ಬ್ರಿಟನ್ ನ ಅಧಿಕೃತ ರಾಜನಾದ ಕಿಂಗ್ ಚಾರ್ಲ್ಸ್ III: ತಾಯಿಯಂತೆಯೇ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದಾಗಿ ಭರವಸೆ

ಲಂಡನ್: ಬ್ರಿಟನ್‌ನಲ್ಲಿ ರಾಣಿ ಎಲಿಜಬೆತ್ II ರ ಮರಣದ ನಂತರ, ಶನಿವಾರ ಸೇಂಟ್ ಜೇಮ್ಸ್ ಅರಮನೆಯಲ್ಲಿ ನಡೆದ ಐತಿಹಾಸಿಕ ಸಮಾರಂಭದಲ್ಲಿ ಚಾರ್ಲ್ಸ್ III ರನ್ನುಔಪಚಾರಿಕವಾಗಿ ರಾಜ ಎಂದು ಘೋಷಿಸಲಾಗಿದೆ.
ಈ ವೇಳೆ ಮಾತನಾಡಿದ ಕಿಂಗ್ ಚಾರ್ಲ್ಸ್ III , " ನನ್ನ ಪ್ರೀತಿಯ ತಾಯಿ, ರಾಣಿಯ ಮರಣವನ್ನು ಘೋಷಿಸುವುದು ನನ್ನ ದುಃಖಕರ ಕರ್ತವ್ಯ. ಇದು ನಮಗೆಲ್ಲರಿಗೂ ತುಂಬಲಾರದ ನಷ್ಟ. ನೀವು ನನ್ನ ಬಗ್ಗೆ ಎಷ್ಟು ಆಳವಾದ ಸಹಾನುಭೂತಿ ಹೊಂದಿದ್ದೀರಿ ಎಂದು ನನಗೆ ತಿಳಿದಿದೆ." ಎಂದು ಹೇಳಿದರು
ದಿವಂಗತ ರಾಣಿ ಅವರು ತಮ್ಮ 70 ವರ್ಷಗಳ ಅಧಿಕಾರವಧಿಯಲ್ಲಿ ಮಾಡಿದ ಆಳ್ವಿಕೆಯಂತೆಯೇ, ಅದೇ ಭಕ್ತಿಯಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದಾಗಿ ರಾಜ ಚಾರ್ಲ್ಸ್ ಇದೇ ವೇಳೆ ಭರವಸೆ ನೀಡಿದರು.
ಇನ್ನುಮುಂದೆ, ಕಿಂಗ್ ಚಾರ್ಲ್ಸ್ ಅವರ ಪತ್ನಿ ಕ್ಯಾಮಿಲ್ಲಾ ಅವರನ್ನು ಕ್ವೀನ್ ಕನ್ಸಾರ್ಟ್ ಎಂದು ಕರೆಯಲಾಗುವುದು ಮತ್ತು ರಾಜನ ಮಗ ವಿಲಿಯಂ ಹೊಸ ರಾಜಕುಮಾರ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
Next Story