ಸೌದಿ ಅರೇಬಿಯಾ; ಐಎಫ್ಎಫ್ ವತಿಯಿಂದ ಫ್ರೀಡಂ ಫೆಸ್ಟ್, ಅನಿವಾಸಿ ಭಾರತೀಯರ ಕುಟುಂಬ ಸಮ್ಮಿಲನ

ರಿಯಾದ್: ಇಂಡಿಯಾ ಫ್ರೆಟರ್ನಿಟಿ ಫೋರಮ್ ಸೌದಿಯಾದ್ಯಂತ ನಡೆಸುತ್ತಿರುವ "ಫ್ರೆಟರ್ನಿಟಿ ಫೆಸ್ಟ್ -2022" ಭಾಗವಾಗಿ IFF ಕರ್ನಾಟಕ ಚಾಪ್ಟರ್ ಅಭಾ, ಸೌದಿ ಅರೇಬಿಯಾ, ವತಿಯಿಂದ "ಫ್ರೀಡಂ ಫೆಸ್ಟ್-22" (ಜಶ್ನೇ ಆಝಾದೀ) ಎಂಬ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಅಭಾದ ಅಲ್ ಫಖಾಮ ಇಸ್ತಿರಾದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಇಂಡಿಯಾ ಫ್ರೆಟರ್ನಿಟಿ ಫೋರಮ್ (IFF) ಅಸೀರ್ ರೀಝನಲ್ ಅಧ್ಯಕ್ಷರಾದ ಸಲೀಂ ಗುರುವಾಯನಕೆರೆ ಉದ್ಘಾಟಿಸಿದರು.
ಸ್ವಾತಂತ್ರ್ಯ ಹೋರಾಟಗಾರರ ಭಿತ್ತಿ ಚಿತ್ರಗಳ ಪ್ರದರ್ಶನ, IFF ಸಾಮಾಜಿಕ ಕೆಲಸಕಾರ್ಯಗಳು ಹಾಗೂ ಮಹಿಳೆಯರ ಸ್ವರಚಿತ ಕ್ರಾಫ್ಟ್ ಗಳನ್ನೊಳಗೊಂಡ ವಸ್ತು ಪ್ರದರ್ಶನವನ್ನು ಇಂಡಿಯಾ ಫ್ರೆಟರ್ನಿಟಿ ಫೋರಮ್ ಅಸೀರ್ ರೀಝನಲ್ ಪ್ರಧಾನ ಕಾರ್ಯದರ್ಶಿಗಳಾದ ಶರಫುದ್ದೀನ್ ಮನ್ನಾರ್ ಕಾಡ್ ರವರು ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಡಿಯಾ ಫ್ರೆಟರ್ನಿಟಿ ಫೋರಮ್ IFF, ಜಿಝಾನ್ ಕರ್ನಾಟಕ ಚಾಪ್ಟರ್ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಕೂಳೂರು ವಹಿಸಿದ್ದರು.
ಮುಖ್ಯ ಭಾಷಣವನ್ನು ಮಾಡಿದ ಇಂಡಿಯನ್ ಸೋಷಿಯಲ್ ಫಾರಂ, ISF ರಾಷ್ಟ್ರೀಯ ಉಪಾಧ್ಯಕ್ಷರಾದ ನಝ್ರುಲ್ ಇಸ್ಲಾಂ ಚೌಧರಿಯವರು ಅಪಾಯದಲ್ಲಿರುವ ಇಂಡಿಯಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಾಂವಿಧಾನಿಕವಾಗಿ ಉಳಿಸಲು ಚಳುವಳಿಯೊಂದರ ಅನಿವಾರ್ಯತೆ ಇದೆ ಅದಕ್ಕಾಗಿ ಅನಿವಾಸಿ ಭಾರತೀಯರಾದ ನಮ್ಮ ಶ್ರಮ ಬಹುಮುಖ್ಯ ಎಂದರು.
ಅತಿಥಿ ಭಾಷಣ ನೆರವೇರಿಸಿದ IFF ಅಸೀರ್ ರೀಝನಲ್ ಅಧ್ಯಕ್ಷರಾದ ಸಲೀಂ ಗುರುವಾಯನಕೆರೆ ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದರೂ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳು ನನಸಾಗಲಿಲ್ಲ, ಅದನ್ನು ನನಸಾಗಿಸುವ ಜವಾಬ್ದಾರಿಯು ಇಂದಿನ ಕಾಲಘಟ್ಟದ ಅನಿವಾರ್ಯತೆಯಾಗಿದೆ ಎಂದರು.
ಸಾಮಾಜಿಕ ಸೇವಾರಂಗದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಇಂಡಿಯನ್ ಕಾನ್ಸುಲೇಟ್ ಕಮ್ಯುನಿಟಿ ವೆಲ್ಪೇರ್ (CCW) ಸದಸ್ಯರು ಹಾಗೂ ಇಂಡಿಯನ್ ಸೋಷಿಯಲ್ ಫಾರಂ ಅಭಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಹನೀಫ್ ಮಂಜೇಶ್ವರ ಇವರನ್ನು ಗೌರವದೊಂದಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಅಭಾ ಕಿಂಗ್ ಖಾಲಿದ್ ಯುನಿವರ್ಸಿಟಿಯ ಪ್ರೊ. ಡಾ. ಖುರ್ಷಿದ್, IFF ಅಭಾ ಕೇರಳ ಚಾಪ್ಟರ್ ಅಧ್ಯಕ್ಷರಾದ ಮಹಮ್ಮದ್ ಕೋಯ, IFF ಜಿಝಾನ್ ಕೇರಳ ಚಾಪ್ಟರ್ ಅಧ್ಯಕ್ಷರಾದ ಅಬ್ದುಲ್ ರಶೀದ್ ಎರುಮೇಲಿ, ಇಂಡಿಯನ್ ಸೋಷಿಯಲ್ ಫೋರಮ್ ಅಭಾ ಕೇರಳ ರಾಜ್ಯ ಸಮಿತಿಯ ಅಧ್ಯಕ್ಷರಾದ ಹನೀಫಾ ಚಾಳಿಪ್ಪುರಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು ನಡೆಯಿತು.
IFF ಅಭಾ ಉತ್ತರ ಇಂಡಿಯಾ ಘಟಕದ ಅಧ್ಯಕ್ಷರಾದ ಮಾಮೂನ್ ಸಾಬ್ ಸ್ವಾಗತಿಸಿ, ಜಿಝಾನ್ ಕರ್ನಾಟಕ ಚಾಪ್ಟರ್ ಪ್ರಧಾನ ಕಾರ್ಯದರ್ಶಿ ಅಶ್ಫಾಕ್ ವಂದಿಸಿದರು. ಅಬ್ದುಲ್ ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.








.jpeg)
.jpeg)
.jpeg)




.jpeg)
.jpeg)


