Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನೂತನ ಕ್ರಿಮಿನಲ್ ಕಾಯ್ದೆ ಜನ ಸಾಮಾನ್ಯರ...

ನೂತನ ಕ್ರಿಮಿನಲ್ ಕಾಯ್ದೆ ಜನ ಸಾಮಾನ್ಯರ ಮುಂದಿರುವ ಆತಂಕ

ವಾರ್ತಾಭಾರತಿವಾರ್ತಾಭಾರತಿ12 Sept 2022 12:05 AM IST
share
ನೂತನ ಕ್ರಿಮಿನಲ್ ಕಾಯ್ದೆ ಜನ ಸಾಮಾನ್ಯರ ಮುಂದಿರುವ ಆತಂಕ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಭಯೋತ್ಪಾದಕರನ್ನು ದಮನಿಸುವುದಕ್ಕೆ, ಗೂಂಡಾಗಳನ್ನು ನಿಯಂತ್ರಿಸುವುದಕ್ಕೆ ತಂದಿರುವ ಕಾನೂನುಗಳೆಲ್ಲ ಹೇಗೆ ದುರುಪಯೋಗವಾಗುತ್ತಿವೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಭಯೋತ್ಪಾದನಾ ಪ್ರಕರಣಗಳನ್ನು ತನಿಖೆ ಮಾಡುವುದಕ್ಕಾಗಿಯೇ ಸೃಷ್ಟಿಯಾದ ತನಿಖಾ ಸಂಸ್ಥೆಗಳು ಅಂತಿಮವಾಗಿ ಪರೋಕ್ಷವಾಗಿ ಉಗ್ರವಾದಿಗಳನ್ನು ಹೇಗೆ ರಕ್ಷಿಸಲು ಹಾಗೂ ತನಿಖೆಯ ಹೆಸರಿನಲ್ಲಿ ಅಮಾಯಕರನ್ನು ಉಗ್ರವಾದಿಗಳಾಗಿಸಿ ಜೈಲಿಗೆ ತಳ್ಳಲು ಬಳಕೆಯಾಗುತ್ತಿರುವುದಕ್ಕೂ ದೇಶ ಸಾಕ್ಷಿಯಾಗಿದೆ. ಇಂತಹ ಹೊತ್ತಿನಲ್ಲಿ ದೇಶ ನೂತನ ಕ್ರಿಮಿನಲ್ ಕಾರ್ಯ ವಿಧಾನ ಅಥವಾ ಅಪರಾಧಿಗಳ ಗುರುತಿಸುವಿಕೆಯ ಕಾಯ್ದೆಯೊಂದನ್ನು ಜಾರಿಗೊಳಿಸಿದೆ. ಇದು ಜನಸಾಮಾನ್ಯರ ಖಾಸಗಿ ಹಕ್ಕುಗಳಿಗೆ ಧಕ್ಕೆ ತರಲಿದೆ ಮಾತ್ರವಲ್ಲ, ಇಡೀ ದೇಶವನ್ನೇ ಜೈಲಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿದೆ ಎಂದು ಸಾಮಾಜಿಕ ಹೋರಾಟಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಕಾಯ್ದೆಯಿಂದ ಪೌರರ ಖಾಸಗಿತನಕ್ಕೆ ಧಕ್ಕೆಯಾಗಲಿದೆ ಹಾಗೂ ಇದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಅಲ್ಲದೆ ಕೇಂದ್ರ ತನಿಖಾ ಸಂಸ್ಥೆಗಳು ಈ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳು ಹೇರಳವಾಗಿದೆ ಮತ್ತು ದೇಶದಲ್ಲಿ ಜನಸಾಮಾನ್ಯರು ಕಣ್ಗಾವಲಿಗೊಳಗಾಗುವಂತಹ ವ್ಯವಸ್ಥೆಯೊಂದು ಸೃಷ್ಟಿಯಾಗಲಿದೆ ಎಂದು ಮಾನವಹಕ್ಕು ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ. ಹಿಂದಿನ ಕಾಯ್ದೆಯು ಆರೋಪಿಗಳ ಛಾಯಾಚಿತ್ರಗಳು, ಕಾಲಿನ ಅಚ್ಚುಗುರುತು ಹಾಗೂ ಬೆರಳಚ್ಚುಗಳ ಸಂಗ್ರಹಕ್ಕೆ ಸೀಮಿತವಾಗಿದ್ದರೆ, ನೂತನ ಕಾಯ್ದೆಯು 'ಮಾಪನ' (ಮೆಸರ್‌ಮೆಂಟ್) ಎಂಬ ಪದದ ಅರ್ಥ ವ್ಯಾಪ್ತಿಯನ್ನು ವಿಸ್ತರಿಸುವ ಆಶಯವನ್ನು ಹೊಂದಿದೆ. ಇದೀಗ ಆರೋಪಿಗಳ ಐರಿಸ್ (ಕಣ್ಣಿನ ಪಾಪೆ) ಹಾಗೂ ರೆಟಿನಾ (ಅಕ್ಷಿಪಟ)ಗಳನ್ನು ಸ್ಕಾನ್ ಮಾಡುವುದಕ್ಕೂ ವಿಸ್ತರಿಸಲಾಗಿದೆ. ಅಲ್ಲದೆ ಅವರುಗಳ ಸಹಿ, ಕೈಬರಹ ಹಾಗೂ ದೈಹಿಕ ಮತ್ತು ಜೈವಿಕ ಮಾದರಿಗಳನ್ನು ಕೂಡಾ ಸಂಗ್ರಹಿಸುವುದಕ್ಕೆ ಅವಕಾಶ ಮಾಡಿಕೊಡುತ್ತದೆ.ಆರೋಪಿಗಳು ಅಥವಾ ದೋಷಿಗಳಿಂದ ಸಂಗ್ರಹಿಸಲಾಗುವ ಜೈವಿಕ ಮಾದರಿಗಳು ಯಾವುವೆಂಬುದನ್ನು ವ್ಯಾಖ್ಯಾನಿಸಿಲ್ಲವಾದರೂ, ಅದು ಮಂಪರು ಪರೀಕ್ಷೆ (ನಾರ್ಕೊ ಅನಾಲಿಸ್),ಸುಳ್ಳುಪತ್ತೆ ಪರೀಕ್ಷೆ (ಪಾಲಿಗ್ರಾಫ್), ಮೆದುಳಿನ ಇಲೆಕ್ಟ್ರಿಕಲ್ ಆ್ಯಕ್ಟಿವೇಶನ್ ಪ್ರೊಫೈಲ್ ಟೆಸ್ಟ್ ಇತ್ಯಾದಿಗಳನ್ನು ಒಳಗೊಂಡಿದೆ. 1920ರ ಕೈದಿಗಳ ಗುರುತಿಸುವಿಕೆ ಕಾಯ್ದೆಯು, ಆರೋಪಿಯ ದೋಷಿತ್ವ ದೃಢಪಟ್ಟಲ್ಲಿ ಇಲ್ಲವೇ ಜಾಮೀನು ಬಿಡುಗಡೆಗೊಂಡಲ್ಲಿ ಅಥವಾ ಒಂದು ವರ್ಷ ಹಾಗೂ ಅದಕ್ಕಿ ಂತ ಹೆಚ್ಚು ಅವಧಿಯ ಕಠಿಣ ಜೈಲುವಾಸದ ಶಿಕ್ಷೆಯನ್ನು ಅನುಭವಿಸುವಂತಹ ಅಪರಾಧ ಎಸಗಿದ್ದಲ್ಲಿ ಮಾತ್ರವೇ ಇಂತಹ ಮಾಪನಗಳನ್ನು ನಡೆಸುವುದಕ್ಕೆ ಅನುಮತಿ ನೀಡುತ್ತದೆ.

ಇನ್ನೊಂದೆಡೆ ನೂತನ ಕಾಯ್ದೆಯ ಸೆಕ್ಷನ್ 3, ದೋಷಾರೋಪ ದೃಢಪಟ್ಟಾತನ, ಬಂಧಿತನ, ಜೈಲು ಶಿಕ್ಷೆಗೊಳಗಾದವನ ಹಾಗೂ ವಿಚಾರಣಾಧೀನ ಕೈದಿಯ ಜೈವಿಕ ಮಾಪನಗಳನ್ನು ಪಡೆದುಕೊಳ್ಳುವುದಕ್ಕೆ ಅನುಮತಿ ನೀಡುತ್ತದೆ. ಆದರೆ ನೂತನ ಕಾಯ್ದೆಯು ದೇಶದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಡಿ ದಂಡನಾರ್ಹವಾದ ಯಾವುದೇ ಅಪರಾಧ ಪ್ರಕರಣಗಳಲ್ಲಿ ಒಳಗೊಂಡಿರುವ ಆರೋಪಿಯ ಜೈವಿಕ ಮಾಪನಗಳನ್ನು ತನಿಖಾ ಸಂಸ್ಥೆಗಳು ಪಡೆದುಕೊಳ್ಳಬಹುದಾಗಿದೆ.ಮುಂಜಾಗರೂಕತಾ ಕ್ರಮವಾಗಿ ಬಂಧಿತರಾದವರ ಜೈವಿಕ ಮಾಪನಗಳನ್ನು ತೆಗೆದುಕೊಳ್ಳುವುದಕ್ಕೂ ಈ ಕಾಯ್ದೆಯು ಅವಕಾಶ ನೀಡುತ್ತದೆ. ಒಂದು ತಿಂಗಳಿಗಿಂತಲೂ ಕಡಿಮೆ ಜೈಲು ವಾಸದ ಸಜೆಗೊಳಗಾಗುವಂತಹ ಸಣ್ಣಪುಟ್ಟ ಅಪರಾಧಗಳನ್ನು ಎಸಗಿದವರು ಕೂಡಾ ಕಾನೂನು ಅನುಷ್ಠಾನ ಏಜೆನ್ಸಿಗಳಿಗೆ ತಮ್ಮ ದೈಹಿಕ ಮಾಪನವನ್ನು ನೀಡಬೇಕಾಗುತ್ತದೆ. ವ್ಯಕ್ತಿಯ ದೈಹಿಕ ಘನತೆ ಹಾಗೂ ಗೌರವವನ್ನು ರಕ್ಷಣೆಯನ್ನು ಎತ್ತಿಹಿಡಿಯುವ ಸಂವಿಧಾನದ 21ನೇ ವಿಧಿಯನ್ನು ಈ ಕಾಯ್ದೆ ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ತನಿಖೆಗೆ ನೆರವಾಗಲು ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಉತ್ತೇಜಿಸುತ್ತದೆಯಾದರೂ, ಕಾನೂನು ಜಾರಿ ಸಂಸ್ಥೆಗಳಿಗೆ ಕಡಿವಾಣರಹಿತವಾಗಿ ನೀಡಿರುವ ಅಧಿಕಾರಗಳಿಂದಾಗಿ, ಶ್ರೀಸಾಮಾನ್ಯರ ಮೇಲೆ ದೌರ್ಜನ್ಯಗಳು ಹೆಚ್ಚುವ ಅಪಾಯವಿದೆ.

ಇದಕ್ಕಿಂತಲೂ ಹೆಚ್ಚಾಗಿ , ಈ ಕಾಯ್ದೆಯು ಎಲ್ಲಾ ದತ್ತಾಂಶಗಳನ್ನು ಸಂಗ್ರಹಿಸಲು ರಾಷ್ಟ್ರೀಯ ಸಂಗ್ರಹಾಗಾರವನ್ನು ರೂಪಿಸುವ ಉದ್ದೇಶವನ್ನು ಹೊಂದಿದ್ದು, ಇದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ನಿರ್ವಹಿಸಲಿದೆ. ಎನ್‌ಸಿಆರ್‌ಬಿಯು ತನ್ನಲ್ಲಿರುವ ಯಾವುದೇ ದಾಖಲೆಯನ್ನು ಸಂಗ್ರಹಿಸುವ, ಸಂರಕ್ಷಿಸುವ, ಸಂಸ್ಕರಿಸುವ, ಹಂಚಿಕೊಳ್ಳುವ,ಪ್ರಸಾರ ಮಾಡುವ ಹಾಗೂ ನಾಶಪಡಿಸುವ ಅಧಿಕಾರವನ್ನು ಹೊಂದಿದೆ. ಒಟ್ಟಾರೆಯಾಗಿ ಈ ಕಾಯ್ದೆ ನಿಯಮಗಳ ಘೋರ ದುರ್ಬಳಕೆಯಾಗುವುದನ್ನು ತಡೆಯುವುದಕ್ಕಾಗಿ ಈ ಕಾಯ್ದೆಗೆ ಸಮರ್ಪಕವಾದ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕಾಗಿದೆ. ಪ್ರಸಕ್ತ ಈ ಕಾಯ್ದೆಯು ವ್ಯಕ್ತಿಗಳ ದತ್ತಾಂಶ ರಕ್ಷಣೆಗೆ ಸಮರ್ಪಕವಾದ ಸುರಕ್ಷತಾ ಕ್ರಮಗಳ ಕೊರತೆಯನ್ನು ಹೊಂದಿದೆ. ಇಂತಹ ದತ್ತಾಂಶ ಸುರಕ್ಷತೆಯು ದುರ್ಬಳಕೆಗೊಳಗಾಗುವುದನ್ನು ತಪ್ಪಿಸಲು, ಪ್ರಬುದ್ಧವಾದ ದತ್ತಾಂಶ ಸುರಕ್ಷತಾ ಮೂಲಸೌಕರ್ಯವನ್ನು ಹೊಂದುವುದನ್ನು ಹಾಗೂ ಅವುಗಳ ನಿರ್ವಹಣೆಗಾಗಿ ಸಮರ್ಪಕವಾದ ಕಾನೂನುಗಳನ್ನು ರೂಪಿಸುವುದು ಅತ್ಯಂತ ಅಗತ್ಯವಾಗಿದೆ. ಇಲ್ಲವಾದರೆ ಈ ಕಾಯ್ದೆಯನ್ನು ಬಳಸಿಕೊಂಡು ಜನಸಾಮಾನ್ಯರ ಬದುಕನ್ನು ನಿಯಂತ್ರಿಸುವ ಕೃತ್ಯವನ್ನು ತನಿಖಾ ಸಂಸ್ಥೆಗಳು ಎಸಗಬಹುದು. ಇದು ಜನಸಾಮಾನ್ಯರ ಬದುಕನ್ನು ಆತಂಕ ಮತ್ತು ಅಭದ್ರತೆಗೆ ತಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X