ಗಾಂಜಾ ಸೇವನೆ ಆರೋಪ: ಯುವಕನ ಸೆರೆ

ಮಂಗಳೂರು, ಸೆ.12: ನಗರ ಹೊರವಲಯದ ವಳಚ್ಚಿಲ್ ವ್ಯೆ ಪಾಯಿಂಟ್ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಮಲಪ್ಪುರಂ ನಿವಾಸಿ ವಿವೇಕ (21) ಎಂಬಾತನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಸೆ.11ರಂದು ಸಂಜೆ 7ಕ್ಕೆ ಆರೋಪಿ ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





