ಕೇಂದ್ರದಿಂದ 14 ರಾಜ್ಯಗಳಿಗೆ ಆದಾಯ ಕೊರತೆಯ ಅನುದಾನ ಬಿಡುಗಡೆ

photo :NDTV
ಹೊಸದಿಲ್ಲಿ,ಸೆ.6: ಕೇಂದ್ರ ಸರಕಾರವು ಮಂಗಳವಾರ ಆಂಧ್ರಪ್ರದೇಶ, ಕೇರಳ, ಅಸ್ಸಾಂ,ರಾಜಸ್ಥಾನ ಹಾಗೂ ಪಶ್ಚಿಮಬಂಗಾಳ ಸೇರಿದಂತೆ 14 ರಾಜ್ಯಗಳಿಗೆ 7183.42 ಕೋಟಿ ರೂ. ಆದಾಯ ಕೊರತೆಯ ಅನುದಾನವನ್ನು ಬಿಡುಗಡೆಗೊಳಿಸಿದೆ.
‘ವಿಚಲನ ಆನಂತರದ ಆದಾಯ ಕೊರತೆ ’ (ಪಿಡಿಆರ್ಡಿ)ಯ ಅನುದಾನದ 6ನೇ ಮಾಸಿಕ ಕಂತಾಗಿ 14 ರಾಜ್ಯಗಳಿಗೆ ಒಟ್ಟು 7183.42 ಕೋಟಿ ರೂ.ಗಳನ್ನು ವೆಚ್ಚ ಇಲಾಖೆಯು ಬಿಡುಗಡೆಗೊಳಿಸಿದೆ. 15ನೇ ಹಣಕಾಸು ಆಯೋಗದ ಶಿಫಾರಸಿನನ್ವಯ ಈ ಅನುದಾನ ಬಿಡುಗಡೆಗೊಂಡಿದೆ ಎಂದು ಕೇಂದ್ರ ವಿತ್ತ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ವೆಚ್ಚ ಇಲಾಖೆಯು 12 ಮಾಸಿಕ ಕಂತುಗಳಲ್ಲಿ ಈ ಅನುದಾನವನ್ನು 14 ರಾಜ್ಯಗಳಿಗೆ ನೀಡಲಿದೆ. 2022-23ನೇ ಸಾಲಿನಲ್ಲಿ ರಾಜ್ಯಗಳಿಗೆ ವಿತರಿಸಲಾಗುವ ಆದಾಯ ಕೊರತೆ ಅನುದಾದ ಮೊತ್ತವು 43,100.50 ಕೋಟಿ ರೂ.ಗೆ ಏರಿದೆಯೆಂದು ವಿತ್ತ ಸಚಿವಾಲಯವು ತಿಳಿಸಿದೆ.
ಆಂಧ್ರಪ್ರದೇಶ, ಅಸ್ಸಾಂ, ಹಿಮಾಚಲಪ್ರದೇಶ, ಕೇರಳ, ಮಣಿಪುರ, ಮೇಘಾಲಯ, ಮಿರೆರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತ್ರಿಪುರಾ, ಉತ್ತರ ಖಂಡ ಹಾಗೂ ಪಶ್ಚಿಮ ಬಂಗಾಳ 2022-23ನೇ ಸಾಲಿನಲ್ಲಿ 15ನೇ ವೇತನ ಆಯೋಗದಿಂದ ಪಿಡಿಆರ್ಡಿ ಅನುದಾನಕ್ಕೆ ಶಿಫಾರಸು ಮಾಡಲ್ಪಟ್ಟ ರಾಜ್ಯಗಳಾಗಿವೆ.







