ಮೆದುಳು ನಿಷ್ಕ್ರಿಯ: 8 ಮಂದಿಗೆ ಅಂಗಾಂಗ ನೀಡಿ ಜೀವದಾನ ಮಾಡಿದ ಯುವತಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.8:ಕೋಲಾರ ಮೂಲದ ಯುವತಿಯೊಬ್ಬಾಕೆಯ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಅಂಗಾಂಗ ದಾನದ ಮೂಲಕ ಎಂಟು ಮಂದಿಗೆ ನೆರವಾಗಿದ್ದಾರೆ.
ಶ್ವೇತಾ ಎಂಬುವರು ಆ.27ಕ್ಕೆ ಪಾರ್ಶ್ವ ವಾಯು ಪೀಡಿತರಾಗಿ, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಪತಿ ಹರೀಶ್ ಅವರು ಇಲ್ಲಿನ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು.
ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದಿದ್ದರಿಂದ ವೈದ್ಯರು ಆ.31 ರಂದು ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿ, ಅಂಗಾಂಗ ದಾನದ ಬಗ್ಗೆ ಕುಟುಂಬದವರಿಗೆ ತಿಳಿಸಿದರು.
ಆನಂತರ, ಶ್ವೇತಾ ಅವರ ಯಕೃತ್ತು, ಮೂತ್ರಪಿಂಡಗಳು, ಹೃದಯ ಕವಾಟ, ಚರ್ಮ ಮತ್ತು ಕಾರ್ನಿಯಾಗಳನ್ನು ದಾನವಾಗಿ ಪಡೆದ ವೈದ್ಯರು, ಕವಾಟ ವನ್ನು ಜಯದೇವ ಹೃದ್ರೋಗ ಸಂಸ್ಥೆಗೆ, ಚರ್ಮವನ್ನು ವಿಕ್ಟೋರಿಯಾ ಚರ್ಮ ನಿಧಿಗೆ, ಕಾರ್ನಿಯಾಗಳನ್ನು ಪ್ರಭಾ ನೇತ್ರ ಚಿಕಿತ್ಸಾಲಯಕ್ಕೆ ದಾನ ಮಾಡಿದರು.
Next Story