ಗಾಂಜಾ ಸೇವನೆ: ಏಳು ಮಂದಿ ಪೊಲೀಸ್ ವಶಕ್ಕೆ

ಉಡುಪಿ, ಸೆ.14: ಗಾಂಜಾ ಸೇವನೆಗೆ ಸಂಬಂಧಿಸಿ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ಏಳು ಮಂದಿಯನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ.
ಸೆ.10ರಂದು ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಕಳ ಸಾಲ್ಮರ ಗ್ಯಾಲಕ್ಸಿ ಹಾಲ್ ಸಮೀಪ ಕಾರ್ಕಳ ತಾಲೂಕು ಕಚೇರಿ ಬಳಿ ಪ್ರಕಾಶ್(34), ಸೆ.12ರಂದು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ವಾರಂಬಳ್ಳಿ ಗ್ರಾಮದ ಅಕ್ಷಯ್ ಫರ್ನಿಚರ್ ಬಳಿ ಹಿತೇಶ್ ಕುಮಾರ್(38), ನೀಲಾವರ ಚರ್ಚ್ ಬಳಿ ಚಂದ್ರಶೇಖರ ಶೆಟ್ಟಿ(35), ನೀಲಾವರ ಜಂಕ್ಷನ್ ಬಳಿ ಮಹೇಂದ್ರ ಪೂಜಾರಿ(34) ಮತ್ತು ರವೀಂದ್ರ ಆಚಾರ್ಯ(34), ಸೆ.13ರಂದು ಹಿರಿಯಡ್ಕ ಪೊಲೀಸ್ ಠಾಣಾ ಆತ್ರಾಡಿ ಗ್ರಾಮದ ಶ್ರೀನಿಧಿ ಬಾರ್ ಬಳಿ ಅಂಜಾರು ಗ್ರಾಮದ ಧೀರಜ್(22), ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಮಾರ್ಕೆಟ್ ಬಳಿ ಶಿರೂರು ನ್ಯೂ ಕಾಲೋನಿಯ ಅಬ್ರಾರುಲ್ ಹಕ್(28) ಎಂಬವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವೈದ್ಯಕೀಯ ಪರೀಕ್ಷೆ ವರದಿಯಲ್ಲಿ ಇವರೆಲ್ಲ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.





