ಮಹಿಳೆ ಆತ್ಮಹತ್ಯೆ

ಕಾರ್ಕಳ, ಸೆ.7: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಸೆ.6ರಂದು ಸಂಜೆ ವೇಳೆ ನಿಟ್ಟೆ ಗ್ರಾಮದ ಪರ್ಪಲೆ ಎಂಬಲ್ಲಿ ನಡೆದಿದೆ.
ಮೃತರನ್ನು ಜಾರ್ಜ್ ಡಿಸೊಜ ಹಾಗೂ ರೀಟಾ ದಂಪತಿಯ ಪುತ್ರಿ ರೆನಿಟಾ (32) ಎಂದು ಗುರುತಿಸಲಾಗಿದೆ.
ರೆನಿಟಾ 11 ವರ್ಷಗಳ ಹಿಂದೆ ಮುಲ್ಕಿಯ ಕಿರಣ್ ಜೊತೆ ಮದುವೆಯಾಗಿ 6 ವರ್ಷದಲ್ಲೆ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನ ಪಡೆದಿದ್ದರು. ಕಳೆದ 2-3 ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾದ ಅವರು, ಮನೆಯ ಹಿಂಬದಿ ಹಾಡಿಯಲ್ಲಿದ್ದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





