ವಿಧಾನ ಮಂಡಲ ಅಧಿವೇಶನ ಆರಂಭ: ಬ್ರಿಟನ್ ರಾಣಿ, ಸಚಿವ ಉಮೇಶ್ ಕತ್ತಿ ಸಹಿತ ಅಗಲಿದ ಗಣ್ಯರಿಗೆ ಸಂತಾಪ

ಬೆಂಗಳೂರು, ಸೆ.12: ವಿಧಾನ ಮಂಡಲ ಉಭಯ ಸದನಗಳ ಮಳೆಗಾಲದ ಅಧಿವೇಶನ ಇಂದು ಪೂರ್ವಾಹ್ನ 11 ಗಂಟೆಗೆ ಆರಂಭಗೊಂಡಿತು.
ಸದನ ಆರಂಭಗೊಳ್ಳುತ್ತಿದ್ದಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಂತಾಪ ಸೂಚಿಸುವ ನಿರ್ಣಯವನ್ನು ಮಂಡಿಸಿ ಅಗಲಿದ ಗಣ್ಯರ ಸಾಧನೆ, ಕೊಡುಗೆಗಳನ್ನು ಸ್ಮರಿಸಿದರು.
ಅಗಲಿದ ಗಣ್ಯರಾದ ಬ್ರಿಟನ್ ರಾಣಿ ಎರಡನೇ ಎಲಿಝಬೆತ್, ರಾಜ್ಯ ಸಚಿವ ಉಮೇಶ್ ಕತ್ತಿ, ಮಾಜಿ ಸಚಿವರಾದ ಎಂ.ರಘುಪತಿ, ಪ್ರಭಾಕರ ರಾಣೆ, ಯಾದವ ರಾವ್, ಮಾಜಿ ಶಾಸಕರಾದ ಜಿ.ವಿ.ಶ್ರೀರಾಮ ರೆಡ್ಡಿ, ಎ.ಜಿ.ಕೊಡ್ಗಿ, ಕೆ.ಕೆಂಪೇಗೌಡ, ಸಿ.ಎಂ.ದೇಸಾಯಿ, ಈಶಣ್ಣ ಗುಳಗಣ್ಣವರ್ ಹಾಗೂ ಖ್ಯಾತ ಸುಗಮ ಸಂಗೀತಗಾರ ಶಿವಮೊಗ್ಗ ಸುಬ್ಬಣ್ಣರಿಗೆ ಉಭಯ ಸದನಗಳ ಸದಸ್ಯರು ಸಂತಾಪ ಅರ್ಪಿಸಿದರು.
ಸಭಾಧ್ಯಕ್ಷರು ಮಂಡಿಸಿದ ಸಂತಾಪ ನಿರ್ಣಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲ ವ್ಯಕ್ತಪಡಿಸಿ ಅಗಲಿದ ಗಣ್ಯರ ಸಂಸ್ಮರಣೆ ಮಾಡಿದರು.
Next Story





