ಬೆಂಗಳೂರು: ಒಂದೇ ಶಾಲೆಯ ಮೂವರು ಬಾಲಕಿಯರು ನಾಪತ್ತೆ

ಬೆಂಗಳೂರು, ಸೆ.14: ಶಾಲೆಗೆ ಹೋದ ಮೂವರು ಶಾಲಾ ಬಾಲಕಿಯರು ನಾಪತ್ತೆಯಾಗಿದ್ದು ಈ ಬಗ್ಗೆ ಪೋಷಕರು ಆತಂಕಕ್ಕೆ ಒಳಗಾಗಿ ಪುಲಕೇಶಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶಕ್ತೀಶ್ವರಿ(15), ವರುಣಿಕಾ(16), ನಂದಿನಿ(15) ನಾಪತ್ತೆಯಾದ ಬಾಲಕಿಯರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸೆ.6ರಂದು ಪ್ರಾಮನೆಡ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಕಾನ್ವೆಂಟ್ ಹೈಯರ್ ಪ್ರೈಮರಿ ಶಾಲೆಯಿಂದ ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಾಣೆಯಾಗಿ 9 ದಿನವಾದರೂ ಇನ್ನೂ ಕೂಡ ಮಕ್ಕಳು ಪತ್ತೆಯಾಗಿಲ್ಲ. ಅಲ್ಲದೆ, ಶಾಲೆಯಲ್ಲಿ ಕೇಳಿದರು, ಸಿಬ್ಬಂದಿ ಸರಿಯಾಗಿ ಉತ್ತರ ಕೊಡುತ್ತಿಲ್ಲ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆರೋಪಿಸಿದ್ದಾರೆ.
Next Story





