ಯೆನೆಪೊಯ ಶಿಕ್ಷಣ ಸಂಸ್ಥೆಯಲ್ಲಿ ವರ್ಷದ ಶಿಕ್ಷಕ ಪ್ರಶಸ್ತಿ ಪ್ರದಾನ

ಕೊಣಾಜೆ: ದೇರಳಕಟ್ಟೆಯ ಯೆನೆಪೊಯ ಸೆಂಟರ್ ಫಾರ್ ಫ್ಯಾಕಲ್ಟಿ ಡೆವಲಪ್ಮೆಂಟ್, ಯೆನೆಪೊಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ `ಶಿಕ್ಷಕರ ದಿನಾಚರಣೆ 2022'ರ ಅಂಗವಾಗಿ ಯೆನೆಪೊಯ ಘಟಕ ಕಾಲೇಜುಗಳ 25 ಅಧ್ಯಾಪಕರಿಗೆ "ವರ್ಷದ ಶಿಕ್ಷಕ ಪ್ರಶಸ್ತಿ" ಮತ್ತು ಹತ್ತು ವಿಭಾಗಗಳಿಗೆ "ಅಕಾಡೆಮಿಕ್ ಎಕ್ಸಲೆನ್ಸ್ ಪ್ರಶಸ್ತಿ" ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ಉಪಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶಿಕ್ಷಕರನ್ನು ಸನ್ಮಾನಿಸಿ ವಿಭಾಗಗಳ ಮುಖ್ಯಸ್ಥರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಯೆನೆಪೊಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಕೆ.ಎಸ್. ಗಂಗಾಧರ ಸೋಮಯಾಜಿ ಸ್ವಾಗತಿಸಿದರು. ಯೆನೆಪೊಯ ವೈದ್ಯಕೀಯ ಕಾಲೇಜು ಅಸೋಸಿಯೇಟ್ ಡೀನ್ ಮತ್ತು ಯೆನ್-ಎಫ್‍ಡಿಸಿ ಉಪನಿರ್ದೇಶಕ ಡಾ.ಅಭಯ್ ನಿರ್ಗುಡೆ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯ ವಿವರ ನೀಡಿದರು.
ಯೆನ್- ಎಫ್‍ಡಿಸಿ ಸದಸ್ಯೆ ಹಾಗೂ ಯೆನೆಪೊಯ ನರ್ಸಿಂಗ್ ಕಾಲೇಜಿನ ಉಪಪ್ರಾಂಶುಪಾಲೆ ಡಾ. ಉಮಾರಾಣಿ ಜೆ. ಅತಿಥಿಗಳನ್ನು ಪರಿಚಯಿಸಿದರು. ಯೆನೆಪೊಯ ದಂತ ಮಹಾವಿದ್ಯಾಲಯದ ಪ್ರೊಸ್ಟೊಡಾಂಟಿಕ್ಸ್ ವಿಭಾಗದ ಪ್ರಾಧ್ಯಾಪಕಿ ಯೆಎನ್-ಎಫ್‍ಡಿಸಿ ಸದಸ್ಯ ಡಾ.ವಿದ್ಯಾ ಭಟ್ ವಂದಿಸಿದರು.