ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜೆಎನ್ ಯು ಆಡಳಿತ 10-15 ಸಾವಿರ ರೂ. ದಂಡ ವಿಧಿಸಿದೆ: ವಿದ್ಯಾರ್ಥಿಗಳ ಆರೋಪ

ಹೊಸದಿಲ್ಲಿ:ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು) Jawaharlal Nehru University (JNU) ಆಡಳಿತವು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ನಮಗೆ ಸಾವಿರಾರು ರೂಪಾಯಿ ದಂಡವನ್ನು ವಿಧಿಸಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಮುಂದಿನ ಸೆಮಿಸ್ಟರ್‌ಗೆ ನೋಂದಣಿ ಮಾಡದಂತೆ ಆಡಳಿತವು "ನಿಷೇಧಿಸಿದೆ" ಎಂದು ಅವರು ಹೇಳಿದ್ದಾರೆ.
ದಂಡದ ಮೊತ್ತವು ರೂ. 10,000 ರಿಂದ ರೂ. 15,000 ಆಗಿದ್ದು, ಆಡಳಿತ "ಕಿರುಕುಳ" ನೀಡುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಈ ಆರೋಪಗಳನ್ನು ಜೆಎನ್‌ಯು ಮುಖ್ಯ ಪ್ರೊಕ್ಟರ್ ರಜನೀಶ್ ಕುಮಾರ್ ಮಿಶ್ರಾ ನಿರಾಕರಿಸಿದ್ದಾರೆ. ಮುಂದಿನ ಪ್ರಕ್ರಿಯೆ ಅನುಸರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನೋಟಿಸ್ ಪಡೆದಿರುವ ವಿದ್ಯಾರ್ಥಿಗಳ ಪೈಕಿ ವಿದ್ಯಾರ್ಥಿ ಕಾರ್ಯಕರ್ತೆ ಹಾಗೂ ಮಾಜಿ JNU ಸ್ಟೂಡೆಂಟ್ಸ್ ಯೂನಿಯನ್ (JNUSU) ಉಪಾಧ್ಯಕ್ಷ ಮತ್ತು ಪಿಎಚ್‌ಡಿ ವಿದ್ವಾಂಸರಾದ ಸಿಮೋನ್ ಜೋಯಾ ಖಾನ್ ಹಾಗೂ ಕೌಶಿಕ್ ರಾಜ್ ಅವರಿದ್ದಾರೆ.
2018 ರ ಪ್ರತಿಭಟನೆಗಾಗಿ ಕೌಶಿಕ್ ಅವರಿಗೆ ನೋಟಿಸ್ ನೀಡಲಾಗಿದೆ, ಅದರಲ್ಲಿ ತಾನು ಹಾಜರಾಗಿರಲಿಲ್ಲ ಎಂದು ಕೌಶಿಕ್ ಹೇಳಿದ್ದಾರೆ.
ಆಗಸ್ಟ್ 29 ರ ನೋಟೀಸ್ ಪ್ರಕಾರ, ಸೆಪ್ಟೆಂಬರ್ 5 ರೊಳಗೆ "ಯಾವುದೇ ಸಂದರ್ಭದಲ್ಲಿ" 10,000 ರೂ.ಗಳನ್ನು ಸಲ್ಲಿಸುವಂತೆ ಕೌಶಿಕ್ ಅವರಿಗೆ ಸೂಚಿಸಲಾಗಿದೆ.







