ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ಗೆ ಮ್ಯಾಥ್ ಫಿಯೆಸ್ತಾ ತಂಡ ಪ್ರಶಸ್ತಿ

ಮಂಗಳೂರು, ಸೆ.14: ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಂಯೋಜಿಸಿದ ಅಂತರ್ ಕಾಲೇಜು ಮ್ಯಾಥ್ಸ್ ಫಿಯೆಸ್ಟಾ-2022 ಅಂತರ್ ಪದವಿ ಪೂರ್ವ ಕಾಲೇಜು ಸ್ಪರ್ಧೆಗಳಲ್ಲಿ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ತಂಡವು ಹಲವು ವೈಯಕ್ತಿಕ ಸಾಧನೆಯೊಂದಿಗೆ ಅಲೋಶಿಯಸ್ ಮ್ಯಾಥ್ಸ್ ಫಿಯೇಸ್ತಾ-2022 ಗೆದ್ದು ಕೊಂಡಿದೆ.
ಸಾಯಿ ಪ್ರತೀಕ್ಷಾ ಕಾರ್ತಿಕೇಯನ್ (ಪ್ರಥಮ-ಮ್ಯಾಥ್‌ರೇಟ್), ಆರ್ಯನ್ ಶ್ರೀವಾಸ್ತವ್ ಮತ್ತು ಸೈಯಮ್ ಜಗದೀಪ್ ಶೇಟ್ (ಪ್ರಥಮ-ಎಪಿಕ್‌ಎಸ್ಕಾಪಡೆ), ಆರ್ಯನ್ ಶ್ರೀವಾಸ್ತವ್, ಸಾಕ್ಷಿ ಎ. ರಾವ್, ಅಮ್ನಾಜಾವೆದ್, ಲಿನಿಶಾ ಮಿಶಲ್ ಡಿಸೋಜ ಮತ್ತು ಅಲ್ಯಾನಾ ಕ್ರಿಸ್ಟಿನಾ ಮೋಂತೆರೋ (ದ್ವಿತೀಯ- ಸಿಫರ್ ಟ್ರೈಲ್) ಸ್ಥಾನವನ್ನು ಪಡೆದಿದ್ದಾರೆ.
Next Story