ಪಾತ್ರೆಗಳನ್ನು ಮರಳಿಸದ ಸ್ನೇಹಿತನ ಥಳಿಸಿ ಹತ್ಯೆ: ಆರೋಪಿಯ ಬಂಧನ

ಹೊಸದಿಲ್ಲಿ, ಸೆ.6: ತನ್ನ ಸ್ನೇಹಿತನನ್ನು ದೊಣ್ಣೆ ಬರ್ಬರವಾಗಿ ಥಳಿಸಿ ಹತ್ಯೆಗೈದ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ಕಾನ್ಪುರದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ತನ್ನಿಂದ ಪಡೆದುಕೊಂಡಿದ್ದ ಸಾಮಾಗ್ರಿಗಳನ್ನು ಹಿಂತಿರುಗಿದಿದ್ದುದಕ್ಕಾಗಿ ಕ್ರುದ್ಧಗೊಂಡ ಆತ ಈ ಕೃತ್ಯವನ್ನು ಎಸಗಿದ್ದಾನೆನ್ನಲಾಗಿದೆ. ಹತ್ಯೆಯ ಭಯಾನಕ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
ನಝಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ರಾಮಕೃಷ್ಣ ನಗರದಲ್ಲಿ ಈ ಘಟನೆ ನಡೆದಿದ್ದು, ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತ ವ್ಯಕ್ತಿ ಬಲವೀರ್ ಶವವನ್ನು ಪತ್ತೆಹಚ್ಚಿದರು. ಪ್ರಕರಣದ ಆರೋಪಿ ಅಂಕುರ್ ಸ್ಥಳದಿಂದ ಪರಾರಿಯಾಗಿದ್ದನು. ಕೆಲವ ತಾಸುಗಳ ಆನಂತರ ಆತನನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಅಂಕುರ್‌ನ ಮನೆಯಿಂದ ಕೆಲವು ಪಾತ್ರೆಗಳು ಹಾಗೂ ಸಾಮಾಗ್ರಿಗಳನ್ನು ಬಲವೀರ್ ಕೊಂಡೊಯ್ದಿದ್ದು, ಅದನ್ನು ವ ಆತ ವಾಪಸ್‌ಮಾಡಿರಲಿಲ್ಲ. ಈ ವಿಚಾರವಾಗಿ ಇವರಿಬ್ಬನ ನಡುವೆ ಸೋಮವಾರ ತಡರಾತ್ರಿ ವಾಗ್ವಾದವುಂಟಾಗಿತ್ತು. ಈ ಸಂದರ್ಭದಲ್ಲಿ ರೋಷಗೊಂಡ ಅಂಕುರ್, ಬಲವೀರ್‌ನನ್ನು ದೊಣ್ಣೆಗಳಿಂದ ಥಳಿಸಿ ಹತ್ಯೆ ಮಾಡಿದ್ದಾನೆ’’ ಎಂದು ಉಪ ಪೊಲೀಸ್ ಆಯುಕ್ತ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.
ಘರ್ಷಣೆ ನಡೆದ ಸಂದರ್ಭ ಅಂಕುರ್ ಜೊತೆಗೆ ಆತನ ಪತ್ನಿ ಕೂಡಾ ಜೊತೆಗಿದ್ದುದು ಸಿಸಿಟಿವಿಯಲ್ಲಿ ಕಂಡುಬಂದಿದ್ದು, ಆಕೆಯನ್ನು ಕೂಡಾ ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.





