ಏಶ್ಯಕಪ್ ಫೈನಲ್: ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಪಾಕಿಸ್ತಾನ

Photo:twitter
ದುಬೈ, ಸೆ.11: ಏಶ್ಯಕಪ್ ಫೈನಲ್ನಲ್ಲಿ ರವಿವಾರ ಟಾಸ್ ಜಯಿಸಿದ ಪಾಕಿಸ್ತಾನ ಕ್ರಿಕೆಟ್ ತಂಡ ಎದುರಾಳಿ ಶ್ರೀಲಂಕಾವನ್ನು ಬ್ಯಾಟಿಂಗ್ಗೆ ಇಳಿಸಿದೆ.
ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಟಾಸ್ ನಿರ್ಣಾಯಕ ಎನಿಸಿದೆ. ಭಾರತ ಹಾಗೂ ಶ್ರೀಲಂಕಾ ಎದುರಿನ ಏಶ್ಯಕಪ್ ಪಂದ್ಯದಲ್ಲಿ ಟಾಸ್ ಸೋತಿದ್ದ ಪಾಕ್ ಮೊದಲು ಬ್ಯಾಟಿಂಗ್ ಮಾಡಿ ಸೋಲುಂಡಿತ್ತು. ಹೀಗಾಗಿ ಇಂದು ಟಾಸ್ ಜಯಿಸಿದ ಪಾಕ್ ನಾಯಕ ಬಾಬರ್ ಆಝಂ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುವ ನಿರ್ಧಾರ ಮಾಡಿದರು.
Next Story