ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಕೇರಳಕ್ಕೆ ಪ್ರವೇಶ

Photo:twitter
ತಿರುವನಂತಪುರ: ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯು ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರವಿವಾರ ಕೇರಳವನ್ನು ಪ್ರವೇಶಿಸಿತು(Congress' Bharat Jodo Yatra led by Rahul Gandhi enters Kerala). ಕೇರಳದ ತಿರುವನಂತಪುರಂ ಜಿಲ್ಲೆಯ ಪರಸ್ಸಾಲಾದಿಂದ ರಾಹುಲ್ ಯಾತ್ರೆಯ 5 ನೇ ದಿನವನ್ನು ಆರಂಭಿಸಿದರು.
ಕೇರಳದ ನೆಯ್ಯಟ್ಟಿಂಕರದಲ್ಲಿರುವ ಡಾ. ಜಿಆರ್ ಪಬ್ಲಿಕ್ ಸ್ಕೂಲ್ನಲ್ಲಿ ಪಾದಯಾತ್ರೆ ನಿಲ್ಲಲಿದೆ. ಆ ನಂತರ ಮತ್ತೆ ಮುಂದುವರಿಯಲಿದೆ.
ತಮಿಳುನಾಡು ಗಡಿ ಸಮೀಪದಲ್ಲಿರುವ ಪರಸ್ಸಾಲದಿಂದ ಕೇರಳ ಪ್ರವೇಶಿಸಿದ ನಂತರ ರಾಹುಲ್ 19 ದಿನಗಳ ಅವಧಿಯಲ್ಲಿ ಮಲಪ್ಪುರಂನ ನಿಲಂಬೂರ್ಗೆ 450 ಕಿ.ಮೀ. ಪ್ರಯಾಣಿಸಲಿದ್ದಾರೆ.
ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯನ್ನು ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಆರಂಭಿಸಿದರು. ಯಾತ್ರೆಯು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಇದು 3,500 ಕಿಮೀ ದೂರವನ್ನು ಕ್ರಮಿಸುತ್ತದೆ ಹಾಗೂ 12 ರಾಜ್ಯಗಳನ್ನು ದಾಟಿ ಹೋಗುತ್ತದೆ. ಯಾತ್ರೆಗೆ ಸರಿಸುಮಾರು 150 ದಿನಗಳನ್ನು ತೆಗೆದುಕೊಳ್ಳಲಿದೆ.
Congress' #BharatJodoYatra led by party MP Rahul Gandhi enters its Kerala leg; visuals from Parassala, Thiruvananthapuram. pic.twitter.com/r1sCyaYByP
— ANI (@ANI) September 11, 2022







