂದರಲ್ಲಿ ಸೇನಾ ನೇಮಕಾತಿಗೆ ಸಿದ್ಧತೆ ನಡೆಸುತ್ತಿದ್ದ ಯುವಕರ ಎರಡು ಗುಂಪುಗಳ ನಡುವೆ ಮಂಗಳವಾರ ಘರ್ಷಣೆ ನಡೆದಿದೆ.
ಯುವಕರ ಒಂದು ಗುಂಪು ಇನ್ನೊಂದು ಗುಂಪನ್ನು ಅಟ್ಟಿಸಿಕೊಂಡು ಹೋಗುತ್ತಿರುವುದು, ಎರಡೂ ಗುಂಪುಗಳು ಪರಸ್ಪರ ಕಲ್ಲು ತೂರಾಟದಲ್ಲಿ ತೊಡಗಿರುವುದು, ದೊಣ್ಣೆಯಲ್ಲಿ ಥಳಿಸುತ್ತಿರುವುದು, ಕೆಲವರು ನೆಲದಲ್ಲಿ ಬಿದ್ದಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಓಟದ ಟ್ರ್ಯಾಕ್‌ನಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆ ಸಂದರ್ಭ ಗುಂಡು ಹಾರಾಟ ನಡೆದ ಬಗ್ಗೆ ಕೂಡ ವರದಿಯಾಗಿದೆ. ಹಿಂಸಾಚಾರದಲ್ಲಿ ಕನಿಷ್ಠ ನಾಲ್ವರು ಸೇನಾ ಆಕಾಂಕ್ಷಿಗಳು ಗಾಯಗೊಂಡಿದ್ದಾರೆ
ಈ ಬಗ್ಗೆ ಅನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
A stadium in Madhya Pradesh's Morena district turned into a battleground of two groups of youths preparing for recruitment into the country's armed forces @ndtv@ndtvindia pic.twitter.com/lVBIv2g46Z
— Anurag Dwary (@Anurag_Dwary) September 6, 2022







