ವಾಟ್ಸ್ಆ್ಯಪ್ನಲ್ಲಿ ದ.ಕ.ಜಿಲ್ಲಾಧಿಕಾರಿಯ ಫೋಟೊ ದುರ್ಬಳಕೆ; ಸೆನ್ ಪೊಲೀಸ್ ಠಾಣೆಗೆ ದೂರು

ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ
ಮಂಗಳೂರು, ಸೆ.14: ಮೊಬೈಲ್ ಸಂಖ್ಯೆಯೊಂದರ ವಾಟ್ಸ್ಆ್ಯಪ್ನಿಂದ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಹೆಸರು ಮತ್ತು ಫೋಟೋವನ್ನು ದುರ್ಬಳಕೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಮೊ.ಸಂ: 8590710748ರ ವಾಟ್ಸ್ಆ್ಯಪ್ನಲ್ಲಿ ತನ್ನ ಹೆಸರು ಹಾಗೂ ಫೋಟೊ ದುರ್ಬಳಕೆ ಮಾಡಲಾಗಿದೆ. ಅಪರಿಚಿತರು ಈ ವಾಟ್ಸ್ಆ್ಯಪ್ ಮೂಲಕ ಸಂದೇಶ ಕಳುಹಿಸಿ ಸಹಾಯ ಅಥವಾ ಹಣವನ್ನು ವರ್ಗಾಯಿಸಲು ವಿನಂತಿಸಬಹುದು. ಆ ನಂಬರ್ ತನ್ನದ್ದಲ್ಲ. ಹಾಗಾಗಿ ಯಾರೂ ಕೂಡ ಯಾವುದೇ ರೀತಿಯಲ್ಲಿ ಸಹಾಯ ಅಥವಾ ಹಣವನ್ನು ಆ ನಂಬರ್ಗೆ ವರ್ಗಾಯಿಸದಂತೆ ಡಿಸಿ ರಾಜೇಂದ್ರ ಕೆ.ವಿ. ಮನವಿ ಮಾಡಿದ್ದಾರೆ.
8590710748 ಈ ನಂಬರ್ನಿಂದ ಯಾವುದೇ ರೀತಿಯ ಮನವಿ ಬಂದಲ್ಲಿ ಅದನ್ನು ಬ್ಲಾಕ್ ಮಾಡಿ ವರದಿ ಮಾಡುವಂತೆಯೂ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
Next Story