ಪಡಿತರಕ್ಕಾಗಿ ಆಧಾರ್ ಬಯೋ ದೃಢೀಕರಣ

ಉಡುಪಿ, ಸೆ.11: ಭಾರತ ಸರಕಾರದ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಮಂತ್ರಾಲಯದ ಆದೇಶದ ಮೇರೆಗೆ ಸೆಪ್ಟೆಂಬರ್ ತಿಂಗಳಿಂದ ಅಂತ್ಯೋದಯ ಅನ್ನ(ಎಎವೈ) ಹಾಗೂ ಅದ್ಯತಾ(ಪಿಎಚ್‌ಎಚ್) ಪಡಿತರ ಚೀಟಿದಾರರು ಎನ್‌ಎಫ್‌ಎಸ್‌ಎ ಮತ್ತು ಪಿಎಂಜಿಕೆವೈ ಯೋಜನೆಯ ಆಹಾರ ಧಾನ್ಯ ಪಡೆಯಲು ಪ್ರತ್ಯೇಕವಾಗಿ ಎರಡು ಬಾರಿ ಆಧಾರ್ ಆದಾರಿತ ಬಯೋ ಮೆಟ್ರಿಕ್/ಓಟಿಪಿ ದೃಢೀಕರಣದ ಮೂಲಕ ಪಡಿತರ ಪಡೆಯಬೇಕಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿಶುಲ್ಕ ದೂರವಾಣಿ ಸಂಖ್ಯೆ 1967 ಅಥವಾ 14445 ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಪ್ರಕಟಣೆ ತಿಳಿಸಿದೆ.
Next Story





