Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ‘ರಾಜ’ನ ಹಕ್ಕಿಗೆ ಬಲಿಯಾದ ‘ರಾಜಪಥ’

‘ರಾಜ’ನ ಹಕ್ಕಿಗೆ ಬಲಿಯಾದ ‘ರಾಜಪಥ’

ಹರೀಶ ಖರೆಹರೀಶ ಖರೆ12 Sept 2022 10:21 AM IST
share
‘ರಾಜ’ನ ಹಕ್ಕಿಗೆ ಬಲಿಯಾದ ‘ರಾಜಪಥ’

ಒಂದು ಸಮಯದಲ್ಲಿ ಬಿಜೆಪಿಯ ಅತ್ಯುನ್ನತ ನಾಯಕರೋರ್ವರು ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರಿಗೆ ತನ್ನ ‘ರಾಜಧರ್ಮ’ವನ್ನು ಪಾಲಿಸುವಂತೆ ಬಹಿರಂಗವಾಗಿ ಕರೆಯನ್ನು ನೀಡಿದ್ದರು. ತನ್ನದೇ ಪಕ್ಷದ ನಾಯಕತ್ವವನ್ನು ಯಶಸ್ವಿಯಾಗಿ ಮೂಲೆಗುಂಪು ಮಾಡಿರುವ ಮೋದಿ ಈಗ ಪಕ್ಷದ ಪರಮೋಚ್ಚ ನಾಯಕನಾಗಿ ಹೊರಹೊಮ್ಮಿದ್ದಾರೆ. ರಾಜತ್ವದ ಮಾದರಿಗಳನ್ನು ಮರುವ್ಯಾಖ್ಯಾನಿಸಲು ತಾನು ಅರ್ಹ ಎಂದು ಅವರು ನಂಬಿದ್ದಾರೆ.

‘ರಾಜಪಥ’ ಎನ್ನುವುದು ವಸಾಹತುಶಾಹಿ ಯುಗದ,ಕಿಂಗ್ಸ್‌ವೇ ಎಂದೇ ಹೆಸರಾಗಿದ್ದ ಇಂಪೀರಿಯಲ್ ಸೆಂಟ್ರಲ್ ಅವೆನ್ಯೂಗೆ ಸ್ವಾತಂತ್ರಾನಂತರ ನೀಡಿದ್ದ ಹೆಸರಾಗಿತ್ತು ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ನೆನಪಿಸಲು ಅವರನ್ನು ವಿಸ್ಮತಿಯಿಂದ ಹೊರಗೆ ತರಲು ಭಾರತದ ಯಾವುದೇ ಒಳ್ಳೆಯ ವಿಶ್ವವಿದ್ಯಾನಿಲಯದಲ್ಲಿಯ ಮೊದಲ ವರ್ಷದ ಭಾರತೀಯ ಇತಿಹಾಸದ ವಿದ್ಯಾರ್ಥಿಗೆ ಸಾಧ್ಯವಾಗಲೇಬೇಕು.

ಈಗ ತನ್ನ ವಾಡಿಕೆಯಂತೆ ಮೋದಿಯವರು ಗುರುವಾರ ರಾಜಪಥಕ್ಕೆ ‘ಕರ್ತವ್ಯ ಪಥ್’ ಎಂದು ಮರುನಾಮಕರಣವನ್ನು ಭವ್ಯ ರೀತಿಯಲ್ಲಿ ಘೋಷಿಸಿದ್ದಾರೆ. ಮಹತ್ವದ್ದೆಂದರೆ ನಾವು ಅಂತಿಮವಾಗಿ ನಮ್ಮ ವಸಾಹತುಶಾಹಿ ಹ್ಯಾಂಗೋವರ್‌ನಿಂದ ಹೊರಬಂದಿದ್ದೇವೆ ಎಂದೂ ಅವರು ಘೋಷಿಸಿದ್ದಾರೆ.

ಕಿಂಗ್ಸ್ ವೇ ಅನ್ನು ‘ರಾಜಪಥ’ವನ್ನಾಗಿ ಬದಲಿಸಿದಾಗ ಅದು ನೂತನ ‘ರಾಷ್ಟ್ರ’ವು ಕಾರ್ಯ ನಿರ್ವಹಿಸುತ್ತಿದೆ ಮತ್ತು ತನ್ನ ವಸಾಹತುಶಾಹಿ ಭೂತಕಾಲವನ್ನು ಹಿಂದಕ್ಕೆ ಬಿಟ್ಟಿದೆ ಎನ್ನುವುದನ್ನು ನಮಗೆ ನೆನಪಿಸುವ ಸಂಕೇತವಾಗಿತ್ತು,ಮಹಾತ್ಮಾ ಗಾಂಧಿಯವರ ಸಮಾಧಿ ರಾಜ್‌ಘಾಟ್‌ನಲ್ಲಿಯ ‘ರಾಜ್’ನಂತೆ.

ರಾಜಪಥಕ್ಕೆ ಹೊಸ ಹೆಸರು ಒಂದು ರೀತಿಯಲ್ಲಿ ರಾಷ್ಟ್ರೀಯ ಪುನರುಜ್ಜೀವನಕ್ಕೆ ನಾಂದಿ ಹಾಡುತ್ತದೆ ಎಂಬ ಮೋದಿಯವರ ಪ್ರತಿಪಾದನೆಯು ಇತಿಹಾಸಕ್ಕೆ ಅನುಗುಣವಾಗಿಲ್ಲ.

ರಾಜರು ಮತ್ತು ಚಕ್ರವರ್ತಿಗಳು ಸಹಜವಾಗಿಯೇ ಇತಿಹಾಸವನ್ನು ಮರುರಚಿಸುವ,ಸ್ಮಾರಕಗಳಿಗೆ ಮರುನಾಮಕರಣದ,ಹೊಸ ಕರೆನ್ಸಿ ಮತ್ತು ನಾಣ್ಯಗಳನ್ನು ಹೊರಡಿಸುವ ಮತ್ತು ಸತ್ಯಗಳನ್ನು ಪುನರ್‌ವ್ಯಾಖ್ಯಾನಿಸುವ ಸವಲತ್ತುಗಳನ್ನು ಹೊಂದಿದ್ದಾರೆ. ಮೋದಿಯವರು ಆಧುನಿಕ ಕಾಲದ ರಾಜ ಎಂದು ಕರೆಯಬಹುದಾದಷ್ಟು ಪ್ರಭಾವವನ್ನು ಬೆಳೆಸಿಕೊಂಡಿದ್ದಾರೆ ಮತ್ತು ಅವರು ಇತಿಹಾಸವನ್ನು ಪುನಃ ಬರೆಯಲು ತನ್ನ ‘ರಾಜ’ನ ಹಕ್ಕನ್ನು ಬಳಸಿಕೊಳ್ಳುತ್ತಿದ್ದಾರೆ. ಎಲ್.ಕೆ. ಅಡ್ವಾಣಿಯವರು ಒಮ್ಮೆ ಹೇಳಿದ್ದಂತೆ ಮೋದಿ ಅತ್ಯುತ್ತಮ ಈವೆಂಟ್ ಮ್ಯಾನೇಜರ್ ಆಗಿ ಉಳಿದಿದ್ದಾರೆ. ಈ ಎಲ್ಲ ವರ್ಷಗಳಲ್ಲಿ ಒಂದಲ್ಲೊಂದು ಕಾರ್ಯಕ್ರಮಗಳ ಮೂಲಕ ಎಲ್ಲರ ಗಮನದ ಕೇಂದ್ರಬಿಂದುವಾಗಿರುವ ಅವರ ಪ್ರಚಾರಪ್ರಿಯತೆಯ ಹಸಿವು ಇಂದಿಗೂ ನೀಗಿಲ್ಲ. ಕನಿಷ್ಠ ಈ ವಿಷಯದಲ್ಲಿ ಮೋದಿ ಭಕ್ತರು ಕಳವಳ ಪಡಬೇಕಿಲ್ಲ.

ಸರಕಾರವು ಐತಿಹಾಸಿಕ ಎಂದು ಹೇಳಿಕೊಂಡಿರುವ ಗುರುವಾರದ ಕಾರ್ಯಕ್ರಮವನ್ನು 2014ರ ನಂತರ ಹುಟ್ಟುಹಾಕಲಾದ ಪ್ರಮಾಣಿತ ಕಾರ್ಯವಿಧಾನ (ಎಸ್‌ಒಪಿ)ದ ಭಾಗವಾಗಿ ನೋಡಬೇಕಿದೆ. ಜನರನ್ನು ಚಿತ್ತವಿಕ್ಷೇಪಗೊಳಿಸುವ,ಅವರಲ್ಲಿ ನಿಶ್ಚಿಂತೆಗೆ ಅವಕಾಶ ನೀಡದಿರುವ,ಅವರೆದುರು ಸದಾ ಅಪಾಯ ಮತ್ತು ಅಸ್ಥಿರತೆಯ ಗುಮ್ಮನನ್ನು ತೋರಿಸುವ ಮೂಲಕ ಬೆಂಕಿಯು ಸದಾ ಉರಿಯುತ್ತಿರುವಂತೆ ನೋಡಿಕೊಳ್ಳುವುದು ಮತ್ತು ಪ್ರಧಾನಿಯನ್ನು ನಮ್ಮ ನಾಗರಿಕತೆಯ ವೈಭವ ಮತ್ತು ರಾಷ್ಟ್ರೀಯ ಅವನತಿಯ ನಡುವೆ ನಿಂತಿರುವ ಏಕೈಕ ವ್ಯಕ್ತಿಯಾಗಿ ‘ಜನತೆಯ ಪ್ರವಾದಿ ’ಯಾಗಿ ಪ್ರತಿಷ್ಠಾಪಿಸುವುದು ಇದರ ಕೇಂದ್ರ ಪರಿಕಲ್ಪನೆಯಾಗಿದೆ. ತಮಾಷೆ,ಕಾರ್ನಿವಲ್ ಮತ್ತು ಉತ್ಸವಗಳಂತಹ ಅಂಶಗಳು ಯಾವಾಗಲೂ ನಾಟಕದಲ್ಲಿರಲೇಬೇಕು.

ಅದು ಆರ್ಥಿಕ ನಿರ್ವಹಣೆ,ವಿದೇಶಾಂಗ ನೀತಿ,ರಕ್ಷಣೆ,ಅಷ್ಟೇ ಏಕೆ... ದೈನಂದಿನ ರಾಜಕೀಯವೂ ಆಗಿರಲಿ; ಚುನಾವಣೆಯಲ್ಲಿ ಲಾಭಗಳಿಕೆಯ ಉದ್ದೇಶದಿಂದ ರಾಷ್ಟ್ರಮಟ್ಟದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ 2014ರ ನಂತರದ ಎಸ್‌ಒಪಿ ಕೆಲಸ ಮಾಡುತ್ತಿರುವುದನ್ನು ನೋಡಬಹುದು. ಈ ಎಲ್ಲವನ್ನೂ ನಂತರ ಅಧಿಕಾರದ ಮೇಲೆ ಬಿಗಿಹಿಡಿತ ಹೊಂದಿರಲು ಮತ್ತು ಪಟ್ಟಭದ್ರ ಶಕ್ತಿಗಳ ಪರವಾಗಿ ಕೆಲಸ ಮಾಡಲು ಜನಾದೇಶವನ್ನಾಗಿ ಬಳಕೆ ಮಾಡಲಾಗುತ್ತದೆ.

ಜನರಲ್ಲಿ ಅಸಾಧಾರಣ ಭಾವನಾತ್ಮಕತೆಯನ್ನು ಸೃಷ್ಟಿಸಲು ಅವರನ್ನು ಪ್ರಚೋದಿಸಲಾಗುತ್ತದೆ ಮತ್ತು ಅದು ಕರಗುತ್ತಿದೆ ಎನ್ನುವಾಗ ಈವೆಂಟ್ ಮ್ಯಾನೇಜರ್‌ಗಳು ಇನ್ನೊಂದು ಮೈಲುಗಲ್ಲನ್ನು ‘ಆಚರಿಸಲು ’ ಮುಂದಿನ ಗಿಮಿಕ್ ಅಥವಾ ಸಂದರ್ಭದ ಬಗ್ಗೆ ಯೋಚಿಸುತ್ತಾರೆ.

ಆದಾಗ್ಯೂ ಉದ್ದೇಶಿತ ರಾಜಕೀಯ ಕ್ರಮದತ್ತ ಜನರ ಮೇಲೆ ಒತ್ತಡ ಹೇರುವುದು ಸರಕಾರಿ ಪ್ರಾಯೋಜಿತ ಪ್ರಚಾರದ ಪ್ರಧಾನ ಉದ್ದೇಶವಾಗಿದೆ ಎನ್ನುವುದನ್ನು ಆಧುನಿಕ ಸಂವಹನದ ಎಲ್ಲ ವಿದ್ಯಾರ್ಥಿಗಳು ಒಪ್ಪಿಕೊಳ್ಳುತ್ತಾರೆ. ಒಳ್ಳೆಯ ಮತ್ತು ಪರಿಣಾಮಕಾರಿ ಪ್ರಚಾರವು ಮನವರಿಕೆಯಾಗದ ಜನರ ವಿರುದ್ಧ ದೈಹಿಕ ಬಲವನ್ನು ರಾಜನು ಬಳಸುವುದನ್ನು ತಪ್ಪಿಸುತ್ತದೆ. ಉದಾಹರಣೆಗೆ ಔರಂಗಜೇಬ್ ರಸ್ತೆಗೆ ಡಾ.ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣಗೊಳಿಸಿದ್ದು ದಿಲ್ಲಿಯಲ್ಲಿನ ಹೊಸ ಆಡಳಿತದ ನಿರುಪದ್ರವಿ ಸಂಕೇತ ಎಂದು ನಾವೆಲ್ಲ ಭಾವಿಸಿದ್ದೆವು. ಆದರೆ ಹಿನ್ನೋಟದಲ್ಲಿ ‘ದುಷ್ಟ’ ಔರಂಗಜೇಬ್‌ನನ್ನು ನೆನಪಿಸುವ ಎಲ್ಲವನ್ನೂ ಬದಲಿಸುವುದರ ಅಗತ್ಯದ ಬಗ್ಗೆ ಜನಸಾಮಾನ್ಯರನ್ನು ಸಜ್ಜುಗೊಳಿಸುವುದು ಹಾಗೂ ಈ ದೇಶದಲ್ಲಿಯ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿರುವ ಎಲ್ಲ ನಿರಂಕುಶತೆ ಮತ್ತು ತಾರತಮ್ಯ ಅಗತ್ಯ ಹಾಗೂ ಅಪೇಕ್ಷಣೀಯ ಎನ್ನುವುದನ್ನು ಅವರು ಒಪ್ಪಿಕೊಳ್ಳುವಂತೆ ಮಾಡುವುದು ಇದರ ಉದ್ದೇಶವಾಗಿರುವಂತೆ ಕಂಡು ಬರುತ್ತದೆ.

ಔರಂಗಜೇಬ್‌ನ ಹೆಸರಿನ ರಸ್ತೆಗೆ ಮರುನಾಮಕರಣ ಮಾಡುವು ದರಿಂದ ಹಿಡಿದು ಸಂಚುಕೋರ ವಸಾಹತುಶಾಹಿ ದೊರೆಗಳು ಮತ್ತು ವಾರಣಾಸಿಯ ಮಸೀದಿಯಲ್ಲಿಯ ‘ಮಂದಿರ’ದ ಮರುಸ್ವಾಧೀನ ದವರೆಗೆ ನಾವು ಅನಾಯಾಸವಾಗಿ ಸಾಗಿ ಬಂದಿದ್ದೇವೆ.

ಇದೇ ರೀತಿ ರಾಜಪಥವನ್ನು ಕರ್ತವ್ಯಪಥ್ ಎಂದು ಮರುನಾಮಕರಣದ ವ್ಯೆಹಾತ್ಮಕ ಉದ್ದೇಶವನ್ನು ಗುರುತಿಸುವುದು ಸುಲಭವಾಗಿದೆ. ಮೋದಿ ಆಡಳಿತವು ತನ್ನ ಉದ್ದೇಶವನ್ನು ಸ್ಪಷ್ಟಗೊಳಿಸಿದೆ,ಅದು ಜನರಿಂದ ಕರ್ತವ್ಯಪಾಲನೆಗೆ ಒತ್ತಾಯಿಸಲು ಹೊರಟಿದೆ. ಇತರ ಶಬ್ದಗಳಲ್ಲಿ ಹೇಳಬೇಕೆಂದರೆ ಹೊಸ ಚಕ್ರವರ್ತಿಗಳ ಘನತೆಗೆ ವಿಧೇಯರಾಗಿರಲು,ಒಪ್ಪಿಸಿಕೊಳ್ಳಲು,ಪಾಲಿಸಲು ಮತ್ತು ಶರಣಾಗತರಾಗಲು ಪ್ರತಿಯೊಬ್ಬರೂ ಬದ್ಧರಾಗಿದ್ದಾರೆ.

ಒಂದು ಸಮಯದಲ್ಲಿ ಬಿಜೆಪಿಯ ಅತ್ಯುನ್ನತ ನಾಯಕರೋರ್ವರು ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರಿಗೆ ತನ್ನ ‘ರಾಜಧರ್ಮ’ವನ್ನು ಪಾಲಿಸುವಂತೆ ಬಹಿರಂಗವಾಗಿ ಕರೆಯನ್ನು ನೀಡಿದ್ದರು. ತನ್ನದೇ ಪಕ್ಷದ ನಾಯಕತ್ವವನ್ನು ಯಶಸ್ವಿಯಾಗಿ ಮೂಲೆಗುಂಪು ಮಾಡಿರುವ ಮೋದಿ ಈಗ ಪಕ್ಷದ ಪರಮೋಚ್ಚ ನಾಯಕನಾಗಿ ಹೊರಹೊಮ್ಮಿದ್ದಾರೆ. ರಾಜತ್ವದ ಮಾದರಿಗಳನ್ನು ಮರುವ್ಯಾಖ್ಯಾನಿಸಲು ತಾನು ಅರ್ಹ ಎಂದು ಅವರು ನಂಬಿದ್ದಾರೆ. ತಾನು ಜನಸಾಮಾನ್ಯರಿಗಾಗಿ ದಣಿವರಿಯದೆ ಕೆಲಸ ಮಾಡುತ್ತಿದ್ದೇನೆ ಎಂದು ಸ್ವಯಂ ಸೇವೆ ಮಾಡಿಕೊಳ್ಳುತ್ತಿರುವ ರಾಜನು ಈಗಾಗಲೇ ಘೋಷಿಸಿರುವುದರಿಂದ ಅಸಹಾಯಕ ಪ್ರಜೆಗಳು ಈಗ ತಮ್ಮ ಕರ್ತವ್ಯ ನಿರ್ವಹಣೆಗೆ ಕರೆಯನ್ನು ನಿರೀಕ್ಷಿಸಬಹುದು.

ಒಂದು ಹಂತದಲ್ಲಿ ದಿಲ್ಲಿಯ ಈ ಇಡೀ ಸೆಂಟ್ರಲ್ ವಿಸ್ಟಾ ಯೋಜನೆಯು ಎರಡು ದಶಕಗಳ ಹಿಂದೆ ಮಾಯಾವತಿಯವರು ಲಕ್ನೋದಲ್ಲಿ ಮಾಡಿದ್ದನ್ನು ಪುನರಾವರ್ತಿಸುವ ಮೋದಿಯವರ ಪ್ರಯತ್ನವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಲಕ್ನೋ ನಗರದ ಮಧ್ಯೆ ಪ್ರತಿಮೆಗಳ ಸ್ಥಾಪನೆ ಮತ್ತು ಹೊಸ ರಚನೆಗಳ ಮೂಲಕ ರಾಜಕೀಯ ಲಾಭವನ್ನು ಪಡೆಯಲು ಮಾಯಾವತಿಗೆ ಸಾಧ್ಯವಾಗಿದ್ದರೆ ದೇಶಾದ್ಯಂತ ತಾನು ಇದೇ ಕೆಲಸವನ್ನು ಮಾಡುವುದು ತನ್ನ ಅಧಿಕಾರ ವ್ಯಾಪ್ತಿಯಲ್ಲಿದೆ ಎಂದು ಮೋದಿ ಭಾವಿಸಿದ್ದಾರೆ.

ಕೃಪೆ: thewire.in

share
ಹರೀಶ ಖರೆ
ಹರೀಶ ಖರೆ
Next Story
X