ಬೆಳಗಾವಿ: ತಂದೆಯನ್ನೇ ಕೊಲೆಗೈದ ಮಗ

ಬೆಳಗಾವಿ, ಸೆ.7: ಕ್ಷುಲ್ಲಕ ಕಾರಣಕ್ಕೆ ತಂದೆಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ದಾರುಣ ಘಟನೆ ಬೈಲಹೊಂಗಲದ ಶಿವಾನಂದ ಭಾರತಿ ನಗರದ ಸತ್ಯ ಮಾರ್ಗದಲ್ಲಿ ನಡೆದಿದೆ.
ಶಿವಾನಂದ ಭಾರತಿ ನಗರದ ರುದ್ರಪ್ಪ ತಲಳವಾರ(55) ಕೊಲೆಯಾದವರು ಎಂದು ಪೊಲೀಸರು ಗುರುತಿಸಿದ್ದಾರೆ.ಕೃತ್ಯ ನಡೆಸಿದ ಅವರ ಪುತ್ರ ಸಂತೋಷ ರುದ್ರಪ್ಪ ತಳವಾರ(30)ನನ್ನು ಬೈಲಹೊಂಗಲ ಪೊಲೀಸರು ಬಂಧಿಸಿದ್ದಾರೆ.
ರುದ್ರಪ್ಪ ಹಾಗೂ ಪತ್ನಿ ಮಹಾದೇವಿ(50) ಮಂಗಳವಾರ ತಡರಾತ್ರಿ ಜಗಳ ನಡೆದಿದ್ದು, ಆಗ ಪತ್ನಿ ಗಾಯಗೊಂಡಿದ್ದರು. ಬಳಿಕ ಪುತ್ರ ತಾಯಿಯನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದ್ದರು. ತದನಂತರ, ಆಸ್ಪತ್ರೆ ಶುಲ್ಕ ಪಾವತಿಸಲು ತಂದೆಯ ಬಳಿ ಹಣ ಕೇಳಿದ್ದಾನೆ. ಆಗ ಮಾತಿಗೆ, ಮಾತು ಬೆಳೆದು ಸಂತೋಷ ತಂದೆಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ ಎಂದು ಹೇಳಲಾಗುತ್ತಿದೆ.
Next Story





