ಜೀತದಾಳುಗಳು ಜೀತಕ್ಕೆ ಒಳಗಾಗಿಲ್ಲ, ಅವರು ಹಣ ಮಾಡುವ ದಂಧೆಯಲ್ಲಿದ್ದಾರೆ: ನ್ಯಾಯಮೂರ್ತಿ ಹೇಮಂತ್ ಗುಪ್ತಾ

ಹೊಸದಿಲ್ಲಿ: ಜೀತದಾಳುಗಳು ಜೀತಕ್ಕೆ ಒಳಗಾದವರಲ್ಲ. ಅವರು ಕೆಲಸಕ್ಕೆ ಹಣವನ್ನು ಪಡೆಯುತ್ತಾರೆ ಮತ್ತು ಕೆಲಸ ಬೇಡವೆನಿಸಿದಾಗ ಬಿಟ್ಟುಹೋಗುತ್ತಾರೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹೇಮಂತ್ ಗುಪ್ತಾ (Justice Hemant Gupta) ಹೇಳಿದರು.
“ಯಾರು ಜೀತದಾಳುಗಳು ನಿಮಗೆ ಗೊತ್ತಾ.. ಅವರ ಜೀತದಾಳುಗಳಲ್ಲ.. ಅವರು ಹಣ ತೆಗೆದುಕೊಳ್ಳುತ್ತಾರೆ. ಅಲ್ಲಿಗೆ ಬಂದು ಇಟ್ಟಿಗೆ ಭಟ್ಟಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಹಿಂದುಳಿದ ಪ್ರದೇಶದಿಂದ ಬಂದವರು. ಅವರು ಹಣ ಪಡೆದು ತಿಂದು ರಾಜೀನಾಮೆ ನೀಡಿ ಕೆಲಸ ಬಿಡುತ್ತಾರೆ. ಇದೊಂದು ದಂಧೆ. ಜೀತದಾಳುಗಳ ನೆಪದಲ್ಲಿ ಈ ಕಾರ್ಮಿಕರು ಲಾಭವನ್ನು ಪಡೆಯುತ್ತಾರೆ ”ಎಂದು ಗುಪ್ತಾ ಟೀಕಿಸಿದರು.
ತನ್ನ ಪತಿ ಕೆಲಸದ ಸ್ಥಳದಿಂದ ತಪ್ಪಿಸಿಕೊಂಡ ನಂತರ ನಿರ್ಮಾಣ ಘಟಕದ ಮಾಲಕರಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯ ಕುರಿತು ಸಾಮಾಜಿಕ ಹೋರಾಟಗಾರ ದಿ. ಸ್ವಾಮಿ ಅಗ್ನಿವೇಶ್ ಅವರು 2012ರಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಗುಪ್ತಾ ಈ ಹೇಳಿಕೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಇತರ ಜೀತ ಕಾರ್ಮಿಕರನ್ನು ಗುರುತಿಸಿ, ಬಿಡುಗಡೆ ಮಾಡಬೇಕು ಹಾಗೂ ಪುನರ್ವಸತಿ ನೀಡಬೇಕು ಎಂದು ಪಿಐಎಲ್ ನಲ್ಲಿ ಕೋರಲಾಗಿದೆ.





