ಸೆ.25ರಂದು ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಏಕತಾ ಸಮಾವೇಶ

photo : the news indian express
ಹೊಸದಿಲ್ಲಿ,ಸೆ.7: ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಏಕತೆಯನ್ನು ಪ್ರದರ್ಶಿಸಲು ಸೆಪ್ಟೆಂಬರ್ 25ರಂದು ತಾನು ಹರ್ಯಾಣದ ಫತೇಹಾಬಾದ್ನಲ್ಲಿ ಆಯೋಜಿಸಿರುವ ರ್ಯಾಲಿಯಲ್ಲಿ ಭಾಗವಹಿಸುವಂತೆ ವಿಪಕ್ಷ ನಾಯಕರಾದ ಶರದ್ಪವಾರ್, ಅಖಿಲೇಶ್ ಯಾದವ್ ಹಾಗೂ ಫಾರೂಕ್ ಅಬ್ದುಲ್ಲಾ ಅವರನ್ನು ಆಹ್ವಾನಿಸಿರುವುದಾಗಿ ಭಾರತೀಯ ಲೋಕದಳ (ಐಎನ್ಎಲ್ಡಿ) ತಿಳಿಸಿದೆ.
ಮಾಜಿ ಪ್ರಧಾನಿ, ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ, ಶಿರೋಮಣಿ ಅಕಾಲಿದಳದ ಹಿರಿಯ ನಾಯಕ ಪ್ರಕಾಶ್ ಸಿಂಗ್ ಬಾದಲ್ ಹಾಗೂ ಮೇಘಾಲಯದ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರಿಗೂ ರ್ಯಾಲಿಯಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆಯೆಂದು ಐಎನ್ಎಲ್ಡಿಯ ಪ್ರಧಾನ ಕಾರ್ಯದರ್ಶಿ ಅಭಯ್ ಚೌಟಾಲಾ ಬುಧವಾರ ಹೊಸದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಹಾಗೂ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಆಹ್ವಾನವನ್ನು ಕಳುಹಿಸಲಾಗಿದೆಯೆಂದು ಚೌಟಾಲಾ ತಿಳಿಸಿದರು.
‘‘ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೀ ಜೊತೆ ಮಾತುಕತೆ ವೇಳೆ ಐಎನ್ಎಲ್ಡಿ ವರಿಷ್ಠ ಓ.ಪಿ.ಚೌಟಾಲಾ ಅವರು ಸೆಪ್ಟೆಂಬರ್ 25ರಂದು ಫತೇಹಾಬಾದ್ನಲ್ಲಿ ನಡೆಯುವ ಸಭೆಗೆ ಅವರನ್ನು ಆಹ್ವಾನಿಸಿದ್ದರು ಹಾಗೂ ಆ ಸಭೆಯಲ್ಲಿ ಪಾಲ್ಗೊಳ್ಳಲು ನಿತೀಶ್ಕುಮಾರ್ ಸಮ್ಮತಿಸಿದ್ದರು’’ ಎಂದು ಚೌಚಾಲಾ ಹೇಳಿದರು.
ಈ ಸಭೆಯಲ್ಲಿ ನಿತೀಶ್ಕುಮಾರ್ ಅವರು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಜೊತೆ ಭಾಗವಹಿಸಲಿದ್ದಾರೆಂದು ಜೆಡಿಯು ನಾಯಕ ಕೆ.ಸಿ.ತ್ಯಾಗ ದೃಢಪಡಿಸಿದ್ದಾರೆ.
ಮಾಜಿ ಉಪಪ್ರಧಾನಿ ದೇವಿಲಾಲ್ಅ ವರ ಹುಟ್ಟುಹಬ್ಬದ ಅಂಗವಾಗಿ ನಡೆಲಿರುವ ಈ ರ್ಯಾಲಿಯಲ್ಲಿ ಹಲವಾರು ಪ್ರತಿಪಕ್ಷ ನಾಯಕರು ಒಂದೇ ವೇದಿಕೆಯಲ್ಲಿ ಒಗ್ಗೂಡಲಿದ್ದಾರೆ ಹಾಗೂ ವಿವಿಧ ವಿಷಯಗಳ ಬಗ್ಗೆಚರ್ಚಿಸಲು ಇದು ಸೂಕ್ತ ಸಂದರ್ಭವಾಗಲಿದೆ’’ ಎಂದು ತ್ಯಾಗಿ ತಿಳಿಸಿದ್ದಾರೆ.
ಬಿಜೆಪಿಯ ಆಡಳಿತದಿಂದ ಜನರು ಬೇಸತ್ತುಗೊಂಡಿದ್ದು ಎಂದು ಹೇಳಿದ ಓ.ಪಿ.ಚಟೌಟಾಲಾ ಅವರು, ದೇಶದಲ್ಲಿ ಕೇಂದ್ರದ ಆಡಳಿತಾರೂಢ ಪಕ್ಷವನ್ನು ವಿರೋಧಿಸುವಂತಹ ವಾತಾವರಣ ಈಗ ಇದೆ ಎಂದರು.
ಸೆಪ್ಟೆಂಬರ್ 25ರ ರ್ಯಾಲಿಯು ಪ್ರತಿಪಕ್ಷಗಳ ಏಕತೆಯನ್ನು ಪ್ರದರ್ಶಿಸುವುದಲ್ಲದೆ ಬಿಜೆಪಿ ಸಕಾರದ ವಿರುದ್ಧದ ಆಕ್ರೋಶವನ್ನು ಕೂಡಾ ಅಭಿವ್ಯಕ್ತಗೊಳಿಸಲಿದೆ ಎಂದವು ಹೇಳಿದರು. ಬಿಜೆಪಿ ವಿರುದ್ಧ ಹೋರಾಡಲು ಎಲ್ಲಾ ಸಮಾಜವಾದಿ ಹಾಗೂ ಹಿಂದಿನ ಜನತಾದಳ ನಾಯಕರು ಒಂದೇ ವೇದಿಕೆಯಡಿ ಬರಬೇಕೆಂದು ಚೌಟಾಲಾ ಕರೆ ನೀಡಿದರು.







