ಲಯನ್ಸ್ ಆರರ ಪ್ರಾಂತೀಯ ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ, ಸೆ.14: ಪ್ರಪ್ರಥಮ ಬಾರಿಗೆ ಜಿಲ್ಲೆ ೩೧೭ಸಿ ಯಲ್ಲಿ ಪ್ರಾಂತ್ಯ ಆರರ ಸಾಂಸ್ಕೃತಿಕ ಕಾರ್ಯಕ್ರಮವು ಪ್ರಾಂತ್ಯ ಅಧ್ಯಕ್ಷ ಹರಿಪ್ರಸಾದ್ ರೈ ಮುಂದಾಳತ್ವದಲ್ಲಿ ಇತ್ತೀಚೆಗೆ ಅಂಬಾಗಿಲು ಅಮೃತ ಗಾರ್ಡನ್‌ನಲ್ಲಿ ಜರಗಿತು.
ಜಿಲ್ಲಾ ಪ್ರಥಮ ಉಪ ಗವರ್ನರ್ ನೇರಿ ಕರ್ನೆಲಿಯೋ ಅವರು ಅಮೃತ್ ಗಾರ್ಡನ್ನಲ್ಲಿ ತಾರೀಕು ಹತ್ತರಂದು ನಡೆದ ಪ್ರಾಂತ್ಯ ಆರರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಂತ್ಯದ ಪ್ರಥಮ ಮಹಿಳೆ ವಿಜೇತಾ ರೈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಲಯನ್ಸ್ ಕ್ಲಬ್ ಬ್ರಹ್ಮಗಿರಿ ಅಧ್ಯಕ್ಷ ಉಮೇಶ್ ನಾಯಕ್ ಸ್ವಾಗತಿಸಿದರು. ಪ್ರಾಂತೀಯ ಕಾರ್ಯದರ್ಶಿ ಗಿರೀಶ್ ರಾವ್ ವಂದಿಸಿದರು. ಮಾಜಿ ಜಿಲ್ಲಾ ಗವರ್ನರ್ ವಿಜಿ ಶೆಟ್ಟಿ, ಮೆಗಾ ಸಿಟಿ ಲಯನ್ಸ್ ಕ್ಲಬ್ ಬೆಂಗಳೂರು ಅಧ್ಯಕ್ಷ ಸುಧಾಕರ್ ಶೆಟ್ಟಿ, ಲಯನ್ಸ್ ಕ್ಲಬ್ ಬ್ರಹ್ಮಗಿರಿ ಕಾರ್ಯದರ್ಶಿ ಗೀತಾ ವಿ.ರಾವ್ ಉಪಸ್ಥಿತರಿದ್ದರು.
Next Story





