ಜಮಿಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕ; ನೂತನ ಅಧ್ಯಕ್ಷರಾಗಿ ಪಿ.ಬಿ.ಎ.ರಝಾಕ್ ಆಯ್ಕೆ

ಪಿ.ಬಿ.ಎ.ರಝಾಕ್
ಮಂಗಳೂರು, ಸೆ.13: ಜಮಿಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಅಬೂಬಕ್ಕರ್ (ಗ್ರೂಪ್4) ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಧಾನ ಕಾರ್ಯದರ್ಶಿ ನಝೀರ್ ಅಹ್ಮದ್ ವಾರ್ಷಿಕ ವರದಿ ವಾಚಿಸಿದರು. ಜಮಿಯ್ಯತುಲ್ ಫಲಾಹ್ ಕೇಂದ್ರ ಸಮಿತಿಯ ವೀಕ್ಷಕರಾಗಿ ಸಭೆಯಲ್ಲಿ ಪಾಲ್ಗೊಂಡ ಜಮಿಯ್ಯತುಲ್ ಫಲಾಹ್ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಫಝಲ್ ರಹೀಮ್ ಪುತ್ತೂರು ಅವರು ಘಟಕವು ನಡೆಸಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಜಮಿಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದ ಕಾರ್ಯಕ್ರಮಗಳಾದ ಬಡ ಕಿಡ್ನಿ ರೋಗಿಗಳಿಗೆ ಡಯಾಲಿಸಿಸ್ ಸೇವೆ, ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಶೈಕ್ಷಣಿಕ ಧನ ಸಹಾಯ ಯೋಜನೆ, ವಿದ್ಯಾರ್ಥಿವೇತನ ವಿತರಣೆ, ವೈದ್ಯಕೀಯ ಶಿಬಿರಗಳು ಮುಂತಾದ ಹಲವಾರು ಕಾರ್ಯಕ್ರಮಗಳು ಇತರ ತಾಲೂಕು ಘಟಕಗಳಿಗೆ ಮಾದರಿ ಹಾಗೂ ಅನುಕರಣೀಯ ಯೋಗ್ಯವಾಗಿದೆ ಎಂದರು.
ಇನ್ನೋರ್ವ ವೀಕ್ಷಕರಾಗಿ ಸಭೆಗೆ ಆಗಮಿಸಿದ್ದ ಜಮಿಯ್ಯತುಲ್ ಫಲಾಹ್ ಖಜಾಂಚಿ ಟಿ.ಕೆ. ಬಶೀರ್ ಅವರು ಘಟಕದ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಘಟಕದ ನೂತನ ಪದಾಧಿಕಾರಿಗಳಾಗಿ ಪಿ.ಬಿ.ಎ. ರಝಾಕ್ (ಅಧ್ಯಕ್ಷರು), ಮಹಮ್ಮದ್ ಸೈಫುಲ್ಲಾ (ಪ್ರಧಾನ ಕಾರ್ಯದರ್ಶಿ) ಹಾಗೂ ಬಿ.ಎಸ್.ಮಹಮ್ಮದ್ ಬಶೀರ್ (ಖಜಾಂಚಿ) ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.