ಬ್ರಿಟನ್ ರಾಣಿ ಎಲಿಝಬೆತ್ ನಿಧನ

ರಾಣಿ ಎಲಿಝಬೆತ್ (AP/PTI)
ಲಂಡನ್: ಬ್ರಿಟನ್ ರಾಣಿ ಎಲಿಝಬೆತ್ || ಗುರುವಾರ ನಿಧರಾಗಿದ್ದಾರೆ. 96 ವರ್ಷದ ಎಲಿಝಬೆತ್ ಅವರ ಆರೋಗ್ಯದಲ್ಲಿ ಏರುಪೇರಾದ ಬಳಿಕ ವೈದ್ಯರ ನಿಗಾದಲ್ಲಿ ಅವರನ್ನು ಇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಕೊನೆಯುಸಿರೆಳದಿದ್ದಾರೆ ಎಂದು ಬಂಕಿಂಗ್ಹ್ಯಾಮ್ ಅರಮನೆ ಹೇಳಿಕೆ ಬಿಡುಗಡೆ ಮಾಡಿದೆ.
"ಇಂದು ಬೆಳಗ್ಗೆ ಹೆಚ್ಚಿನ ಪರೀಕ್ಷೆಯ ಬಳಿಕ, ರಾಣಿಯ ವೈದ್ಯರು ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಮತ್ತು ಅವರು ವೈದ್ಯಕೀಯ ನಿಗಾದಲ್ಲಿ ಉಳಿಯಲು ಶಿಫಾರಸು ಮಾಡಿದ್ದರು. ನಂತರ ಅವರ ಹಿರಿಯ ಮಗ ಮತ್ತು ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್ ಸಹಿತ ಕುಟುಂಬಸ್ಥರು ರಾಣಿ ಎಲಿಝಬೆತ್ ತಂಗಿದ್ದ ಅರಮನೆಗೆ ಆಗಮಿಸಿದ್ದರು.
ರಾಣಿಯ ಗೌರವಾರ್ಥ ಬ್ರಿಟನ್ನಲ್ಲಿ 10 ದಿನ ರಾಷ್ಟ್ರೀಯ ಶೋಕ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ರಾಣಿ ಎಲಿಝಬೆತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
The Queen died peacefully at Balmoral this afternoon.
— The Royal Family (@RoyalFamily) September 8, 2022
The King and The Queen Consort will remain at Balmoral this evening and will return to London tomorrow. pic.twitter.com/VfxpXro22W