ಸುಳ್ಯ | ಮನೆಗೆ ಬೆಂಕಿ ತಗುಲಿ ವ್ಯಕ್ತಿಯೋರ್ವ ಸಜೀವ ದಹನ

ಸುಳ್ಯ, ಸೆ.7: ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ವ್ಯಕ್ತಿಯೋರ್ವರು ಸಜೀವ ದಹನಗೊಂಡ ಘಟನೆ ಸುಳ್ಯ ತಾಲೂಕಿನ ಐವರ್ನಾಡಿನ ಪರ್ಲಿಕಜೆ ಎಂಬಲ್ಲಿ ಬುಧವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ಐವರ್ನಾಡಿನ ಪರ್ಲಿಕಜೆ ಸುಧಾಕರ್ (47) ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮೂಡಿಗೆರೆ | ಟ್ರ್ಯಾಕ್ಟರ್ ಗೆ ತಗುಲಿದ ವಿದ್ಯುತ್ ತಂತಿ: ಇಬ್ಬರು ಯುವತಿಯರ ಸಹಿತ ಮೂವರು ಮೃತ್ಯು
ಇಂದು ಬೆಳಿಗ್ಗೆ ಸುಧಾಕರ್ ಮನೆಯಲ್ಲಿದ್ದು, ಅವರ ಪತ್ನಿ ಎಂದಿನಂತೆ ರಬ್ಬರ್ ಟ್ಯಾಪಿಂಗ್‌ಗೆಂದು ತೆರಳಿದ್ದರೆನ್ನಲಾಗಿದೆ. ಮನೆಯಲ್ಲಿ ಬೇರೆ ಯಾರೂ ಇಲ್ಲದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದ್ದು, ಮನೆಯ ಒಂದು ಪಾರ್ಶ್ವ ಬೆಂಕಿಗಾಹುತಿಯಾಗಿದೆ.
ಬೆಂಕಿಗೆ ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Next Story





