ಧ್ವೇಷ ಭಾಷಣದಲ್ಲಿ ಬಂಧನಕ್ಕೊಳಗಾಗಿದ್ದ ಪಾಸ್ಟರ್ರನ್ನು ಭೇಟಿಯಾದ ರಾಹುಲ್ ಗಾಂಧಿ: ಬಿಜೆಪಿ ವಾಗ್ದಾಳಿ

Photo: Twitter
ಚೆನ್ನೈ: ಭಾರತ್ ಜೋಡೋ ಯಾತ್ರೆಯ ವಿರಾಮದ ನಡುವೆ ಕ್ರೈಸ್ತ ಪಾದ್ರಿ ಒಬ್ಬರನ್ನು ರಾಹುಲ್ ಗಾಂಧಿ ಭೇಟಿ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಜಾರ್ಜ್ ಪೊನ್ನಪ್ಪ ಎಂಬ ಕ್ರಿಸ್ತಿಯನ್ ಧರ್ಮಗುರುವಿನೊಂದಿಗೆ ಜೀಸಸ್ ಕ್ರಿಸ್ತರ ಬಗ್ಗೆ ರಾಹುಲ್ ಗಾಂಧಿ ಚರ್ಚಿಸುವ ವಿಡಿಯೋ ಟ್ವಿಟರಲ್ಲಿ ವೈರಲ್ ಆಗಿದ್ದು, ಬಲಪಂಥೀಯರು ಹಾಗೂ ಬಿಜೆಪಿ ರಾಹುಲ್ ವಿರುದ್ಧ ಮುಗಿಬಿದ್ದಿದೆ.
ಫಾದರ್ ಜಾರ್ಜ್ ಪೊನ್ನಪ್ಪ ವಿರುದ್ಧ ಧ್ವೇಷ ಭಾಷಣ ಆರೋಪವಿದ್ದು, ಅದಕ್ಕಾಗಿ ಬಂಧನಕ್ಕೂ ಒಳಗಾಗಿದ್ದರು. ಪುಲಿಯೂರುಕುರಿಚಿಯ ಮುಟ್ಟಿಡಿಚನ್ ಪಾರೈ ಚರ್ಚ್ನಲ್ಲಿ ಪಾಸ್ಟರ್ ಆಗಿರುವ ಜಾರ್ಜ್ ಪೊನ್ನಯ್ಯ ಅವರು ಈ ಹಿಂದೆ ಹಿಂದೂ ವಿರೋಧಿ ಭಾಷಣ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದರು, ಅವರನ್ನು ಭೇಟಿಯಾಗಿರುವ ರಾಹುಲ್ ಗಾಂಧಿ ಭಾರತ ಜೋಡಿಸಲು ಹೊರಟಿದ್ದಾರಾ? ಭಾರತವನ್ನು ಒಡೆಯಲು ಹೊರಟಿದ್ದಾರ? ಎಂದು ಬಿಜೆಪಿ ಪ್ರಶ್ನಿಸಿದೆ.
ʼ ಭಾರತಮಾತೆಯ ಅಶುದ್ಧತೆಯು ನಮ್ಮನ್ನು ಮಾಲಿನ್ಯಗೊಳಿಸಬಾರದು ಎಂದು ನಾನು ಬೂಟುಗಳನ್ನು ಧರಿಸುತ್ತೇನೆ ' ಎಂದು ಜಾರ್ಜ್ ಪೊನ್ನಪ್ಪ ಹೇಳಿದ್ದರು ಎಂಬ ಆರೋಪವಿದೆ.
“ಬಹುಸಂಖ್ಯಾತ ಸಮುದಾಯ ಮತ್ತು ಅವರ ನಂಬಿಕೆಗಳ ಬಗೆಗಿನ ತಿರಸ್ಕಾರಕ್ಕೆ ಹೆಸರುವಾಸಿಯಾದ ವಿವಾದಾತ್ಮಕ ಪಾದ್ರಿಯನ್ನು ಭೇಟಿಯಾಗುವುದು ರಾಹುಲ್ ಗಾಂಧಿಯವರ “ಜೋಡೋ ಇಂಡಿಯಾ” ಕಲ್ಪನೆಯಾಗಿದ್ದರೆ, ಈ ಭೇಟಿಯು ಸೋಗಲ್ಲದೆ ಬೇರೇನೂ ಅಲ್ಲ. ನಮ್ಮ ನಂಬಿಕೆಯೇ ಶ್ರೇಷ್ಟವೆಂದು ನಂಬುವವರು ದೊಡ್ಡ ಸಮಾಜಕ್ಕೆ ಹೇಗೆ ಸಾಮರಸ್ಯವನ್ನು ತರಬಹುದು? “ಎಂದು ಬಿಜೆಪಿಯ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ನಾಯಕರ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಕಳೆದ ವರ್ಷ ಜುಲೈನಲ್ಲಿ ಮಧುರೈನ ಕಲಿಕುಡಿಯಲ್ಲಿ ಪಾಸ್ಟರ್ ಅವರನ್ನು ಬಂಧಿಸಲಾಗಿತ್ತು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮಾತುಗಳನ್ನಾಡಿ ಜೈಲಿಗೆ ಹೋಗಿರುವ ಜಾರ್ಜ್ ಪೊನ್ನಯ್ಯ ಅವರನ್ನು ರಾಹುಲ್ ಗಾಂಧಿ ಏಕೆ ಭೇಟಿ ಮಾಡಿ ಮಾತನಾಡಬೇಕು ಎಂದು ಕೆಲವರು ಪ್ರಶ್ನಿಸುತ್ತಿರುವ ನಡುವೆಯೇ, ಅಲ್ಪಸಂಖ್ಯಾತರ ಭಾವನೆಗಳಿಗೆ ಧಕ್ಕೆ ಎದುರಾಗಿರುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಪಾಸ್ಟರ್ ರನ್ನು ಭೇಟಿ ಮಾಡಿರುವುದು ಅವರಲ್ಲಿ ಭರವಸೆ ಮೂಡಿಸಿದೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
If meeting a controversial pastor, who is known for his visceral disdain for the majority community and their beliefs, Rahul Gandhi’s idea of “Bharat Jodo”, then this Yatra is nothing but a sham.
— Amit Malviya (@amitmalviya) September 10, 2022
How can indulging faith supremacists serve the larger society and bring cohesion? pic.twitter.com/2mLBM8MSJK
Does Rahul Gandhi endorse this form of expansionist demographic aggression?
— Amit Malviya (@amitmalviya) September 10, 2022
Is this the kind of people he is trying to unite as part of Bharat Jodo Yatra?
What is the end objective of Rahul Gandhi’s Yatra? Build a coalition of Breaking India forces?
He must explain… pic.twitter.com/W7v3Px3blK







