ಕೆನಡ: ಸಾಮೂಹಿಕ ಇರಿತ ಪ್ರಕರಣದ ಎರಡನೆಯ ಆರೋಪಿಯ ಸಾವು

ಹೊಸದಿಲ್ಲಿ,ಸೆ.8: ಕೆನಡಾದಲ್ಲಿ ಕಳೆದ ವಾರ ನಡೆದ ಸಾಮೂಹಿಕ ಇರಿತದ ಘಟನೆಯಲ್ಲಿ 10 ಮಂದಿ ಮೃತಪಟ್ಟು, ಇತರ 18 ಮಂದಿ ಗಾಯಗೊಂಡ ಪ್ರಕರಣ ಎರಡನೆ ಆರೋಪಿ ಮೇಲ್ಸ್ ಸ್ಯಾಂಡರ್ಸನ್ ತನಗೆ ತಾನೇ ಮಾರಣಾಂತಿಕ ಗಾಯ ಮಾಡಿಕೊಂಡು ಸಾವನ್ನಪ್ಪಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಪ್ರಕರಣದ ಸಹ ಆರೋಪಿ ಹಾಗೂ ತನ್ನ ಸಹೋದರನಾದ ಡಾಮಿಯೆನ್ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಎರಡು ದಿನಗಳ ಬಳಿಕ ಸ್ಯಾಂಡರ್ಸನ್ ಸಾವನ್ನಪ್ಪಿದ್ದಾನೆ.
ಸ್ಯಾಸ್‌ಕಾಚೆವಾನ್‌ನಲ್ಲಿ ನಡೆದ ಸಾಮೂಹಿಕ ಇರಿತದ ಘಟನೆಯ ಬಳಿಕ ಸ್ಯಾಂಡರ್ಸನ್ ತಲೆಮರೆಸಿಕೊಂಡಿದ್ದ. ಆತನನ್ನು ಪೊಲೀಸರು ಬೆನ್ನಟ್ಟಿ ಬುಧವಾರ ಬಂಧಿಸಿದ್ದರು. ಬಂಧನದ ಬಳಿಕ ಆತ ವೈದ್ಯಕೀಯವಾಗಿ ಖಿನ್ನನಾಗಿದ್ದ. ತನಗೆ ತಾನೇ ಗಾಯ ಮಾಡಿಕೊಂಡಿದ್ದ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಸ್ಯಾಂಡರ್ಸನ್‌ನ ಸಹೋದರ ಹಾಗೂ ಪ್ರಕರಣದ ಸಹ ಆರೋಪಿ ಡಾಮಿಯೆನ್ ನ ಮೃತದೇಹ ಎರಡು ದಿನಗಳ ಹಿಂದೆ ಪತ್ತೆಯಾಗಿತ್ತು.
Next Story