ಜ್ಞಾನವಾಪಿ ಪ್ರಕರಣದಲ್ಲಿ ವಾರಣಾಸಿ ನ್ಯಾಯಾಲಯದ ಆದೇಶ ದೇಶವನ್ನು 1980ಕ್ಕೆ ಕೊಂಡೊಯ್ಯಲಿದೆ: ಅಸದುದ್ದೀನ್ ಉವೈಸಿ

photo grace :NDTV
ವಾರಣಾಸಿ, ಸೆ. 13: ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಾರಣಾಸಿ ನ್ಯಾಯಾಲಯ ನೀಡಿದ ಆದೇಶ ದೇಶವನ್ನು 1980 ಹಾಗೂ 1990ಕ್ಕೆ ಕೊಂಡೊಯ್ಯಲಿದೆ ಎಂದು ಎಐಎಂಐಎಂನ ವರಿಷ್ಠ ಅಸಾದುದ್ದೀನ್ ಉವೈಸಿ ಅವರು ಸೋಮವಾರ ಹೇಳಿದ್ದಾರೆ. ಜ್ಞಾನವಾಪಿ ಮಸೀದಿಯ ಆವರಣದ ಒಳಗಡೆ ಪ್ರಾರ್ಥಿಸುವ ಹಕ್ಕು ಕೋರಿ ಹಿಂದೂಗಳು ಸಲ್ಲಿಸದ ಸಿವಿಲ್ ಮೊಕದ್ದಮೆ ಸಮರ್ಥನೀಯವಾಗಿದೆ.ಮುಂದಿನ ವಿಚಾರಣೆ ನಡೆಸಬಹುದು ಎಂದು ನ್ಯಾಯಾಲಯ ಹೇಳಿದ ಗಂಟೆಗಳ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಉವೈಸಿ ಅವರು ಈ ಹೇಳಿಕೆ ನೀಡಿದ್ದಾರೆ.
‘‘ಒಂದು ವೇಳೆ ಇದು ನಡೆದರೆ, ಕಾಯ್ದೆ 1991ರ (ಪೂಜಾ ಸ್ಥಳ ಕಾಯ್ದೆ )ಯ ಉದ್ದೇಶ ವಿಫಲವಾಗಲಿದೆ. ಸಂಘರ್ಷಗಳನ್ನು ಅಂತ್ಯಗೊಳಿಸಲು ಈ ಕಾಯ್ದೆ 1991ನ್ನು ರಚಿಸಲಾಗಿದೆ” ಎಂದು ಅವರು ಹೇಳಿದ್ದಾರೆ. ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ಅಂಜುಮನ್ ಇಂತೆಝಮಿಯಾ ಮಸೀದಿ ಸಮಿತಿ ಮೇಲ್ಮನವಿ ಸಲ್ಲಿಸುವ ನಿರೀಕ್ಷೆ ಇದೆ ಎಂದು ಉವೈಸಿ ಹೇಳಿದ್ದಾರೆ.
Next Story





