ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿಮಾನ ಅಪಘಾತದಿಂದ ಪಾರು: ವರದಿ

ಇಸ್ಲಮಾಬಾದ್, ಸೆ.11: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪ್ರಯಾಣಿಸುತ್ತಿದ್ದ ವಿಮಾನ ತಾಂತ್ರಿಕ ದೋಷದಿಂದಾಗಿ ಶನಿವಾರ ತುರ್ತು ಭೂಸ್ಪರ್ಷ ಮಾಡಿದ್ದರಿಂದ ಅಪಘಾತದಿಂದ ಪಾರಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಶನಿವಾರ ರ‍್ಯಾಲಿಯೊಂದರಲ್ಲಿ ಪಾಲ್ಗೊಳ್ಳಲು ವಿಶೇಷ ವಿಮಾನದ ಮೂಲಕ ಇಮ್ರಾನ್ ಗುಜ್ರಾನ್ವಾಲಾಕ್ಕೆ ಪ್ರಯಾಣಿಸುತ್ತಿದ್ದರು. ಆಗಸ ಮಧ್ಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ವಿಮಾನದ ಪೈಲಟ್ ತಕ್ಷಣ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಮಾನವನ್ನು ಸುರಕ್ಷಿತವಾಗಿ ಭೂಸ್ಪರ್ಷ ಮಾಡುವಲ್ಲಿ ಸಫಲರಾದರು. ಬಳಿಕ ವಾಹನದ ಮೂಲಕ ಇಮ್ರಾನ್ ಗುಜ್ರಾನ್ವಾಲಾಗೆ ತೆರಳಿದರು ಎಂದು ಸ್ಥಳೀಯ ಟಿವಿ ಚಾನೆಲ್ ಅನ್ನು ಉಲ್ಲೇಖಿಸಿ ಡೈಲಿ ಪಾಕಿಸ್ತಾನ ವರದಿ ಮಾಡಿದೆ.
ಆದರೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದನ್ನು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಅಧ್ಯಕ್ಷ ಅಝರ್ ಮಷ್ವಾನಿ ನಿರಾಕರಿಸಿದ್ದಾರೆ. ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಟೇಕ್ಆಫ್ ಆದ ಕೂಡಲೇ ಇಸ್ಲಮಾಬಾದ್ ಗೆ ಮರಳಿತು ಎಂದವರು ಟ್ವೀಟ್ ಮಾಡಿದ್ದಾರೆ.
ರ‍್ಯಾಲಿಯೊಂದರಲ್ಲಿ ಪಾಲ್ಗೊಳ್ಳಲು ವಿಶೇಷ ವಿಮಾನದ ಮೂಲಕ ಇಮ್ರಾನ್ ಗುಜ್ರಾನ್ವಾಲಾಕ್ಕೆ ಪ್ರಯಾಣಿಸುತ್ತಿದ್ದರು. ಆಗಸ ಮಧ್ಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ವಿಮಾನದ ಪೈಲಟ್ ತಕ್ಷಣ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಮಾನವನ್ನು ಸುರಕ್ಷಿತವಾಗಿ ಭೂಸ್ಪರ್ಷ ಮಾಡುವಲ್ಲಿ ಸಫಲರಾದರು. ಬಳಿಕ ವಾಹನದ ಮೂಲಕ ಇಮ್ರಾನ್ ಗುಜ್ರಾನ್ವಾಲಾಗೆ ತೆರಳಿದರು ಎಂದು ಸ್ಥಳೀಯ ಟಿವಿ ಚಾನೆಲ್ ಅನ್ನು ಉಲ್ಲೇಖಿಸಿ ಡೈಲಿ ಪಾಕಿಸ್ತಾನ ವರದಿ ಮಾಡಿದೆ.
ಆದರೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದನ್ನು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಅಧ್ಯಕ್ಷ ಅಝರ್ ಮಷ್ವಾನಿ ನಿರಾಕರಿಸಿದ್ದಾರೆ. ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಟೇಕ್ಆಫ್ ಆದ ಕೂಡಲೇ ಇಸ್ಲಮಾಬಾದ್ಗೆ ಮರಳಿತು ಎಂದವರು ಟ್ವೀಟ್ ಮಾಡಿದ್ದಾರೆ.







