ಯಕ್ಷಗುರು ಶ್ರೀಧರ ಹಂದೆಗೆ ಮುದ್ದಣ ಪ್ರಶಸ್ತಿ

ಶ್ರೀಧರ ಹಂದೆ
ಉಡುಪಿ, ಸೆ.7: ಬೆಂಗಳೂರಿನ ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನೀಡುವ 2021ನೇ ಸಾಲಿನ ಮಹಾಕವಿ ಮುದ್ದಣ ಪ್ರಶಸ್ತಿಗೆ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕರಲ್ಲಿ ಒಬ್ಬರಾದ, ನಿವೃತ್ತ ಶಿಕ್ಷಕ, ಯಕ್ಷಗುರು ಎಚ್. ಶ್ರೀಧರ ಹಂದೆ ಭಾಜನರಾಗಿದ್ದಾರೆ.
86ರ ಹರೆಯದ ಹಂದೆ ಅವರು ಮೂರು ದಶಕಗಳಿಗೂ ಅಧಿಕ ಹಂಗಾರಕಟ್ಟೆ ಚೇತನ ಪ್ರೌಢ ಶಾಲೆಯ ಹಿಂದಿ ಅಧ್ಯಾಪಕರಾಗಿದ್ದರು. ಕಾರ್ಕಡ ಶ್ರೀನಿವಾಸ ಉಡುಪರೊಂದಿಗೆ 1975ರಲ್ಲಿ ಸಾಲಿಗ್ರಾಮ ಮಕ್ಕಳ ಮೇಳವನ್ನು ಕಟ್ಟಿ, ಯಕ್ಷಗಾನವನ್ನು ವಿದೇಶಕ್ಕೆ ಕೊಂಡೊಯ್ದ ದಾಖಲೆಗೆ ಪಾತ್ರರಾದವರು. ಭಾಗವತ, ಮದ್ದಲೆಗಾರ ಮಾತ್ರವಲ್ಲದೆ ಸ್ವತಃ ವೇಷಧಾರಿಯೂ ಆಗಿದ್ದಾರೆ.
ಹಂದೆ ಅವರಿಗೆ ಸೆ.18ರಂದು ಬೆಂಗಳೂರಿನಲ್ಲಿ ನಡೆಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 25000 ರೂ. ನಗದು ಪುರಸ್ಕಾರದೊಂದಿಗೆ ಮುದ್ದಣ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪ್ರಕಟಣೆ ತಿಳಿಸಿದೆ.
Next Story





