Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಮಾನವೀಯ ಸಂಬಂಧಗಳ ಗಟ್ಟಿಗೊಳಿಸುವ ಕಥೆಗಳು

ಮಾನವೀಯ ಸಂಬಂಧಗಳ ಗಟ್ಟಿಗೊಳಿಸುವ ಕಥೆಗಳು

ಎಚ್. ದಂಡಪ್ಪಎಚ್. ದಂಡಪ್ಪ10 Sept 2022 11:24 AM IST
share
ಮಾನವೀಯ ಸಂಬಂಧಗಳ ಗಟ್ಟಿಗೊಳಿಸುವ ಕಥೆಗಳು

ಡಾ. ಕರೀಗೌಡ ಬೀಚನಹಳ್ಳಿ ಅವರಿಗೆ ಕಥನ ಸಾಹಿತ್ಯದ ಬಗ್ಗೆ ಅಪಾರ ಕುತೂಹಲ ಮತ್ತು ಆಸಕ್ತಿ; ಅವರು ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದ್ದೇ ದೇವನೂರ ಮಹಾದೇವ ಅವರ ಕತೆಗಳನ್ನು ಕುರಿತಾದ ವಿಮರ್ಶಾ ಲೇಖನದಿಂದ. ಅಲ್ಲಿಂದ ಪ್ರಾರಂಭವಾದ ಕಥನ ಕುತೂಹಲ ಅವರಿಗೆ ಇನ್ನೂ ತಣಿದಿಲ್ಲ. ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾ ಸುಮಾರು 42 ವರ್ಷಗಳಿಂದ ಮಹತ್ವದ ಕತೆಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಸೃಜನಶೀಲ ಸ್ವರೂಪದ ಬಗ್ಗೆ ಚಿಂತನೆಗಳನ್ನು ನಡೆಸಿ ಲೇಖನಗಳನ್ನು ಬರೆದಿದ್ದಾರೆ. ‘ಶತಮಾನದ ಕನ್ನಡ ಸಣ್ಣಕತೆಗಳ ಸಮೀಕ್ಷೆ’ ಎಂಬ ಗ್ರಂಥವನ್ನು ಬರೆದು ಪ್ರಕಟಿಸಿದ್ದಾರೆ. ಅವರು ಶತಮಾನದ ಕನ್ನಡ ಸಣ್ಣಕತೆಗಳ ಸಮೀಕ್ಷೆ ಬಗ್ಗೆ ಚಿಂತನ ಮಂಥನ ಮಾಡಿದಷ್ಟು ಬೇರೆ ಯಾವುದೇ ಪ್ರಕಾರದ ಬಗ್ಗೆ ಮಾಡಿಲ್ಲ. ವಿಮರ್ಶೆ, ನಾಟಕ, ಕಾದಂಬರಿ, ಅನುವಾದ ಹೀಗೆ ಪ್ರಮುಖ ಸಾಹಿತ್ಯ ಪ್ರಕಾರಗಳಲ್ಲಿ ಮಹತ್ವದ ಕೆಲಸವನ್ನು ಮಾಡಿ ಕೃತಿಗಳನ್ನು ಪ್ರಕಟಿಸಿರುವುದು ಕನ್ನಡ ವಿದ್ವತ್‌ವಲಯ ಗುರುತಿಸಿದೆ; ಭಾಷಾಂತರ ಅಥವಾ ಅನುವಾದದ ಬಗ್ಗೆಯೂ ಹೆಚ್ಚು ಕೆಲಸವನ್ನು ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಅವರು ಅನುವಾದಕ್ಕೆ ಆಯ್ಕೆ ಮಾಡಿಕೊಂಡಿರುವ ಸಾಹಿತ್ಯ ಪ್ರಕಾರವೆಂದರೆ ಅವರಿಗೆ ಬಹುಪ್ರಿಯವಾದ ಕಥೆಗಳನ್ನೇ; ಇದರಲ್ಲಿ ಜನಪದ ಕತೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಏಕೆಂದರೆ ಅವರು ಪ್ರಕಟಿಸಿರುವ ಅನುವಾದಿತ ಕೃತಿಗಳಲ್ಲಿ ಮೊದಲನೆಯದು ಜಗತ್ತಿನ ವಿವಿಧ ದೇಶಗಳ ಬಗ್ಗೆ ಪ್ರಸಿದ್ಧರಾದ ಕತೆಗಾರರ ಕತೆಗಳನ್ನೊಳಗೊಂಡಿದ್ದರೆ, ಉಳಿದೆರಡು ಪುಸ್ತಕಗಳು ಜನಪದ ಕತೆಗಳ ಅನುವಾದಗಳು; ಇದರಲ್ಲಿ ಒಂದು ಕರ್ನಾಟಕ ಜನಪದ ಕತೆಗಳು. ಮತ್ತೊಂದು ಆಫ್ರಿಕನ್ ಜನಪದ ಕತೆಗಳು.

ಕರೀಗೌಡರು ಮೊದಲೇ ತಿಳಿಸಿದಂತೆ ಕಥನ ಪ್ರಿಯರು. ಕಥನವು ಮೊದಲಿನಿಂದಲೂ ಮನುಷ್ಯನ ನಾಗರಿಕತೆಯ ವಿಕಾಸಕ್ಕೆ ನೆರವಾಗಿರುವಂತಹದ್ದು. ಹಿಂದೆ ಸಣ್ಣಕತೆಗಳನ್ನು ಶೈಕ್ಷಣಿಕ ಉದ್ದೇಶಕ್ಕೆ ಬಳಸಲಾಗುತ್ತಿತ್ತು. ದಡ್ಡರನ್ನು ಬುದ್ಧಿವಂತರನ್ನಾಗಿ ಮಾಡುವುದಕ್ಕಾಗಿ ಕತೆಗಳನ್ನು ಬಳಸುತ್ತಿದ್ದರು ಎಂಬುದು ಹಳೆಯ ವಿಚಾರ. ಈಗಲೂ ಕೂಡಾ ನೈತಿಕ ಅರಿವಿನ ಎಚ್ಚರಿಕೆಗಾಗಿ, ಅದರ ಬದಲಾವಣೆಗಾಗಿ ಬಳಸಲಾಗುತ್ತದೆ. ಆದ್ದರಿಂದಲೇ ಕತೆಯನ್ನು ನೈತಿಕ ಸಾಕ್ಷಾತ್ಕಾರದ ಕಲೆ (Art of moral Revelation) ಎಂದು ಕರೆಯಲಾಗುತ್ತದೆ. ಅಂದರೆ ಕತೆಗಳು ಮಾನವನ ಬದುಕಿಗೆ, ಪೂರಕವಾಗಿಯೇ ಮೈದಾಳುತ್ತಾ ಬಂದಿವೆ. ಕಾದಂಬರಿ ಕೂಡಾ ನೈತಿಕ ವಿಕಾಸದ ಕಲೆ (Art of moral Evolution). ಜೊತೆಗೆ ಸಣ್ಣ ಕತೆಯು ಬಡವರು, ದುರ್ಬಲರು, ದುರ್ಲಕ್ಷಿತರು, ದುಃಖಿತರು, ಪಡುವ ಪಾಡನ್ನು ವಿವರಿಸುತ್ತದೆ. ಕರೀಗೌಡರು ತಮ್ಮ ಎಲ್ಲಾ ಕತೆಗಳಲ್ಲೂ ಈ ಬಡವರ ಪಾಡನ್ನು, ಅವರ ಬದುಕಿನ ಸ್ವರೂಪವನ್ನು ಅನಾವರಣಗೊಳಿಸಿರುವುದನ್ನು ಕಾಣಬಹುದು. ಈ ಬಡವರ ಬದುಕು ಸಾಹಿತ್ಯದ ಸಾರ್ವಭೌಮ ವಸ್ತುವಾಗಿ ಮೊದಲಿನಿಂದಲೂ ನಾನಾ ರೀತಿಯಲ್ಲಿ ಸಾಹಿತ್ಯ ಪ್ರಕಾರಗಳಲ್ಲಿ ಮೈದಾಳಿದೆ. ಬಡವರ ವಸ್ತುವನ್ನು ಯಾವುದೇ ಲೇಖಕನಾಗಿರಲಿ ಕಲಾತ್ಮಕವಾಗಿ ಅಭಿವ್ಯಕ್ತಿಸಿದ್ದರೆ, ಖಂಡಿತವಾಗಿಯೂ ಆ ಕತೆ ಎಲ್ಲಾ ದೇಶ ಭಾಷೆಗಳಲ್ಲಿ ಶ್ರೇಷ್ಠ ಕತೆಗಳಾಗಿ ಉಳಿದುಕೊಂಡು ಬರುತ್ತವೆ. ಹೀಗಾಗಿ ಕರೀಗೌಡರು ಅನುವಾದ ಮಾಡಲು ಆಯ್ಕೆ ಮಾಡಿಕೊಂಡಿರುವ ಕತೆಗಳು ಬಡವರ, ಶೋಷಣೆಗೆ ಒಳಗಾದವರ ಕತೆಗಳೇ ಆಗಿವೆ. ಈ ಕತೆಗಳು ಜಗತ್ತಿನ ಅತ್ಯುತ್ತಮ ಬರಹಗಾರರ ಅತ್ಯುತ್ತಮ ಕತೆಗಳೂ ಆಗಿರುವುದು ಮತ್ತೊಂದು ವಿಶೇಷ.

ಜನಪದ ಕತೆಗಳ ಆಯ್ಕೆಯ ಹಿನ್ನೆಲೆಯಲ್ಲಿ ಕರೀಗೌಡರು ತಮ್ಮ ಸೃಜನಶೀಲತೆಗೆ ಆಯ್ಕೆ ಮಾಡಿಕೊಂಡಿರುವ ಕಥಾಸಾಹಿತ್ಯದ ಆಸಕ್ತಿಯೂ ಕಾರಣವಾಗಿದೆ. ಅವರಿಗೆ ಪ್ರಿಯವಾದದ್ದು ಕಥನವೇ. ಅವರ ಸೃಜನಶೀಲ ಕತೆಗಳಲ್ಲಿ ಗ್ರಾಮೀಣ ಪ್ರದೇಶವು ಪಡೆದುಕೊಳ್ಳುತ್ತಿರುವ ಪಲ್ಲಟ, ಬದಲಾವಣೆ, ಮನುಷ್ಯ-ಮನುಷ್ಯರ ಸಂಬಂಧಗಳು, ಸಂಸ್ಕೃತಿಯ ಸ್ವರೂಪ, ಸಾಮಾಜಿಕ ಆರ್ಥಿಕ ಏರುಪೇರುಗಳನ್ನು ಚಿತ್ರಿಸುತ್ತಾ ಯಾವುದೇ ಭಾವೋದ್ವೇಗಕ್ಕೆ ಒಳಗಾಗದೆ ಅವರು ನಿರ್ಲಿಪ್ತವಾಗಿ ಕತೆಯನ್ನು ನಿರೂಪಿಸುವ ಆಕರ್ಷಕ ಕ್ರಮವಿರುವುದನ್ನು ಗಮನಿಸಬಹುದು. ಮಾನವೀಯ ಮೌಲ್ಯಗಳು, ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಬೇಕೆಂಬ ಆಶಯ ಅವರ ಕಥೆಗಳಲ್ಲಿದೆ.

ಇಂತಹ ಕತೆಗಳನ್ನು ‘ಮಾಯಾಗನ್ನಡಿ’ ಹೆಸರಿನಲ್ಲಿ ಅನುವಾದಿಸಿ ಕನ್ನಡ ಓದುಗರಿಗೆ ಕೊಟ್ಟಿರುವುದು ಕನ್ನಡ ಸಂಸ್ಕೃತಿಗೆ ಅವರು ಕೊಟ್ಟಿರುವ ಮಹತ್ವಪೂರ್ಣ ಕೊಡುಗೆ. ಇಲ್ಲಿ ಕತೆಗಳ ವಸ್ತುವನ್ನು ವಿವರಿಸುವುದಕ್ಕಿಂತ ಅವರ ಅನುವಾದದ ಸ್ವರೂಪವನ್ನು ಕುರಿತೇ ಚರ್ಚಿಸಲಾಗಿದೆ. ಇದರ ಉದ್ದೇಶ ಕತೆಗಳನ್ನು ಓದುಗರೇ ಓದುವಂತಾಗಲಿ ಎಂಬುದು. ಕರೀಗೌಡ ಬೀಚನಹಳ್ಳಿ ಅವರಿಂದ ಮತ್ತಷ್ಟು ಇಂತಹ ಅನುವಾದಗಳು ಬರಲಿ.

(ಈ ಕೃತಿ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.)

share
ಎಚ್. ದಂಡಪ್ಪ
ಎಚ್. ದಂಡಪ್ಪ
Next Story
X