ಮಂಗಳೂರು; ಸೆ.14ರಂದು ನೇರ ಸಂದರ್ಶನ

ಮಂಗಳೂರು, ಸೆ.12: ನಗರದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ. ವತಿಯಿಂದ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ 18,000 ರೂ.ಗಳ ವೇತನದೊಂದಿಗೆ ಇತರೆ ಭತ್ತೆಗಳನ್ನೊಳಗೊಂಡ ಹೋಮ್ ಸೇಲ್ಸ್ ಆಫಿಸರ್, ಜಿಯೋ ಪಾಯಿಂಟ್ ಅಸಿಸ್ಟೆಂಟ್ ಮ್ಯಾನೆಜರ್, ಜಿಯೋ ಫೈಬರ್ ಇಂಜಿನಿಯರ್ಸ್ ಹಾಗೂ ಜಿಯೋ ಫೈಬರ್ ಅಸೋಸಿಯೇಟ್ಸ್ ಸಹಿತ 30ಕ್ಕೂ ಅಧಿಕ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ.
32 ವರ್ಷ ವಯಸ್ಸಿನ ಒಳಗಿನ ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಆಸಕ್ತ ಪುರುಷ ಅಭ್ಯರ್ಥಿಗಳು ಸೆ.14ರ ಬೆಳಗ್ಗೆ 10ರಿಂದ 1:30ರ ಮಧ್ಯೆ ನಗರದ ಮಹಾನಗರ ಪಾಲಿಕೆ ಕಟ್ಟಡದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನವನ್ನು ಎದುರಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





