ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ ತೇಲಿಬಂತು ಮಹಿಳೆಯ ಮೃತದೇಹ

ಬೆಳ್ತಂಗಡಿ, ಸೆ.7 : ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ತೇಲಿ ಬಂದ ಘಟನೆ ಬುಧವಾರ ಸಂಭವಿಸಿದೆ
ಬೆಳಾಲು ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮೃತದೇಹವನ್ನು ಮೇಲೆತ್ತಿದ್ದಾರೆ.
ನದಿಯಲ್ಲಿ ಭಾರೀ ನೀರು ಹರಿಯುತ್ತಿದ್ದು, ಎಲ್ಲಿಂದಲೋ ಮೃತದೇಹ ಕೊಚ್ಚಿಕೊಂಡು ಬಂದಿರಬಹುದೆಂದು ಶಂಕಿಸಲಾಗಿದೆ.
ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Next Story