ಸುರತ್ಕಲ್; ವಿದ್ಯುತ್ ತಂತಿ ತಗುಲಿ ಕಾರ್ಮಿಕ ಮೃತ್ಯು

ಸುರತ್ಕಲ್, ಸೆ.10: ವಿದ್ಯುತ್ ಹರಿದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಪಟ್ಟವರನ್ನು ಭಾಪಾ ಮೆಂಡನ್ ಎಂದು ಗುರುತಿಸಲಾಗಿದೆ.
ಇವರು ಕೃಷ್ಣಾಪುರ 7ನೇ ಬ್ಲಾಕ್ ನಲ್ಲಿ ನೀರಿನ ಟ್ಯಾಂಕ್ ನಿರ್ಮಾಣದ ಕೆಲಸವನ್ನು ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ ಎಂದು ಅವರ ಸಹೋದರಿಯ ಗಂಡ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನೀರಿನ ಟ್ಯಾಂಕ್ ನಿರ್ಮಿಸುತ್ತಿದ್ದ ವೇಳೆ ಮೆಲ್ಭಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿತ್ತು. ಹೀಗಾಗಿ ಕೆಲಸ ಮಾಡುವುದು ಅಪಾಯ ಎಂದು ಸೂಚನೆ ನೀಡಿದ್ದರೂ ಕಾಮಗಾರಿ ಮಾಡಿಸುತ್ತಿದ್ದವರು ಯಾವುದೇ ಮುಂಜಾಗ್ರತೆ ವಹಿಸದ ತೀರಾ ನಿರ್ಲಕ್ಷ್ಯ ತನದಿಂದ ಕೆಲಸ ಮಾಡಿಸಿದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಗುತ್ತಿಗೆದಾರರು ಹಾಗೂ ಮೆಂಡನ್ ಅವರ ಸಹೊದರಿಯ ಗಂಡ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಮಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ
Next Story





