ಪಾಕಿಸ್ತಾನವನ್ನು ಮಣಿಸಿದ ಶ್ರೀಲಂಕಾಕ್ಕೆ ಏಶ್ಯಕಪ್
ಭಾನುಕ ರಾಜಪಕ್ಸ ಅರ್ಧಶತಕ, ವನಿಂದು ಹಸರಂಗ ಆಲ್‌ರೌಂಡ್ ಆಟ, ಪ್ರಮೋದ್‌ಗೆ 4 ವಿಕೆಟ್

ದುಬೈ, ಸೆ.11: ವನಿಂದು ಹಸರಂಗ ಆಲ್‌ರೌಂಡ್ ಆಟ, ಪ್ರಮೋದ್ ಮದುಶನ್ ಅಮೋಘ ಬೌಲಿಂಗ್ ಹಾಗೂ ಭಾನುಕ ರಾಜಪಕ್ಸ ಭರ್ಜರಿ ಬ್ಯಾಟಿಂಗ್ ಸಹಾಯದಿಂದ ಏಶ್ಯಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 23 ರನ್ ನಿಂದ ಮಣಿಸಿದ ಶ್ರೀಲಂಕಾ 6ನೇ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 171 ರನ್ ಗುರಿ ಪಡೆದ ಪಾಕಿಸ್ತಾನ 20 ಓವರ್‌ಗಳಲ್ಲಿ 147 ರನ್‌ಗೆ ಆಲೌಟಾಯಿತು. ಪ್ರಮೋದ್ ಮದುಶನ್(4-34) ಹಾಗೂ ವನಿಂದು ಹಸರಂಗ(3-27) ಪಾಕಿಸ್ತಾನವನ್ನು ನಿಯಂತ್ರಿಸಿದರು.
ಪಾಕಿಸ್ತಾನದ ಪರ ಆರಂಭಿಕ ಬ್ಯಾಟರ್ ಮುಹಮ್ಮದ್ ರಿಝ್ವಾನ್(55 ರನ್, 49 ಎಸೆತ, 4 ಬೌಂಡರಿ, 1 ಸಿಕ್ಸರ್)ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಇಫ್ತಿಖಾರ್ ಅಹ್ಮದ್(32 ರನ್, 31 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು. ಉಳಿದವರು ಒಂದಂಕಿ ಗಳಿಸಲಷ್ಟೇ ಶಕ್ತವಾದರು.
Next Story