Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ ...

ಓ ಮೆಣಸೇ ...

ಪಿ.ಎ. ರೈಪಿ.ಎ. ರೈ12 Sept 2022 12:03 AM IST
share
ಓ ಮೆಣಸೇ ...

ಪ್ರಗತಿಪರರು, ಬುದ್ಧಿಜೀವಿಗಳು ಎನಿಸಿಕೊಂಡವರೇ ಮುರುಘಾಶ್ರೀಗಳನ್ನು ಹಾಳುಮಾಡಿದ್ದಾರೆ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಅವರು ಹಾಳಾಗಿರುವುದು ಹೌದು ಎಂದು ನೀವು ಒಪ್ಪಿಕೊಂಡಿರುವುದು ಮುಖ್ಯ.

ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷ ಭಾರತದಿಂದ ಕಣ್ಮರೆಯಾಗುತ್ತಿದ್ದು, ಇಲ್ಲಿ ಭವಿಷ್ಯ ಇರುವ ಏಕೈಕ ಪಕ್ಷ ಎಂದರೆ ಬಿಜೆಪಿ ಮಾತ್ರ - ಅಮಿತ್ ಶಾ, ಕೇಂದ್ರಸಚಿವ
ಹಾಗೆ ನಂಬಿಕೊಂಡಿದ್ದವರೆಲ್ಲಾ ಇತಿಹಾಸವಾಗಿ, ನೆನಪುಗಳ ಜಗತ್ತಿನಿಂದಲೂ ಮರೆಯಾಗಿ ಬಿಟ್ಟಿದ್ದಾರೆ.

ಶಬಾನ ಆಝ್ಮಿ ಮತ್ತು ನಾಸಿರುದ್ದೀನ್ ಶಾ ಇಬ್ಬರೂ ತುಕ್ಡೆ ತುಕ್ಡೆ ಗ್ಯಾಂಗಿನ ಸ್ಲೀಪರ್ ಸೆಲ್‌ಗಳು - ನರೋತ್ತಮ ಮಿಶ್ರಾ, ಮಧ್ಯಪ್ರದೇಶ ಸಚಿವ
ನಿಮ್ಮ ಹೊಲಸು ಗ್ಯಾಂಗ್ ಅನ್ನು ತುಕ್ಡೆ ತುಕ್ಡೆ ಮಾಡುವುದಕ್ಕೆ ಇಂತಹ ಹಿರಿಯ ಕಲಾವಿದರ ಅಗತ್ಯವಿಲ್ಲ. ಆಕ್ರೋಶಿತ ಜನಸಾಮಾನ್ಯರೇ ಆ ಕೆಲಸ ಮಾಡುವುದಕ್ಕೆ ಕಾಯುತ್ತಿದ್ದಾರೆ.

ದಿಲ್ಲಿ ಸಿಎಂ ಕೇಜ್ರಿವಾಲ್ 'ಯೂಟರ್ನ್' ಹೊಡೆಯುವುದರಲ್ಲಿ ದೇಶದಲ್ಲೇ ನಿಸ್ಸೀಮ ನಾಯಕ - ತೇಜಸ್ವಿ ಸೂರ್ಯ, ಸಂಸದ
ಎಲ್ಲರೂ ನಿಮ್ಮಂತೆ ಕೇವಲ ಬೆಣ್ಣೆ ದೋಸೆ ತಿನ್ನುತ್ತಾ ನೆರೆ ವಿನಾಶದ ದೃಶ್ಯಗಳನ್ನು ಎಂಜಾಯ್ ಮಾಡುವ ನಿಸ್ಸೀಮರಾಗಿರುವುದಿಲ್ಲ.

ಬಿಜೆಪಿಯನ್ನು ಎದುರಿಸಬೇಕೆಂದರೆ ಪ್ರತಿಪಕ್ಷಗಳೆಲ್ಲ ಭಿನ್ನಾಭಿಪ್ರಾಯ ಮರೆತು ಒಗ್ಗೂಡಬೇಕಾದ ಅನಿವಾರ್ಯತೆ ಇದೆ -ನಿತೀಶ್ ಕುಮಾರ್, ಬಿಹಾರ ಸಿಎಂ
ಯಾರ ನೇತೃತ್ವದಲ್ಲಿ ಒಂದಾಗಬೇಕು ಎಂಬುದನ್ನೂ ಮುಂದಾಗಿಯೇ ತಿಳಿಸಿಬಿಡಿ. ಭವಿಷ್ಯದಲ್ಲಿ ಜಗಳ ಬೇಡ.

ಗುಜರಾತ್‌ನಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಿಜೆಪಿ ಕಾರ್ಯಕರ್ತರಿಗೆ ಬಂಪರ್ ಕೊಡುಗೆ ನೀಡಲಿದೆ - ಅರವಿಂದ್ ಕೇಜ್ರಿವಾಲ್, ದಿಲ್ಲಿ ಸಿಎಂ
ಯಾವುದೇ ರಾಜ್ಯದಲ್ಲಿ ಬಿಜೆಪಿ ಗೆದ್ದರೂ ನಿಮ್ಮ ಪಕ್ಷ ಗೆದ್ದರೂ ಲಾಭವಾಗುವುದು ಆರೆಸ್ಸೆಸ್ ಎಂಬ ಮಾತೃ ಪಕ್ಷಕ್ಕೆ.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನು ಎಂಬುದು ವಿರೋಧಿಗಳಿಗೆ ಗೊತ್ತಾಗಲಿದೆ - ಕುಮಾರಸ್ವಾಮಿ, ಮಾಜಿ ಸಿಎಂ
ಜೆಡಿಎಸ್ ಚುನಾವಣೆಗೆ ನಿಂತಿದ್ದು ಬಿಜೆಪಿ ಪರವಾಗಿ ಎಂಬುದು ಸರಕಾರ ರಚನೆಯ ವೇಳೆ ಜನತೆಗೆ ತಿಳಿಯಲಿದೆಯೇ?

ಮಂಡ್ಯದಲ್ಲೂ ಸ್ಥಳೀಯ ಪ್ರತಿನಿಧಿಗಳು ಟೆಂಡರ್ ಆಗುತ್ತಿದ್ದಂತೆ ಕಮಿಶನ್ ಕೇಳುತ್ತಿದ್ದಾರೆ -ಸುಮಲತಾ ಅಂಬರೀಷ್, ಸಂಸದೆ
ನೀವು ಪುಣ್ಯವಂತರು. ಎಷ್ಟೋ ಕಡೆ ಟೆಂಡರ್‌ಗಿಂತಲೂ ಮುನ್ನವೇ ಕಮಿಶನ್ ಎಂಬ ನಿಯಮವಿದೆ.

ದೇಶದ ಜನ ಇಂದು ಏನೇ ಕೊಂಡುಕೊಳ್ಳುವ ಮುನ್ನ ಹತ್ತು ಬಾರಿ ಯೋಚಿಸುವಷ್ಟರ ಮಟ್ಟಿಗೆ ಬೆಲೆ ಏರಿಕೆಯಾಗಿದೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಇದು ಟೀ ಶರ್ಟ್‌ಗೂ ಅನ್ವಯಿಸುತ್ತದೆಯೇ?

ನಾವು ಯಾರೂ ಕಾನೂನು ಪಾಲನೆಯಲ್ಲಿ ಪೊಲೀಸರು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಬಾಯಿ ಹಾಕುವುದಿಲ್ಲ -ಮಾಧುಸ್ವಾಮಿ, ಸಚಿವ
ಮೂಗು ಮಾತ್ರ ತೂರಿಸುತ್ತೀರಾ?

ಜಮ್ಮು - ಕಾಶ್ಮೀರಕ್ಕೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನವನ್ನು ಮರಳಿ ಕೊಡಿಸುವುದೇ ನಮ್ಮ ಪಕ್ಷದ ಮೂಲ ಧ್ಯೇಯ - ಗುಲಾಂ ನಬಿ ಆಝಾದ್, ಕಾಂಗ್ರೆಸ್ ಮಾಜಿ ನಾಯಕ
ಸದ್ಯ ಯಾವ ಪಕ್ಷದ ಕಡೆಯಿಂದ ಮಾತಾಡ್ತಿದ್ದೀರಿ?

ಸಂಸಾರಿಗಳೇ ಮಠದ ಸ್ವಾಮೀಜಿಗಳಾಗಲಿ - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ಪತ್ನಿ ಹತ್ಯೆಯಂತಹ ಹಗರಣಗಳು ಮಠಗಳಲ್ಲಿ ನಡೆಯಲಾರಂಭಿಸಿದರೆ?

ಮಂಗಳೂರಿನಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮ ಕೇವಲ ಟ್ರೇಲರ್ ಮಾತ್ರ - ಡಾ.ಕೆ.ಸುಧಾಕರ್, ಸಚಿವ
ಇನ್ನಷ್ಟು ನಿರಾಶಾದಾಯಕ ದೃಶ್ಯಗಳಿಗಾಗಿ ಜನರು ಮುಂದಿನ ಸಭೆಯ ತನಕ ಕಾಯಬೇಕೇ?

ರಾಜಕೀಯದಲ್ಲಿ ಯಾವುದನ್ನು ಬೇಕಾದರೂ ಸಹಿಸಬಹುದು ಆದರೆ ವಿಶ್ವಾಸ ದ್ರೋಹವನ್ನು ಸಹಿಸಲಾಗದು -ಅಮಿತ್ ಶಾ, ಕೇಂದ್ರ ಸಚಿವ
ಆದ್ದರಿಂದಲೇ ಜನರು ನಿಮ್ಮ ವಿರುದ್ಧ ಅಷ್ಟೊಂದು ಆಕ್ರೋಶಿತರಾಗಿರುವುದು.

ದೋಷಪೂರಿತ ರಸ್ತೆ ವಿನ್ಯಾಸಗಳೇ ಕೆಲವು ಅಪಘಾತಗಳಿಗೆ ಕಾರಣ - ನಿತಿನ್ ಗಡ್ಕರಿ, ಕೇಂದ್ರ ಸಚಿವ
ಉಳಿದವುಗಳಿಗೆಲ್ಲಾ ನೆಹರೂ ಸರಕಾರ ಕಾರಣವೇ?

ರಾಹುಲ್ ಗಾಂಧಿ ಉಕ್ರೇನ್ - ರಶ್ಯ ಯುದ್ಧದ ಬಳಿಕ ಜಾಗತಿಕವಾಗಿ ಉದ್ಭವಿಸಿರುವ ಆರ್ಥಿಕ ಹಿಂಜರಿತದ ಪರಿಣಾಮಗಳನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಮತ್ತು ನೀವು, ಯುಪಿಎ ಅಧಿಕಾರದಲ್ಲಿದ್ದಾಗ ಏನೆಲ್ಲಾ ಹೇಳಿದ್ದಿರೆಂಬುದನ್ನು ನೆನಪಿಸಿಕೊಂಡು ಮಾತನಾಡಬೇಕು.

ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿ ಮಾಡಿದ ಪಕ್ಷವು ಬುಡಕಟ್ಟು ಮುಖ್ಯಮಂತ್ರಿಯಿಂದ ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ -ಹೇಮಂತ್ ಸೋರೇನ್, ಜಾರ್ಖಂಡ್ ಸಿಎಂ
ನಿರಕ್ಷರಿಯನ್ನು ಪ್ರಧಾನಿಯಾಗಿಸಿದ್ದರಿಂದ ನಿರಕ್ಷರಿಗಳ ಯಾವುದೇ ಸಮಸ್ಯೆ ಬಗೆಹರಿಯಲಿಲ್ಲ. ಆದ್ದರಿಂದ ಬುಡಕಟ್ಟು ಮುಖ್ಯಮಂತ್ರಿಯೊಬ್ಬ ಹುದ್ದೆ ಕಳಕೊಂಡರೆ ಬುಡಕಟ್ಟಿನವರಿಗೇನೂ ನಷ್ಟವಾಗುವುದಿಲ್ಲ.

ಹಣದುಬ್ಬರವು ನಿಯಂತ್ರಿಸಬಹುದಾದ ಮಟ್ಟಕ್ಕೆ ಇಳಿಕೆಯಾಗಿದೆ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಆದರೂ ನೀವೇಕೆ ನಿಯಂತ್ರಿಸುತ್ತಿಲ್ಲ ಎಂದು ಜನ ಅಚ್ಚರಿ ಪಡುತ್ತಿದ್ದಾರೆ.

ಸಾರ್ವಜನಿಕ ಜೀವನದಲ್ಲಿರುವ ನಾವು ಸಣ್ಣ-ಪುಟ್ಟ ಘಟನೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ -ಸಿ.ಟಿ.ರವಿ, ಶಾಸಕ|
ಆದ್ದರಿಂದ ದೊಡ್ಡ ದೊಡ್ಡ ಸಮಸ್ಯೆಗಳನ್ನೆಲ್ಲ ನಿರ್ಲಕ್ಷಿಸಿ ಬಿಡುತ್ತೇವೆ.

ಅಗ್ನಿವೀರರಾಗಿ ಸೇವೆ ಸಲ್ಲಿಸಿದ ರಾಜ್ಯದ ಯುವಕರಿಗೆ ರಾಜ್ಯದ ಸರಕಾರಿ ಹುದ್ದೆಗಳಲ್ಲಿ ಶೇ.50ರಷ್ಟು ಮೀಸಲಾತಿ ನೀಡುವ ಚಿಂತನೆ ಇದೆ -ಕೋಟ ಶ್ರೀನಿವಾಸ ಪೂಜಾರಿ, ಸಚಿವ
ರಾಜಕಾರಣಿಗಳ ಮನೆ ಗೇಟು ಕಾಯುವುದಕ್ಕೆ ಸೆಕ್ಯೂರಿಟಿ ಗಾರ್ಡ್ ಕೊರತೆ ಇರಬೇಕು.

ಬದುಕಲು ಬೇಕಾದ ಜ್ಞಾನವನ್ನು ಕಲಿಸಿದ ಗುರುಗಳಿಗೆ ನನ್ನ ಮೊದಲನೇ ನಮಸ್ಕಾರಗಳು -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ರಾಜಕೀಯದಲ್ಲಿ ಬದುಕಲು ಕಲಿಸಿದ ಗುರುಗಳಿಗೆ ಇರಬೇಕು.

ದೇಶ ರಕ್ಷಣೆಗೆ ರಾಜ್ಯದ ಪ್ರತೀ ಮನೆಯ ಕನಿಷ್ಠ ಒಬ್ಬನಾದರೂ ಸೈನಿಕ ಸೇವೆಗೆ ಸೇರ್ಪಡೆಯಾಗಬೇಕು - ಎಸ್.ಅಂಗಾರ, ಸಚಿವ
ನಿಮ್ಮ ಮನೆಯಿಂದಲೇ ಆರಂಭವಾಗಲಿ.

ಕೊಟ್ಟ ಕುದುರೆ ಏರಲಾಗದೆ ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಕುದುರೆ ಎಂದು ಕತ್ತೆಯನ್ನು ಕೊಡುವವರಿದ್ದಾರೆ. ಎಚ್ಚರಿಕೆ.

ಕಾಂಗ್ರೆಸ್ ಆರೆಸ್ಸೆಸ್ ತತ್ವವನ್ನು ಅಳವಡಿಸಿಕೊಂಡರೆ ಆ ಪಕ್ಷದ ಪರವಾಗಿ ಕೆಲಸಮಾಡಲು ಸಿದ್ಧ -ಅರುಣ್ ಕುಮಾರ್, ಆರೆಸ್ಸೆಸ್ ಪ್ರಚಾರ ಪ್ರಮುಖ
ಅಳವಡಿಸಿಕೊಂಡಿಲ್ಲ ಎಂದವರಾರು. ಅದನ್ನು ಬಹಿರಂಗಪಡಿಸಿಲ್ಲ ಅಷ್ಟೇ.

ಸಂಕಷ್ಟ ಕಾಲದಲ್ಲೂ ಸಹಾಯ ಮಾಡಬಲ್ಲ ಅತ್ಯಂತ ನಂಬುಗೆಯ ದೇಶ ಭಾರತ - ಶೇಕ್ ಹಸೀನಾ, ಬಾಂಗ್ಲಾ ಪ್ರಧಾನಿ
ರಾಜಕಾರಣಿಗಳ ರಾಜಕೀಯ ಸಂಕಷ್ಟ ಕಾಲದ ಕೊಡು ಕೊಳ್ಳುವಿಕೆಯ ಬಗ್ಗೆ ಹೇಳುತ್ತಿರಬೇಕು.

ದಲಿತರು ತಮ್ಮಳಗಿನ ಒಳಪಂಗಡಗಳ ವ್ಯತ್ಯಾಸ ಮರೆತು ಒಂದಾದಾಗ ದಲಿತ ಮುಖ್ಯಮಂತ್ರಿಯಾಗಬೇಕು ಎಂಬ ಕೂಗಿಗೆ ಸಮರ್ಥನೆ ಸಿಗುತ್ತದೆ - ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ
ಒಟ್ಟಿನಲ್ಲಿ ನಿಮ್ಮನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ದಲಿತರು ಒಂದಾಗಬೇಕು.

share
ಪಿ.ಎ. ರೈ
ಪಿ.ಎ. ರೈ
Next Story
X