ಮರ್ಕಝ್ ನಾಲೇಜ್ ಸಿಟಿ; ದ.ಕ ಜಿಲ್ಲಾ ವೆಸ್ಟ್ ಯೋಜನಾ ಸಮಿತಿ ರಚನೆ

ಯಾಕೂಬ್ ಸಅದಿ ನಾವೂರು
ಮಂಗಳೂರು, ಸೆ.13: ಮರ್ಕಝ್ ನಾಲೇಜ್ ಸಿಟಿ ಅಕ್ಟೋಬರ್ ಕೊನೆಯ ವಾರದಲ್ಲಿ ಉದ್ಘಾಟನೆಗೊಳ್ಳಲಿದೆ. ಆ ಹಿನ್ನೆಲೆಯಲ್ಲಿ ಸೋಮವಾರ ನಗರದ ಪುರಭವನದಲ್ಲಿ ಕರ್ನಾಟಕ ರಾಜ್ಯ ಮರ್ಕಝ್ ಆಯೋಜನ ಸಮಿತಿಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆಯ ಅಧ್ಯಕ್ಷತೆಯಲ್ಲಿ ಸುನ್ನೀ ಸಂಘಟನೆಗಳ ನಾಯಕರ ಸಮಾವೇಶ ನಡೆಯಿತು.
ಮರ್ಕಝ್ ಡೈರಕ್ಟರ್ ಜನರಲ್ ಹಾಗೂ ಕೇರಳ ರಾಜ್ಯ ಹಜ್ ಕಮಿಟಿ ಅಧ್ಯಕ್ಷ ಸಿ. ಮುಹಮ್ಮದ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಮರ್ಝೂಖ್ ಸಅದಿ ಪಾಪಿನಶ್ಶೇರಿ ಮುಖ್ಯ ಪ್ರಭಾಷಣ ಮಾಡಿದರು. ಎಸ್ವೈಎಸ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಎಂಎಸ್ಎಂ ಝೈನಿ ಕಾಮಿಲ್ ಮಾಹಿತಿ ನೀಡಿದರು.
ರಾಜ್ಯ ಯೋಜನಾ ಸಮಿತಿಯ ಜನರಲ್ ಕನ್ವೀನರ್ ಎಂಪಿಎಂ ಅಶ್ರಫ್ ಸಅದಿ ಮಲ್ಲೂರು ಸ್ವಾಗತಿಸಿದರು. ಈ ಸಂದರ್ಭ ವಿವಿಧ ಜಿಲ್ಲೆಗಳ ಮರ್ಕಝ್ ನಾಲೇಜ್ ಸಿಟಿ ಯೋಜನಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ದ.ಕ ಜಿಲ್ಲಾ ವೆಸ್ಟ್ ಸಮಿತಿಯ ಅಧ್ಯಕ್ಷರಾಗಿ ಹಾಫಿಳ್ ಯಾಕೂಬ್ ಸಅದಿ ನಾವೂರು, ಉಪಾಧ್ಯಕ್ಷರಾಗಿ ನವಾಝ್ ಸಖಾಫಿ ಅಡ್ಯಾರ್ ಪದವು ಮತ್ತು ಬದ್ರುದ್ದೀನ್ ಅಝ್ಹರಿ ಬಡಕಬೈಲು, ಜನರಲ್ ಕನ್ವೀನರ್ ಆಗಿ ಅಶ್ರಫ್ ಕಿನಾರ ಮಂಗಳೂರು, ಸಹಾಯಕ ಕನ್ವೀನರ್ ಗಳಾಗಿ ಇಸ್ಮಾಯಿಲ್ ಸಅದಿ ಉರುಮಣೆ, ಖಲೀಲ್ ಮಾಲಿಕಿ ಬೋಳಂತೂರು, ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಖಾಲಿದ್ ಹಾಜಿ ಭಟ್ಕಳ, ಸಲೀಂ ಅಡ್ಯಾರ್ ಪದವು, ಕೋಶಾಧಿಕಾರಿಯಾಗಿ ಹನೀಫ್ ಹಾಜಿ ಉಳ್ಳಾಲ ಸಹಿತ 33 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.







