Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪೀಸ್ ವರ್ಕ್ ಮಾದರಿಯ ಕಾಮಗಾರಿಯಲ್ಲಿ...

ಪೀಸ್ ವರ್ಕ್ ಮಾದರಿಯ ಕಾಮಗಾರಿಯಲ್ಲಿ ಅಕ್ರಮಕ್ಕೆ ದಾರಿ?

ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ವಿಶ್ವವಿದ್ಯಾನಿಲಯದ ಕಾಮಗಾರಿ

ಜಿ.ಮಹಾಂತೇಶ್ಜಿ.ಮಹಾಂತೇಶ್8 Sept 2022 9:20 AM IST
share
ಪೀಸ್ ವರ್ಕ್ ಮಾದರಿಯ ಕಾಮಗಾರಿಯಲ್ಲಿ ಅಕ್ರಮಕ್ಕೆ ದಾರಿ?

ಬೆಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ವಿಶ್ವವಿದ್ಯಾನಿಲಯದ ಸುಂದರೀಕರಣ, ಲ್ಯಾಂಡ್ ಸ್ಕೇಪಿಂಗ್, ಕಟ್ಟಡಗಳ ಒಳಾಂಗಣ ವಿನ್ಯಾಸ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಪೀಸ್ ವರ್ಕ್ ಮಾದರಿಯಲ್ಲಿ ನೀಡಲು ಮುಂದಾಗಿರುವ ಸರಕಾರವು ಅಕ್ರಮಕ್ಕೆ ದಾರಿಮಾಡಿಕೊಟ್ಟಿದೆ ಎನ್ನಲಾಗಿದೆ.

ಕರ್ನಾಟಕ ಪಾರದರ್ಶಕತೆ ನಿಯಮ 1999ರ ನಿಯಮ 4ರಡಿ (ಇ-4) 2 ಕೋಟಿ ರೂ. ಮೀರದಂತೆ ಕಾಮಗಾರಿಯನ್ನು ವಹಿಸಲು ಅವಕಾಶವಿದೆ. ಆದರೀಗ ಈ ಕಾಯ್ದೆಯನ್ನೂ ಉಲ್ಲಂಘಿಸಲು ಹೊರಟಿರುವ ಸರಕಾರವು ನಿಗದಿತ ಮಿತಿಯನ್ನೂ ಮೀರಿ ಕಾಮಗಾರಿಯನ್ನು ಕ್ರಿಡಿಲ್‌ಗೆ ವಹಿಸಲು ನಿರ್ಧರಿಸಿರುವುದರ ಹಿಂದೆ ಕಮಿಷನ್ ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.

ನಿಗದಿತ ಅವಧಿಯೊಳಗೆ ಅಂದಾಜುಪಟ್ಟಿ ಸಲ್ಲಿಸದೇ ಇದ್ದರೂ ಕಾಮಗಾರಿ ಪೂರ್ಣಗೊಂಡ ನಂತರ ಕಾಮಗಾರಿಗೆ ಘಟನೋತ್ತರ ಅನುಮೋದನೆ ಪಡೆದು ಅನುದಾನ ಬಿಡುಗಡೆ ಮಾಡಿಸಿಕೊಳ್ಳಲು ವಿಶ್ವವಿದ್ಯಾನಿಲಯವು ಮುಂದಾಗಿರುವುದು ಸಂದೇಹಕ್ಕೆ ಆಸ್ಪದಕ್ಕೆ ಕಾರಣವಾಗಿದೆ.

ಕಾಮಗಾರಿಗಳಿಗೆ ಒಂದೇ ಬಾರಿ ಅನುಮೋದನೆ ನೀಡದೇ ಎರಡು ಬಾರಿ ಕಾಮಗಾರಿ ನಡೆಸುವುದರಿಂದ ಇದು ಆಕ್ಷೇಪಣೆಗೆ ಒಳಗಾಗಲಿದೆ ಎಂಬ ತಿಳಿವಳಿಕೆಯನ್ನು  ಸರಕಾರವು ಮರೆತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೂ ಉನ್ನತ ಶಿಕ್ಷಣ ಸಚಿವ ಡಾ.ಸಿ. ಎನ್.ಅಶ್ವತ್ಥ ನಾರಾಯಣ್ ಅವರು  ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ  ‘the-file.in'ಗೆ ಕೆಲ ದಾಖಲೆಗಳು ಲಭ್ಯವಾಗಿವೆ.

ಪ್ರಕರಣದ ವಿವರ: ವಿಶ್ವವಿದ್ಯಾನಿಲಯದ ವಿವಿಧ ಕಾಮಗಾರಿಗಳಿಗೆ ವಿವಿಧ ಆದೇಶಗಳಲ್ಲಿ ಒಟ್ಟಾರೆ ೧೮೨. ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. (ಆದೇಶ ಸಂಖ್ಯೆ: ED 466 UBV 2017 DATED 17.03.2018) ಈ ಪೈಕಿ ಲ್ಯಾಂಡ್ ಸ್ಕೇಪ್, ರಸ್ತೆ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ 18.17 ಕೋಟಿ ರೂ.ಗಳಿಗೆ (ಆದೇಶ ಸಂಖ್ಯೆ: ED 33 UBV 2021 DATED 17.13.2021) ನೀಡಲಾಗಿತ್ತು. ಅಲ್ಲದೆ ಈ ಅಂದಾಜನ್ನು ಪರಿಷ್ಕರಿಸಿದ್ದ ಅಧಿಕಾರಿಗಳು ಮತ್ತೆ ೪.೩೦ ಕೋಟಿ ರೂ.ಅನುಮೋದನೆ ಪಡೆದುಕೊಂಡಿದ್ದರು. ಇದರಲ್ಲಿ ಲ್ಯಾಂಡ್ ಸ್ಕೇಪಿಂಗ್ ಕಾಮಗಾರಿಗಾಗಿ ೧೮,೮೨,೮೦೦ ರೂ. ಎಂದು ನಿಗದಿಪಡಿಸಿದ್ದರು ಎಂಬುದು ಲಭ್ಯವಿರುವ ದಾಖಲೆಗಳಿಂದ ತಿಳಿದು ಬಂದಿದೆ.

 ಆದರೆ, ಅಧಿಕಾರಿಗಳು ಪುನಃ ವಿಶ್ವವಿದ್ಯಾನಿಲಯದ ಸುಂದರೀಕರಣ ಮತ್ತು ಲ್ಯಾಂಡ್ ಸ್ಕೇಪಿಂಗ್‌ಗಾಗಿ 80,00,000 ರೂ. (ಆದೇಶ ಸಂಖ್ಯೆ: ED 126 HPU 2021(1) DATED 10.04.2022) ನಿಗದಿಗೊಳಿಸಿದ್ದರು. ಇದಕ್ಕೆ ಅನುಮೋದನೆ ಪಡೆಯುವ ಸಂಬಂಧ ಲೆಕ್ಕಾಧಿಕಾರಿಗಳಿಗೆ ಕಡತ ಸಲ್ಲಿಸಿದ್ದ ಅಧಿಕಾರಿಗಳು 1,21,00,000 ಮೊತ್ತಕ್ಕೆ ಮತ್ತು  ಲ್ಯಾಂಡ್ ಸ್ಕೇಪಿಂಗ್‌ಗಾಗಿ ಅಂದಾಜು 20.56 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ವಿವರಣೆ ನೀಡಿದ್ದರು.

ಒಂದೇ ಕಾಮಗಾರಿಗೆ ನಾಲ್ಕು ಬಾರಿ ಆದೇಶಗಳನ್ನು ಹೊರಡಿಸಲಾಗಿದೆ. ಇದರಲ್ಲಿ ಲ್ಯಾಂಡ್ ಸ್ಕೇಪಿಂಗ್ ಕಾಮಗಾರಿಗಳು ಪ್ರತ್ಯೇಕವಾಗಿವೆಯೇ ಎಂಬ ಕುರಿತು ಕಡತದಲ್ಲಿ ಯಾವುದೇ ಮಾಹಿತಿ ನೀಡಿರಲಿಲ್ಲ ಮತ್ತು ಇದನ್ನು ದೃಢೀಕರಿಸಿರಲಿಲ್ಲ ಎಂಬ ಅಂಶವು ಲಭ್ಯವಿರುವ ದಾಖಲೆಯಿಂದ ಗೊತ್ತಾಗಿದೆ.

‘ಸುಂದರೀಕರಣ ಮತ್ತು ಲ್ಯಾಂಡ್ ಸ್ಕೇಪಿಂಗ್‌ಗಾಗಿ 80,00,000 ನಿಗದಿಗೊಳಿಸಿ ಕ್ರಿಡಿಲ್‌ಗೆ ನೀಡಿದ್ದು ಮತ್ತೆ 1,21,00,000 ರೂ.ಮೊತ್ತ ಲ್ಯಾಂಡ್ ಸ್ಕೇಪಿಂಗ್ ಅಳವಡಿಸಿ ಸುಂದರೀಕರಣಗೊಳಿಸಲು ಕ್ರಿಡಿಲ್ಗೆ ನೀಡಿದ್ದು ಒಂದೇ ಬಾರಿ ಅನುಮೋದನೆ ನೀಡದೇ ೨ ಬಾರಿ ಕಾಮಗಾರಿ  ನೀಡಿರುವುದರಿಂದ ಮುಂದೆ Spilt of work ಎಂದು ಆಡಿಟ್ ಸಮಯದಲ್ಲಿ ಆಕ್ಷೇಪಣೆ ವ್ಯಕ್ತವಾಗುವುದಿಲ್ಲವೇ’ ಎಂದು ಲೆಕ್ಕಾಧಿಕಾರಿಗಳು ಪ್ರಶ್ನಿಸಿರುವುದು ತಿಳಿದು ಬಂದಿದೆ. ಅಷ್ಟೇ ಅಲ್ಲ ’ಎರಡು ಕಾಮಗಾರಿಯನ್ನು ಕ್ರಿಡಿಲ್‌ಗೆ ನೀಡಿದ್ದು ೨ ಕಾಮಗಾರಿಯನ್ನು ಒಗ್ಗೂಡಿಸಿದ್ದಲ್ಲಿ ೨.೦೧ ಕೋಟಿ ರೂ. ಆಗಲಿದ್ದು ಕ್ರಿಡಿಲ್‌ಗೆ ಕೆಟಿಪಿಪಿ ನಿಯಮ ೧೯೯೯ರ ನಿಯಮ ೪ರ ಅಡಿ (ಇ-೪) ಅವಕಾಶದನ್ವಯ ೨ ಕೋಟಿ ರೂ.ಮೀರದಂತೆ ಕಾಮಗಾರಿಯನ್ನು ವಹಿಸಲು ಮಾತ್ರ ಅವಕಾಶವಿದೆ. ನಿಗದಿತ ಮಿತಿಯನ್ನು ಮೀರಿ ಕಾಮಗಾರಿಯನ್ನು ವಹಿಸಿದಂತೆ ಅಗುವುದಿಲ್ಲವೇ ಎಂಬ ಬಗ್ಗೆ ಪರಿಶೀಲಿಸಬೇಕ’ ಎಂದು 2022ರ ಸೆ.3ರಂದು ಲೆಕ್ಕಾಧಿಕಾರಿಗಳು ಟಿಪ್ಪಣಿಯಲ್ಲಿ ನವೂದಿಸಿದ್ದರು ಎಂದು ಗೊತ್ತಾಗಿದೆ.

ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ವಿಶ್ವವಿದ್ಯಾನಿಲಯವು ಲ್ಯಾಂಡ್ ಸ್ಕೇಪಿಂಗ್ ಮತ್ತು ಸುಂದರೀಕರಣಗೊಳಿಸುವ ಕಾಮಗಾರಿಗೆ ಅಂದಾಜು ಪಟ್ಟಿ ಸಲ್ಲಿಸಬೇಕು ಎಂದು 2022ರ ಮಾರ್ಚ್ 18ರಂದೇ ಕ್ರಿಡಿಲ್‌ಗೆ ಸೂಚಿಸಿತ್ತು. ಆದರೆ ನಾಲ್ಕು ತಿಂಗಳ ನಂತರ ಅಂದರೆ 2022ರ ಜುಲೈ 7 ರಂದು ಅಂದಾಜು ಪಟ್ಟಿಯನ್ನು ಆಡಳಿತಾತ್ಮಕ ಮಂಜೂರಾತಿಗೆ ಸಲ್ಲಿಸಲಾಗಿತ್ತು.

ವಿಶ್ವವಿದ್ಯಾನಿಲಯವು ನಿಗದಿತ ಕಾರ್ಯಕ್ರಮದ ಸಾಕಷ್ಟ ಅವಧಿಯ ಪೂರ್ವದಲ್ಲೇ ಅಂದಾಜು ಪಟ್ಟಿಯನ್ನು ಸಲ್ಲಿಸಲು ಕೋರಿದ್ದರೂ ಕ್ರಿಡಿಲ್ ಸಂಸ್ಥೆಯು ನಿಗದಿತ ಕಾರ್ಯಕ್ರಮದ ನಂತರ ಅಂದಾಜು ಪಟ್ಟಿಯನ್ನು ಸಲ್ಲಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

‘ನಿಗದಿತ ಅವಧಿಯೊಳಗೆ ಅಂದಾಜು ಪಟ್ಟಿ ಸಲ್ಲಿಸದೇ ಆ ನಂತರ ಸಲ್ಲಿಸಿದ್ದ ಅಂದಾಜು ಪಟ್ಟಿಯಲ್ಲಿ 8,11,942 ರೂ. ಮೊತ್ತವನ್ನು 9 ತಿಂಗಳ ನಿರ್ವಹಣೆಗಾಗಿ ಅಂದಾಜಿಸಿತ್ತು. ಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದು ಕಾಮಗಾರಿಗೆ ಘಟನೋತ್ತರ ಅನುಮೋದನೆ ನೀಡಿ ಅನುದಾನ ಬಿಡುಗಡೆ ಮಾಡುವುದಾದಲ್ಲಿ 9 ತಿಂಗಳ ನಿರ್ವಹಣೆಗಾಗಿ ನಿಗದಿಪಡಿಸಿದ ಮೊತ್ತವನ್ನು ಮುಂಗಡವಾಗಿ ಪಾವತಿಸುವುದು ಸೂಕ್ತವೇ,’ ಎಂದು ಲೆಕ್ಕಾಧಿಕಾರಿಗಳು ಆಕ್ಷೇಪಣೆ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.

share
ಜಿ.ಮಹಾಂತೇಶ್
ಜಿ.ಮಹಾಂತೇಶ್
Next Story
X