ಕಾಂಗ್ರೆಸ್ ಮುಖ್ಯಸ್ಥರ ಆಯ್ಕೆ ಚುನಾವಣೆಯಲ್ಲಿ ಪಾರದರ್ಶಕತೆ ಕೋರಿ ಶಶಿ ತರೂರ್ ಸಹಿತ ಐವರು ಸಂಸದರಿಂದ ಪತ್ರ: ವರದಿ

Photo:PTI
ಹೊಸದಿಲ್ಲಿ: ಪಕ್ಷದ ಮುಖ್ಯಸ್ಥರನ್ನು ಆಯ್ಕೆ ಮಾಡುವ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಹಾಗೂ ನ್ಯಾಯಸಮ್ಮತತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಐವರು ಕಾಂಗ್ರೆಸ್ ಸಂಸದರು ಎಐಸಿಸಿ ಕೇಂದ್ರ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ (AICC central election authority chief Madhusudan Mistry)ಅವರಿಗೆ ಪತ್ರ ಬರೆದಿದ್ದು, ಮತದಾರರ ಪಟ್ಟಿಯನ್ನು ಎಲ್ಲಾ ಮತದಾರರು ಹಾಗೂ ಸಂಭಾವ್ಯ ಅಭ್ಯರ್ಥಿಗಳಿಗೆ ಸುರಕ್ಷಿತವಾಗಿ ಒದಗಿಸಬೇಕು ಎಂದು ಕೋರಿದ್ದಾರೆ. .
ಸೆಪ್ಟೆಂಬರ್ 6 ರಂದು ಮಿಸ್ತ್ರಿ ಅವರಿಗೆ ಬರೆದ ಜಂಟಿ ಪತ್ರದಲ್ಲಿ ಕಾಂಗ್ರೆಸ್ನ ಲೋಕಸಭಾ ಸದಸ್ಯರಾದ ಶಶಿ ತರೂರ್(Shashi Tharoor), ಕಾರ್ತಿ ಚಿದಂಬರಂ, ಪ್ರದ್ಯುತ್ ಬೊರ್ಡೊಲೊಯ್ ಹಾಗೂ ಅಬ್ದುಲ್ ಖಲೀಕ್ ಅವರು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಬೇಕೆಂಬ ತಮ್ಮ ಬೇಡಿಕೆಗೆ ತಪ್ಪಾದ ವ್ಯಾಖ್ಯಾನವನ್ನು ನೀಡುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
"ನಮಗೆ ಕೇಡು ಬಯಸುವವರಿಗೆ ಅದರಲ್ಲಿರುವ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶವನ್ನು ನೀಡುವ ರೀತಿಯಲ್ಲಿ ಪಕ್ಷದ ಯಾವುದೇ ಆಂತರಿಕ ದಾಖಲೆಗಳನ್ನು ಬಿಡುಗಡೆ ಮಾಡಬೇಕೆಂದು ನಾವು ಸೂಚಿಸುವುದಿಲ್ಲ" ಎಂದು ಸಂಸದರು ಬರೆದಿದ್ದಾರೆ.
"ನಾಮನಿರ್ದೇಶನ ಪ್ರಕ್ರಿಯೆ ಆರಂಭವಾಗುವ ಮೊದಲು, ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರ (ಸಿಇಎ) ಎಲೆಕ್ಟೋರಲ್ ಕಾಲೇಜ್ ರೂಪಿಸುವ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಪ್ರತಿನಿಧಿಗಳ ಪಟ್ಟಿಯನ್ನು ಒದಗಿಸಬೇಕು ಎಂದು ನಾವು ದೃಢವಾದ ಅಭಿಪ್ರಾಯವನ್ನು ಹೊಂದಿದ್ದೇವೆ" ಎಂದು ಅವರು ಮಿಸ್ತ್ರಿ ಅವರಿಗೆ ಪತ್ರ ತಿಳಿಸಿದ್ದಾರೆ.
ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಲು ಯಾರು ಅರ್ಹರು ಮತ್ತು ಯಾರು ಮತ ಚಲಾಯಿಸಲು ಅರ್ಹರು ಎಂಬುದನ್ನು ಪರಿಶೀಲಿಸಲು ಈ ಪಟ್ಟಿಯನ್ನು ಲಭ್ಯಗೊಳಿಸಬೇಕು ಎಂದು ಸಂಸದರು ಹೇಳಿದರು.
2020 ರಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಪಕ್ಷದ ಸಮಗ್ರ ಸಂಘಟನಾತ್ಮಕ ಬದಲಾವಣೆಗೆ ಆಗ್ರಹಿಸಿ ಪತ್ರ ಬರೆದಿದ್ದ 23 ನಾಯಕರ ಗುಂಪಿನಲ್ಲಿ ತರೂರ್ ಹಾಗೂ ಮನೋಜ್ ತಿವಾರಿ ಸೇರಿದ್ದಾರೆ.
ತರೂರ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಯೋಚಿಸುತ್ತಿದ್ದಾರೆ.







