ಸೆ.14ರಂದು ರಮಾನಾಥ ರೈ ಹುಟ್ಟು ಹಬ್ಬ ಆಚರಣೆ: ಮುರಳೀಧರ ರೈ ಮಠಂತಬೆಟ್ಟು

ರಮಾನಾಥ ರೈ
ಪುತ್ತೂರು: ಮಾಜಿ ಸಚಿವ ರಮಾನಾಥ ರೈ ಅವರ 71ನೆಯ ಹುಟ್ಟು ಹಬ್ಬ ಆಚರಣೆಯನ್ನು ಅವರ ಹುಟ್ಟೂರಾದ ಪೆರ್ನೆಯಲ್ಲಿ ಆಚರಿಸಲಾಗುವುದು. ಸೆ. 14ರಂದು ಪೆರ್ನೆಯ ಎ.ಎಮ್. ಅಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಬೆಳ್ಳಿಪ್ಪಾಡಿ ರಮಾನಾಥ ರೈ ಹುಟ್ಟುಹಬ್ಬ ಅಭಿನಂದನಾ ಸಮಿತಿ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ತಿಳಿಸಿದ್ದಾರೆ.
ಅವರು ಶನಿವಾರ ಪುತ್ತೂರು ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಸಂದರ್ಭದಲ್ಲಿ ಕನಿಷ್ಠ 71 ಅಭಿಮಾನಿಗಳಿಂದ ರಕ್ತದಾನ ಸಂಕಲ್ಪ ನಡೆಸಲಾಗಿದೆ. ಈಗಾಗಲೇ 200ಕ್ಕೂ ಅಧಿಕ ಅಭಿಮಾನಿಗಳು ರಕ್ತದಾನ ಮಾಡಲು ಮುಂದಾಗಿದ್ದಾರೆ. ಬೆಳಗ್ಗೆ 10 ಗಂಟೆಗೆ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ರಕ್ತದಾನ ಶಿಬಿರ ಉದ್ಘಾಟಿಸಲಿದ್ದಾರೆ. 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಳೆಂಜ ಶಂಕರಾಯರಪಾಲು ವೇ.ಮೂ.ವಿದ್ವಾನ್ ಕೆ. ಕೃಷ್ಣಮೂರ್ತಿ ಕಾರಂತ, ಕೆಮ್ಮಾರ ಶಂಸುಲ್ ಉಲೇಮಾ ಮೆಮೊರಿಯಲ್ ಕಾಲೇಜ್ ಅಧ್ಯಕ್ಷ ಎಸ್.ಬಿ. ಮಹಮ್ಮದ್ ದಾರಿಮಿ ಮತ್ತು ಪುತ್ತೂರು ಮಾಯ್ದೆ ದೇವುಸ್ ಚರ್ಚ್ನ ಧರ್ಮಗುರು ರೆ. ಲಾರೆನ್ಸ್ ಮಸ್ಕರೇನಸ್ ಆಶೀರ್ವಾದ ನೀಡಲಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ರಾಜೀವ ಗಾಂಧಿ ವಿಶ್ವವಿದ್ಯಾನಿಲಯ ನಿಕಟಪೂರ್ವ ಸಿಂಡಿಕೇಟ್ ಸದಸ್ಯ ಡಾ. ಬಿ. ರಘು, ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮತ್ತು ಉಪ್ಪಿನಂಗಡಿ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಹುಟ್ಟು ಹಬ್ಬ ಆಚರಣೆಯ ಸಭಾ ಕಾರ್ಯಕ್ರಮಕ್ಕೆ ಮೊದಲು ಪೆರ್ನೆ ಪೇಟೆಯಿಂದ ಎ.ಎಮ್. ಅಡಿಟೋರಿಯಂ ತನಕ ರಮಾನಾಥ ರೈ ಅವರ ಮೆರವಣಿಗೆ ನಡೆಸಲಾಗುವುದು. ಅಲ್ಲದೆ ಪೆರ್ನೆ ವ್ಯಾಪ್ತಿಯ 25 ಮಂದಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಭಿನಂದನಾ ಸಮಿತಿ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ, ಗೌರವ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ, ಸಂಚಾಲಕರಾದ ಮಹಮ್ಮದ್ ಫಾರೂಕ್ ಪೆರ್ನೆ, ತನಿಯಪ್ಪ ಪೂಜಾರಿ ಬೆಳಿಯೂರು, ಪ್ರಹ್ಲಾದ್, ಅನೀಶ್ ಉಪಸ್ಥಿತರಿದ್ದರು.