ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ: ಪ.ಬಂಗಾಳ ಸಚಿವ ಮೊಲೊಯ್ ಘಾತಕ್ ನಿವಾಸಗಳ ಮೇಲೆ ಸಿಬಿಐ ದಾಳಿ

ಹೊಸದಿಲ್ಲಿ, ಸೆ.7: ಅಸಾನ್‌ಸೋಲ್‌ನ ಖಾಸಗಿ ಕಂಪೆನಿಯೊಂದರ ಗಣಿಯಿಂದ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮಬಂಗಾಳದ ಕಾನೂನು ಸಚಿವ ಮೊಲೊಯ್ ಘಾತಕ್ ಅವರ ನಿವಾಸಗಳ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಬುಧವಾರ ಶೋಧ ಕಾರ್ಯಾಚರಣೆ ನಡೆಸಿತು.
ಪಶ್ಚಿಮ ಬರ್ದಾಮಾನ್ ಜಿಲ್ಲೆಯ ಅಸಾನ್‌ಸೋಲ್ ನಗರದಲ್ಲಿ ಘಾತಕ್‌ಗೆ ಸೇರಿದ ಮನೆಗಳ ಮೇಲೆ ಸಿಬಿಐ ತಂಡ ದಾಳಿ ನಡೆಸಿದೆ. ಕೋಲ್ಕತಾದ ಲೇಕ್‌ಗಾರ್ಡನ್ಸ್ ಪ್ರದೇಶದಲ್ಲಿರುವ ಅವರ ನಿವಾಸದ ಮೇಲೂ ಶೋಧ ಕಾರ್ಯಾಚರಣೆ ನಡೆದಿರುವುದಾಗಿ ‘ ದಿ ಕ್ವಿಂಟ್’ ಸುದ್ದಿಜಾಲತಾಣ ವರದಿ ಮಾಡಿದೆ.
ಅಸಾನ್‌ಸೋಲ್‌ನಲ್ಲಿರುವ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ ಗಣಿಗಳಿಂದ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ಕಾರ್ಯಾಚರಣೆ ನಡೆದಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಇದೇ ಪ್ರಕರಣದ ಕುರಿತಾಗಿ ಸೆಪ್ಟೆಂಬರ್ 2ರಂದು ತೃಣಮೂಲ ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸಿತ್ತು ಅಭಿಷೇಕ್ ಬ್ಯಾನರ್ಜಿ ಅವರು ಈವರೆಗೆ ಸಿಬಿಐ ಮುಂದೆ ಮೂರು ಸಲ ಹಾಜರಾಗಿದದ್ದಾರೆ.
ಈ ಪ್ರಕರಣನ್ಲ ಕಪ್ಪುಹಣ ಬಿಳುಪು ಅವ್ಯವಹಾ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದರೆ, ಸಿಬಿಐ ಪ್ರಕರಣದ ಕ್ರಿಮಿನಲ್ ಅಂಶಳ ಬಗ್ಗೆ ತನಿಖೆ ನಡೆಸುತ್ತಿದೆ.
ಈ ಪ್ರಕರಣದಲ್ಲಿ ಬಿಜೆಪಿಯು ತೃಣಮೂಲ ನಾಯಕರನ್ನು ಸಿಕ್ಕಿಸಿಹಾಕಲು ಪ್ರಯತ್ನಿಸುತ್ತಿದೆಯೆಂದು ಆಗಸ್ಟ್ 29ರಂದು ಟಿಎಂಸಿ ಅಧ್ಯಕ್ಷೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪಾದಿಸಿದ್ದಾರೆ. ಬಿಜೆಪಿಯು ಕೇಂದ್ರೀಯ ತನಿಖಾ ಏಜೆನ್ಸಿಗಳನ್ನು ಹಾಗೂ ಅಕ್ರಮ ಹಣವನ್ನು ಬಳಸಿಕೊಂಡು ಇತರ ರಾಜಕೀಯ ಪಕ್ಷಗಳು ನಡೆಸುತ್ತಿರುವ ರಾಜ್ಯ ಸರಕಾರಗಳನ್ನು ಉರುಳಿಸಲು ಯತ್ನಿಸುತ್ತಿವೆ ಎಂದರು.







