ಸೆ.8, 9ರಂದು ದ.ಕ.ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್: ಹವಾಮಾನ ಇಲಾಖೆ

ಮಂಗಳೂರು, ಸೆ.7:ದ.ಕ. ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ಮುಂಜಾನೆಯವರೆಗೆ ಸತತ ಮಳೆಯಾಗಿದೆ. ಬಳಿಕ ಬಿಡುವು ಪಡೆದ ಮಳೆಯು ಸಂಜೆಯ ವೇಳೆಗೆ ಮತ್ತೆ ಬಿರುಸು ಪಡೆದಿದೆ.
ಬುಧವಾರ ಹಗಲು ವೇಳೆ ಮೋಡ ಕವಿದ ವಾತಾವರಣವಿತ್ತು. ಹವಾಮಾನ ಇಲಾಖೆಯು ಬುಧವಾರಕ್ಕೆ ರೆಡ್ ಅಲರ್ಟ್ ಘೋಷಿಸಿತ್ತು. ಆದರೆ ಬಳಿಕ ಅದು ಆರೆಂಜ್ ಅಗಿ ಬದಲಾಗಿದೆ. ದ.ಕ.ಜಿಲ್ಲೆಯಲ್ಲಿ ಸೆ.8, 9ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮುಂಗಾರು ಮತ್ತೆ ಚುರುಕಾಗುತ್ತಿದ್ದು, ವಿವಿಧೆಡೆ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ. ಬುಧವಾರ ಮಂಗಳೂರಿನಲ್ಲಿ ಗರಿಷ್ಠ 27.2 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Next Story





