Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಚಿತ್ರದುರ್ಗದ ಪ್ರಕರಣದಲ್ಲಿ ಕಾನೂನು...

ಚಿತ್ರದುರ್ಗದ ಪ್ರಕರಣದಲ್ಲಿ ಕಾನೂನು ಸಮಾನವಾಗಿಲ್ಲ: ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಆತಂಕ

ವಾರ್ತಾಭಾರತಿವಾರ್ತಾಭಾರತಿ8 Sept 2022 11:01 PM IST
share
ಚಿತ್ರದುರ್ಗದ ಪ್ರಕರಣದಲ್ಲಿ ಕಾನೂನು ಸಮಾನವಾಗಿಲ್ಲ: ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಆತಂಕ

ಮೈಸೂರು,ಸೆ.8: 'ದೇಶದ ಕಾನೂನು ಎಲ್ಲರಿಗೂ ಒಂದೇ ಆದರೂ ಚಿತ್ರದುರ್ಗದಲ್ಲಿ ನಡೆದ ಪ್ರಕರಣದಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿಲ್ಲ ಎಂಬುಂದು ಕಂಡುಬಂದಿದೆ' ಎಂದು ಒಡನಾಡಿ ಸಂಸ್ಥೆ ಮುಖ್ಯಸ್ಥ ಸ್ಟ್ಯಾನ್ಲಿ ಆತಂಕ ವ್ಯಕ್ತಪಡಿಸಿದರು.

ನಗರದ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಆವರಣದಲ್ಲಿ ಗುರುವಾರ ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ ಆಯೋಜಿಸಿದ್ದ ಮಕ್ಕಳೊಂದಿಗೆ ನಾವು ಮಕ್ಕಳ ಮೇಲಾಗಿರುವ  ದೌರ್ಜನ್ಯವನ್ನು ಖಂಡಿಸಿ ಹಾಗೂ ಮಠಗಳ ಸಾಂಸ್ಕೃತಿಕ ಅದಃಪತನವನ್ನು ವಿರೋಧಿಸಿ  ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

'ಸಾಮನ್ಯ ಜನ ಅಥವಾ ಗೊತ್ತಿಲ್ಲದೆ ಅಪ್ರಾಪ್ತೆ ಹೆಣ್ಣುಮಕ್ಕಳನ್ನು ಮದುವೆಯಾಗಿ ಸಂಸಾರ ನಡೆಸಲು ಮುಂದಾದ ಬುಡಕಟ್ಟು ಜನಾಂಗದವರು ತಪ್ಪು ಮಾಡಿದರೆ ತಕ್ಷಣ ಅವರನ್ನು ಪೊಕ್ಸೋ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸುತ್ತಾರೆ. ಆದರೆ ಚಿತ್ರದುರ್ಗದ ಪ್ರಕರಣದಲ್ಲಿ ಅಷ್ಟೊಂದು ಬೇಗ ಯಾವುದೇ ಕಾನೂನು ಕ್ರಮ‌ಜರುಗಿಸಲಿಲ್ಲ' ಎಂದು ದೂರಿದರು.

ಚಿತ್ರದುರ್ಗದ ಪ್ರಕರಣಕ್ಕೆ ಸಂಬಂಧಿಸಿಂದತೆ ನೂರಾರು ಹೆಣ್ಣುಮಕ್ಕಳು ದೌರ್ಜನ್ಯಕ್ಕೊಳಗಾಗಿದ್ದಾರೆ. ಆದರೆ ಆದರೆ ಇಬ್ಬರು ಹೆಣ್ಣು‌ ಮಕ್ಕಳು ಮಾತ್ರ ಎಲ್ಲರ ಪರವಾಗಿ ಪ್ರತಿನಿಧಿಸಿ ಅಲ್ಲಿನ ಅನ್ಯಾಯ ಮತ್ತು ದೌರ್ಜನ್ಯವನ್ನು ಬಯಲಿಗೆ ತಂದಿದ್ದಾರೆ. ಆದರೆ ಸರ್ಕಾರ ಪೊಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾದ ಮೇಲೆ ಒಂದೇ ಕಾನೂನನ್ನು ಪಾಲಿಸಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಅರೋಪಿಗೆ ನಾಲ್ಕು ದಿನಗಳ ಕಾಲಾವಕಾಶ ನೀಡಿ ಸಾಕ್ಷ್ಯ ನಾಶಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಡನಾಡಿ ಸಂಸ್ಥೆ ನೊಂದ ಮಕ್ಕಳ ಪರವಾಗಿ ಕೆಲಸ ಮಾಡುತ್ತಿದೆ ಹೊರತು ಯಾವುದೇ ಯಾವುದೇ ವ್ಯಕ್ತಿಗಳ ಪರವಾಗಿ ಕೆಲಸ ಮಾಡುತ್ತಿಲ್ಲ, ನಮ್ಮ ಬಳಿಗೆ ಬಂದು ಮಕ್ಕಳು ತಮ್ಮ ನೋವನ್ನು ಹೇಳಿಕೊಂಡಾಗ ನಮಗೆ ಮನತುಂಬಿ ಬಂತು. ಈ ಪ್ರಕರಣದಲ್ಲಿ ನಾವು ರಾಜೀಯಾಗುತ್ತಾರೋ ಏನೋ ಎಂಬ ಅನುಮಾನ‌ಮಕ್ಕಳಲ್ಲಿ ಮೂಡಿತ್ತು. ಆದರೆ ಆನುಮಾನಗಳನ್ನು ನಾವು ತೊಡೆದು ಹಾಕಿ ಇಡೀ ಪ್ರಕರಣದ ಸತ್ಯಾ ಸತ್ಯತೆ ಬಯಲಿಗೆ ಒತ್ತಾಯ ಮಾಡಿದ್ದೇವೆ ಎಂದು ಹೇಳಿದರು.

ಈ ಪ್ರಕರಣಕ್ಕೆ ಸಂಬಂಧಿಸಿಂದತೆ ನಮಗೆ ಹಲವಾರು ದೂರವಾಣಿ ಕರೆಗಳು ಬಂದು ಇಲ್ಲಿಗೆ ನಿಲ್ಲಿಸಿ. ಸ್ವಲ್ಪ ದಿನ ಕಾಯಿರಿ. ನೀವು ರಾಜಿಯಾದರೆ ಒಳ್ಳೆಯದು ಎಂಬೆಲ್ಲಾ ಮಾತುಗಳು ಕೇಳಿ ಬಂದವು. ನಮಗೆ ಮಕ್ಕಳಿಂಗಿಂತ ಬೇರೇನೂ ಬೇಕಿಲ್ಲ ಎಂದು ಪ್ರಮಾಣಿಕವಾಗಿ ನಾವು ಈ ಕೆಲಸ ಮಾಡಿದೆವು. ಆದರೆ ಕೆಲವರು ನಾವು ಯಾವ ಜಾತಿ ಎಂಬುದನ್ನು ಪತ್ತೆ ಮಾಡಲು ಮುಂದಾದದ್ದು ಮಾತ್ರ ವಿಪರ್ಯಾಸ. ನಮ್ಮ 32 ವರ್ಷ ಸೇವೆಯಲ್ಲಿ ನಾವು ಯಾವ ಜಾತಿ ಧರ್ಮವನ್ನು ನೋಡಿಲ್ಲ ಎಂದು ಹೇಳಿದರು.

ನಮಗೆ ಜೀವ ಭಯ ಇಲ್ಲ. ನಾವು ಯಾವುದಕ್ಕೂ ಹೆದರುವುದೂ ಇಲ್ಲ, ನಮ್ಮ ಉದ್ದೇಶ ನೊಂದವರಿಗೆ ನ್ಯಾಯ ಸಿಗಬೇಕು ಎಂಬುದು. ಆ ನಿಟ್ಟಿನಲ್ಲಿ ನಾವು ಪ್ರಮಾಣಿಕ ಪ್ರಯತ್ನ ಪಡುತ್ತಿದ್ದೇವೆ. ನಾವು ಚಿತ್ರದುರ್ಗದ ಪ್ರಕರಣದಲ್ಲಿ ಷಢ್ಯಂತರ ಮಾಡಿದ್ದೇವೆ ಎನ್ನುವುದಾದರೆ ಉನ್ನತ ಮಟ್ಟದ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

ಒಡನಾಡಿ ಸಂಸ್ಥೆ ಮತ್ತೊಬ್ಬ ಮುಖ್ಯಸ್ಥ ಪರುಶರಾಮ್ ಮಾತನಾಡಿ, ಈ ಪ್ರಕರಣದಲ್ಲಿ ಐಎಎಸ್, ಐಪಿಎಸ್ ಓದಿದ  ಅಧಿಕಾರಿಗಳು ಕಾನೂನು ರೀತಿ ನಡೆದುಕೊಳ್ಳಲಿಲ್ಲ, ಸ್ವಾಮೀಜಿ ಮೇಲಿನ ಪ್ರೀತಿಯಿಂದಲೋ ಅಥವಾ ಇನ್ನ್ಯಾವುದೊ ಒತ್ತಡಕ್ಕೆ ಒಲಿದು ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿವೃತ್ತ ಐಪಿಎಸ್ ಅಧಿಕಾರಿಗಳಾದ ಜ್ಯೋತಿ ಪ್ರಕಾಶ್ ಮಿರ್ಜಿ ಮತ್ತು ಶಂಕರ ಬಿದರಿ ಸ್ವಾಮೀಜಿಗಳ ಪರ ನಿಂತು ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದು ಅತ್ಯಂತ ನೋವಿನ ವಿಚಾರ ಎಂದು ಹೇಳಿದರು.

ಈ ಪ್ರಕರಣ ದಾಖಲಾಗುತ್ತಿದ್ದಂತೆ ಅನ್ಯಾಯಕ್ಕೊಳಗಾದ ನೂರಾರು ಮಂದಿ ದೂರವಾಣಿ ಕರೆ ಮಾಡಿ ಸರ್ ದಯವಿಟ್ಟು ಇವರನ್ನು ಬಿಡಬೇಡಿ ಎಂದು ಅಂಗಲಾಚಿಕೊಳ್ಳುತ್ತಾರೆ. ಆಸ್ಟ್ರೇಲಿಯಾದಿಂದ ಕರೆ ಮಾಡಿದ ಮಹಿಳೆ ನನ್ನನ್ನು ಗರ್ಭವತಿ ಮಾಡಿ ಒಂದು ಮಗು ಆದ ಮೇಲೆ ಈ ವ್ಯಕ್ತಿ ಬೇರೆ ಕಡೆ ಮದುವೆ ಮಾಡುತ್ತಾರೆ. ನನ್ನ ಮಗುವನ್ನು ನೀಡಿಕೊಳ್ಳುತ್ತೇನೆ ಎಂದ ಅವರು ಅದನ್ನು ಬೇರೆ ಕಡೆಗೆ ಕೊಟ್ಟಿದ್ದಾರೆ. ಜೊತೆಗೆ ನನ್ನ ಗರ್ಭವನ್ಮು ತೆಗೆಸಿದ್ದಾರೆ. ನನ್ನ ಗಂಡನ ಜೊತೆ ಸಂತೋಷದಿಂದ ಜೊತೆ ಸೇರಲು ಆಗುತ್ತಿಲ್ಲ ಎಂದು ಕಣ್ಣೀರಿಡುತ್ತಾರೆ. ಹಾಗೆ ನಿನ್ನೆ ಡ್ರೈವರ್ ಒಬ್ಬ ಬಂದು ಇವರ ವಿಷಯವನ್ನೆಲ್ಲಾ ಹೇಳುತ್ತಾನೆ ಎಂದು ಹೇಳಿದರು.

ಒಡನಾಡಿ ಸಂಸ್ಥೆ ಎಂದಿಗೂ ರಾಜಿಯಾಗಿಲ್ಲ ಮುಂದೆ ರಾಜಿಯೂ ಆಗುವುದಿಲ್ಲ, ನಾವು ಮಕ್ಕಳ ಪರ ಇದ್ದೇವೆ. ಅಮೇರಿಕಾದ ಸ್ವಾಮೀಜಿಯೊಬ್ಬರು ಹೇಳುವ ಪ್ರಕಾರ ಇವರು ಹತ್ತು ತಲೆಯನ್ನು ಹೊಂದಿದ್ದಾರೆ. ವಾಗ್ಮಿ, ಆದರೆ ಅವರ ಸುತ್ತ ಕಾಮ ತುಂಬಿಕೊಂಡಿದೆ. ಹಾಗಾಗಿ ಅವರಿಗೆ ಬುದ್ಧಿ ಕಲಿಸಬೇಕಿದೆ ಎಂದು ಹೇಳಿದರು.

ಪ್ರತಿಭಟನಾ ಸಭೆಯಲ್ಲಿ ಹಿರಿಯ ರಂಗಕರ್ಮಿ ಜನಾರ್ಧನ್ (ಜನ್ನಿ), ಸಂಶೋಧಕರ ಸಂಘದ ಅಧ್ಯಕ್ಷ ನಟರಾಜ್, ಗೌರವಾಧ್ಯಕ್ಷ ಸೋಸಲೆ ಮಹೇಶ್, ಸಂಶೋಧಕ ಕಲ್ಲಹಳ್ಳಿ ಕುಮಾರ್, ರಘು, ಬಸವರಾಜು ಸಿ.ಜೆಟ್ಟಿಹುಂಡಿ ಸೇರಿದಂತೆ ಹಲವರು ಭಾಗವಹಸಿದ್ದರು.

-------------------------------------------
ಒಡನಾಡಿ ಉತ್ತಮ‌ ಕೆಲಸ ಮಾಡಿದೆ. ಸಮಾಜದಲ್ಲಿ ಒಳ್ಳೆಯದನ್ನು ಬಯಸುವ ಎಲ್ಲರೂ ಇವರ ಪರವಾಗಿ ನಿಲ್ಲುತ್ತಾರೆ. ಇವರ ಕಾರ್ಯ ಶ್ಲಾಘನೀಯ. ಇವರ ಜೊತೆ ನಾವೆಲ್ಲರೂ ಇರುತ್ತೇವೆ.

 -ಪ್ರೊ.ಕಾಳೇಗೌಡ ನಾಗವವಾರ, ಪ್ರಗತಿಪರ ಚಿಂತಕ.
------------------------------------------------------
ಹಲವು ಮಠಾಧೀಶರ ಮೇಲೆ ಲೈಂಗಿಕ ಆರೋಪ ಕೇಳಿ ಬಂದಿರುವುದರಿಂದ ಮಠಾಧೀಶರೇ ಸ್ವಯಂಪ್ರೇರಿತರಾಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿ ತಮ್ಮ ಸಾಚಾತನ ಸಾಬೀತು ಮಾಡುವ ಮೂಲಕ ತಮ್ಮ ಭಕ್ತಗಣದಲ್ಲಿ ಮೂಡಿರುವ ಗೊಂದಲವನ್ನು ಪರಿಹರಿಸಬೇಕು.

 -ಮಹೇಶ್ ಸೋಸ್ಲೆ, ಗೌರವಾಧ್ಯಕ್ಷ,ಮೈಸೂರು ವಿ.ವಿ.ಸಂಶೋಧಕರ ಸಂಘ

-------------------------------------------------------------

ಸಮಾಜ ಒಡನಾಡಿ ಪರವಾಗಿ ನಿಲ್ಲುವುದಕ್ಕಿಂತ ದೌರ್ಜನ್ಯಕ್ಕೊಳಗಾದ ಮಕ್ಕಳ ಪರ ನಿಲ್ಲಬೇಕಿದೆ. ಆಗ ಮಾತ್ರ ರಾಕ್ಷಸ ಕೃತ್ಯ ನಡೆಸಿದವರ ಪರ ಎಷ್ಟೇ ಪ್ರಭಾವ ನಡೆದರೂ ತಕ್ಕ ಶಾಸ್ತಿಯಾಗುತ್ತದೆ.

-ಸ್ಟ್ಯಾನ್ಲಿ, ಒಡನಾಡಿ ಮುಖ್ಯಸ್ಥ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X