ಡಿಕೆಎಸ್‌ಸಿ ಸದಸ್ಯತ್ವ ಅಭಿಯಾನ, ಕಾರ್ಯಕ್ರಮಗಳಿಗೆ ಚಾಲನೆ

ಮಂಗಳೂರು : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ಇದರ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಸದಸ್ಯತ್ವ ಅಭಿಯಾನ ಮತ್ತು ಇತರ 13 ಅಂಶ ಕಾರ್ಯಕ್ರಮಗಳಿಗೆ ಡಿಕೆಎಸ್‌ಸಿ ಕೇಂದ್ರ ಸಮಿತಿ ಹಾಗೂ ಮರ್ಕಝ್ ಸಮಿತಿ ಅಧ್ಯಕ್ಷ ಅಸೈಯದ್ ಕೆ.ಎಸ್ ಆಟಕೋಯ ತಂಳ್ ಕುಂಬೋಳ್ ಮಂಗಳವಾರ ತನ್ನ ಸ್ವಗೃಹದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಡಿಕೆಎಸ್‌ಸಿ ಕೇಂದ್ರ ಸಮಿತಿಯೊಂದಿಗೆ ಜಿಲ್ಲಾ ಮತ್ತು ಮರ್ಕಝ್ ಸಮಿತಿ ಉತ್ತಮ ಭಾಂದವ್ಯದೊಂದಿಗೆ ಕಾರ್ಯಾಚರಿಸಬೇಕು ಎಂದರು.
ಡಿಕೆಎಸ್‌ಸಿ ಜಿಲ್ಲಾ ಸಮಿತಿ ಅಧ್ಯಕ್ಷ ಅಸೈಯ್ಯದ್ ಅಹ್ಮದ್ ಮುಕ್ತಾರ್ ತಂಳ್ ಮಾತನಾಡಿ ಪ್ರವಾದಿ ಕಲಿಸಿದ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಬೇಕು. ವಿಶ್ವಾಸ ವಂಚನೆ, ವಾಗ್ಧಾನ, ಸುಳ್ಳು ಈ ಮೂರು ಘನಘೋರ ತಪ್ಪನ್ನು ಮಾಡದೆ ಅಲ್ಲಾಹನ ಪ್ರೀತಿಗೆ ಪಾತ್ರರಾಗಬೇಕು ಎಂದು ಕರೆ ನೀಡಿದರು.
ಮಂಗಳೂರಿನಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಸುನ್ನಿ ಸೆಂಟರ್ ಗೈಡೆನ್ಸ್ ಬ್ಯೂರೋ ಅಧ್ಯಕ್ಷ ಅಸೈಯ್ಯದ್ ಹಬೀಬುಲ್ಲಾ ತಂಳ್ ಪೆರುವಾಯಿ ಉದ್ಘಾಟಿಸಿದರು. ಮೂಳೂರು ಮರ್ಕಝ್ ತಹ್ಲೀಮುಲ್ ಇಹ್ಸಾನ್‌ನ ವ್ಯವಸ್ಥಾಪಕ ಯು.ಕೆ.ಮುಸ್ತಫಾ ಸಅದಿ ಪ್ರಾಸ್ತವಿಕವಾಗಿ ಮಾತನಾಡಿದರು.
ಸಂಸ್ಥಾಪನಾ ದಿನದ ಅಂಗವಾಗಿ ಜಿಲ್ಲಾ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಸೆ.13ರಿಂದ ಅಕ್ಟೋಬರ್ 13ರವರೆಗಿನ 13 ಅಂಶ ಕಾರ್ಯಕ್ರಮ ನಡೆಸಲು ಜಿಲ್ಲಾ ಸಮಿತಿ, ಮರ್ಕಝ್ ಸಮಿತಿ, ಹಾಗೂ ಗೈಡೆನ್ಸ್ ಸಮಿತಿಯನ್ನು ಒಳಗೊಂಡ ಉಪ ಸಮಿತಿಯನ್ನು ರಚಿಸಲಾಯಿತು.
ಡಿಕೆಎಸ್‌ಸಿ ಕೇಂದ್ರ ಸಮಿತಿ ಸದಸ್ಯರಾದ ಫಾರೂಕ್ ಹಾಜಿ ಕರ್ನಿರೆ, ಮರ್ಕಝ್ ಸಮಿತಿಯ ಉಪಾಧ್ಯಕ್ಷ ಕೆ.ಸಿ. ಇಸ್ಮಾಯಿಲ್ ಹಾಜಿ ಕಿನ್ಯ, ಲೆಕ್ಕ ಪರಿಶೋಧಕ ಅನ್ವರ್ ಹಾಜಿ ಗೂಡಿನಬಳಿ, ಜಿಲ್ಲಾ ಸಮಿತಿಯ ಕಾರ್ಯಧ್ಯಕ್ಷ ಹುಸೈನ್ ಹಾಜಿ ಕಿನ್ಯ, ಡಿಕೆಎಸ್‌ಸಿ ಸ್ಥಾಪಕ ಸದಸ್ಯರಾದ ಉಮ್ಮರ್ ಹಾಜಿ ಮುಕ್ವ ಮತ್ತಿತರರು ಉಪಸ್ಥಿತರಿದ್ದರು.
ಮರ್ಕಝ್ ಸಮಿತಿಯ ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ ವಿಟ್ಲ ಸ್ವಾಗತಿಸಿದರು. ಡಿಕೆಎಸ್‌ಸಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್ ಬಳ್ಕುಂಜೆ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಝೈನುದ್ದೀನ್ ಮುಕ್ವೆ ವಂದಿಸಿದರು.







