2020-21ನೇ ಸಾಲಿನ NSS ರಾಜ್ಯ ಪ್ರಶಸ್ತಿ ಪ್ರಕಟ: ಸಚಿವ ಡಾ.ನಾರಾಯಣಗೌಡ

ಬೆಂಗಳೂರು, ಸೆ.6: 2020-21ನೇ ಸಾಲಿನ ರಾಜ್ಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸೆಸ್) ಪ್ರಶಸ್ತಿ ಪುರಸ್ಕøತರ ಪಟ್ಟಿಯನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಘೋಷಿಸಿದ್ದಾರೆ.
2020-21ನೇ ಸಾಲಿನ ಎನ್ನೆಸೆಸ್ ರಾಜ್ಯ ಮಟ್ಟದ ಪ್ರಶಸ್ತಿಗೆ 2 ಅತ್ಯುತ್ತಮ ವಿಶ್ವವಿದ್ಯಾಲಯ, 12 ಅತ್ಯುತ್ತಮ ಘಟಕ ಹಾಗೂ ಕಾರ್ಯಕ್ರಮ ಸಂಯೋಜನಾಧಿಕಾರಿಗಳು ಮತ್ತು 12 ಅತ್ಯುತ್ತಮ ಸ್ವಯಂಸೇವಕ, ಸೇವಕಿಯರನ್ನು ಗುರುತಿಸಿ, ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ನಾರಾಯಣಗೌಡ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮುಖಾಂತರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ಅಭಿವೃದ್ಧಿ, ಸಮಾಜದ ಒಳಿತಿಗೆ ಎನ್ನೆಸೆಸ್ ಮೂಲಕ ಶ್ರಮಿಸುತ್ತಿರುವವರ ಸೇವೆಯನ್ನು ಪರಿಗಣಿಸಿ ಅತ್ಯುತ್ತಮ ವಿಶ್ವವಿದ್ಯಾಲಯ, ಕಾರ್ಯಕ್ರಮ ಅಧಿಕಾರಿ ಹಾಗೂ ಸ್ವಯಂ ಸೇವಕ, ಸೇವಕಿಯರನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಮಟ್ಟದ ಎನ್ನೆಸೆಸ್ ಪ್ರಶಸ್ತಿಯನ್ನು ಪ್ರತಿವರ್ಷ ರಾಜಭವನದ ಗಾಜಿನ ಮನೆಯಲ್ಲಿ ಪ್ರದಾನ ಮಾಡಲಾಗುತ್ತಿತ್ತು. ಆದರೆ, 2013 ರಿಂದ ಎನ್ನೆಸೆಸ್ ಪ್ರಶಸ್ತಿಯನ್ನು ರಾಜಭವನದಲ್ಲಿ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ 10 ವರ್ಷದ ಬಳಿಕ ಮತ್ತೆ ರಾಜಭವನದ ಗಾಜಿನ ಮನೆಯಲ್ಲಿ ಸೆ.10ರಂದು ಎನ್ನೆಸೆಸ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ನಾರಾಯಣಗೌಡ ತಿಳಿಸಿದ್ದಾರೆ.
ಎನ್ನೆಸೆಸ್ಸ್ ಸ್ವಯಂಸೇವಕರ ಸಂಖ್ಯೆ 5 ರಿಂದ 10 ಲಕ್ಷಕ್ಕೆ ವಿಸ್ತರಣೆ: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸದ್ಯ ಐದು ಲಕ್ಷ ಸ್ವಯಂ ಸೇವಕರನ್ನು ಹೊಂದಿದ್ದು, ಈ ವರ್ಷ 10 ಲಕ್ಷಕ್ಕೆ ವಿಸ್ತರಿಸಲಾಗುತ್ತದೆ. ಹಾಗೂ ಹೊಸ ಶಿಕ್ಷಣ ನೀತಿಯಲ್ಲಿ ಎನ್ನೆಸೆಸ್ ಪಠ್ಯಕ್ರಮದ ಒಂದು ಭಾಗವಾಗಿರೋದು ವಿಶೇಷ ಹಾಗೂ ಎನ್ನೆಸೆಸ್‍ಗೆ ಒಂದು ಬಲ ಬಂದಂತಾಗಿದೆ ಎಂದು ನಾರಾಯಣಗೌಡ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕøತರ ವಿವರ: ಅತ್ಯುತ್ತಮ ವಿಶ್ವವಿದ್ಯಾಲಯ-ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯ.
ಅತ್ಯುತ್ತಮ ಕಾರ್ಯಕ್ರಮಾಧಿಕಾರಿಗಳು(ಪುರುಷ) -ಹುಬ್ಬಳ್ಳಿಯ ವಿದ್ಯಾ ನಗರ ಜೈನ್ ಪದವಿ ಕಾಲೇಜಿನ ಪ್ರೊ.ಎಂ.ಎಸ್.ಹುಲಗೂರ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಕಾಲೇಜ್ ಆಫ್ ಹಾರ್ಟಿಕಲ್ಚರ್‍ನ ಡಾ.ಯಲ್ಲೇಶ್ ಕುಮಾರ್ ಎಚ್.ಎಸ್.
ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ.ಅಂಗಡಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ಸೋಮಶೇಖರ್ ಸಿ.ಕೆರಿಮನಿ, ಮಂಗಳೂರಿನ ನಂತೂರಿನ ಪಾದುವ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‍ಮೆಂಟ್‍ನ ಪ್ರೊ.ರೋಶನ್ ವಿನ್ಸಿ ಸಾಂತುಮಾಯರ್, ದೇರಳಕಟ್ಟೆಯಲ್ಲಿರುವ ಯೆನಪೋಯ ದಂತ ಕಾಲೇಜಿನ ಡಾ.ಇಮ್ರಾನ್ ಪಾಷ ಎಂ.
ಮೈಸೂರಿನ ಹುಣಸೂರು ಬೈಪಾಸ್ ರಸ್ತೆಯಲ್ಲಿರುವ ಶ್ರೀ ಡಿ.ದೇವರಾಜ ಅರಸು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಕಿರಣ್ ಕುಮಾರ್ ಸಿ.ಆರ್., ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಲೋಕೇಶ ನಾಯ್ಕ ಕೆ. ಹಾಗೂ ಶಿವಮೊಗ್ಗ ಜಿಲ್ಲೆಯ ಸರ್ ಎಂ.ವಿ.ರಸ್ತೆಯಲ್ಲಿರುವ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಡಾ.ಎಂ.ವೆಂಕಟೇಶ್ ಅವರನ್ನು ಅತ್ಯುತ್ತಮ ಕಾರ್ಯಕ್ರಮಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ.
ಅತ್ಯುತ್ತಮ ಕಾರ್ಯಕ್ರಮಾಧಿಕಾರಿಗಳು(ಮಹಿಳೆ): ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಸರಕಾರಿ ವಿಜ್ಞಾನ ಕಾಲೇಜಿನ ಡಾ.ಜ್ಯೋತಿ ಜಿ., ದಕ್ಷಿಣ ಕನ್ನಡ ಜಿಲ್ಲೆಯ ಮೊಂಡಂಕಾಪುನಲ್ಲಿರುವ ಕಾರ್ಮೆಲ್ ಕಾಲೇಜಿನ ಮಧುರಾ ಕೆ., ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅವ್ವೇರಹಳ್ಳಿಯಲ್ಲಿರುವ ಡಿ ಪಾಲ್ ಪ್ರಥಮ ದರ್ಜೆ ಕಾಲೇಜಿನ ಹೇಮಲತಾ ಬಿ.ಎನ್. ಹಾಗೂ ಧಾರವಾಡದ ಕೆಎಲ್‍ಇ ಸಂಸ್ಥೆಯ ಶ್ರೀಮೃತ್ಯುಂಜಯ ಕಲಾ ವಾಣಿಜ್ಯ ಮಹಾವಿದ್ಯಾಲಯದ ಡಾ.ತಾರಾ ಬಿ.ಎನ್. ಅವರನ್ನು ಅತ್ಯುತ್ತಮ ಕಾರ್ಯಕ್ರಮಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ.
ಅತ್ಯುತ್ತಮ ಸ್ವಯಂ ಸೇವಕ: ಬೆಂಗಳೂರಿನ ಎಎಸ್‍ಸಿ ಪದವಿ ಕಾಲೇಜಿನ ಪವನ್ ಆರ್., ಬೆಳಗಾವಿಯ ಕರ್ನಾಟಕ ಕಾನೂನು ಸೊಸೈಟಿಯ ಗೋಗಟೆ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಳಿನ್ ಪಾಟೀಲ್, ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನ ಮಲ್ಲಿಕಾರ್ಜುನ್ ಎಂ., ಮೈಸೂರಿನ ಸಾಧನಪುರದ ವಿಶ್ವಶಾಂತಿ ಪ್ರಥಮ ದರ್ಜೆ ಕಾಲೇಜಿನ ಭಾನು ಪ್ರಕಾಶ್, ಉಡುಪಿ ಜಿಲ್ಲೆಯ ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರದೀಪ್ ಹಾಗೂ ಧಾರವಾಡದ ಕಿಟೆಲ್ ವಿಜ್ಞಾನ ಕಾಲೇಜಿನ ಶಿವಯೋಗಿ ಹಾವೇರಿಯನ್ನು ಆಯ್ಕೆ ಮಾಡಲಾಗಿದೆ.
ಮಂಡ್ಯ ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಮಹಿಳಾ(ಸ್ವಾಯತ್ತ) ಕಾಲೇಜಿನ ಭಾವನಾ ಪಿ., ಶಿವಮೊಗ್ಗ ಜಿಲ್ಲೆಯ ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆಯ ಸಿ.ಡಿ.ರಕ್ಷಿತಾ, ಮಂಗಳೂರು ಸುರತ್ಕಲ್‍ನ ಗೋವಿಂದ ದಾಸ ಕಾಲೇಜಿನ ರಶ್ಮಿ ಜೆ.ಅಂಚನ್, ಬೆಳಗಾವಿಯ ಕೆಎಲ್‍ಇ ಆಫ್ ಫಾರ್ಮಸಿಯ ಅರ್ಪಣಾ ಎಸ್.ಪಾಟೀಲ್, ಧಾರವಾಡದ ಗುಡಗೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೀಪಾ ಎನ್.ಅಂಗಡಿ ಹಾಗೂ ಚಿಕ್ಕಮಗಳೂರಿನ ಮೂಡಿಗೆರೆಯ ತೋಟಗಾರಿಕೆ ಕಾಲೇಜಿನ ವಿದ್ಯಾ ಎನ್. ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







