ದ.ಕ.ಜಿಲ್ಲೆ: ಕೋವಿಡ್ಗೆ ವೃದ್ಧ ಬಲಿ
ಮಂಗಳೂರು, ಸೆ.11: ದ.ಕ.ಜಿಲ್ಲೆಯಲ್ಲಿ ರವಿವಾರ ಕೋವಿಡ್ಗೆ ಬೆಳ್ತಂಗಡಿ ಮೂಲದ 85 ವರ್ಷ ಪ್ರಾಯದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಈವರೆಗೆ ಕೋವಿಡ್ಗೆ ಬಲಿಯಾದವರ ಸಂಖ್ಯೆ 1860ಕ್ಕೇರಿದೆ.
ರವಿವಾರ 18 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,36,875ಕ್ಕೇರಿದೆ. ಅಲ್ಲದೆ ಗುಣಮುಖರಾದವರ ಸಂಖ್ಯೆ 1,34,928ಕ್ಕೇರಿದೆ ಎಂದು ದ.ಕ.ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
Next Story