ಗೌಪ್ಯತೆ ಉಲ್ಲಂಘನೆ: ಮೆಟಾ, ಗೂಗಲ್ಗೆ 71 ಮಿಲಿಯನ್ ಡಾಲರ್ ದಂಡ

IMAGE: REUTERS
ಸಿಯೋಲ್, ಸೆ.14: ಜಾಹೀರಾತಿಗೆ ಬಳಸಲು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿದ್ದಕ್ಕಾಗಿ ಗೂಗಲ್ ಮತ್ತು ಮೆಟಾ(ಫೇಸ್ಬುಕ್)ಗೆ ಒಟ್ಟು 71 ಮಿಲಿಯನ್ ಡಾಲರ್ಗೂ ಅಧಿಕ ದಂಡ ವಿಧಿಸಿರುವುದಾಗಿ ದಕ್ಷಿಣ ಕೊರಿಯಾದ ವೈಯಕ್ತಿಕ ಮಾಹಿತಿ ರಕ್ಷಣಾ ಆಯೋಗ ಬುಧವಾರ ಹೇಳಿದೆ.
ಮಾಹಿತಿ ತಂತ್ರಜ್ಞಾನದ ಎರಡು ದೈತ್ಯ ಸಂಸ್ಥೆಗಳಾದ ಅಮೆರಿಕ ಮೂಲದ ಮೆಟಾ ಮತ್ತು ಗೂಗಲ್ ‘ ತಮ್ಮ ಬಳಕೆದಾರರ ಅಂಕಿಅಂಶವನ್ನು ಸಂಗ್ರಹಿಸುವುದು ಮತ್ತು ವಿಶ್ಲೇಷಿಸುತ್ತಿರುವುದು, ವೆಬ್ಸೈಟ್ ಹಾಗೂ ಅಪ್ಲಿಕೇಶನ್ಗಳ ಬಳಕೆಯ ಮೇಲೆ ನಿಗಾ ಇರಿಸಿರುವುದು ತನಿಖೆಯಿಂದ ತಿಳಿದು ಬಂದಿದೆ’ . ಹೀಗೆ ಸಂಗ್ರಹಿಸಲಾದ ಅಂಕಿಅಂಶವನ್ನು ಬಳಕೆದಾರರ ಆಸಕ್ತಿಗಳನ್ನು ಊಹಿಸಲು ಅಥವಾ ವೈಯಕ್ತಿಕ ವಿಷೇಷಣಗಳ ಪ್ರಕಾರ ಬದಲಾಯಿಸಿದ ಆನ್ಲೈನ್ ಜಾಹೀರಾತಿಗೆ ಬಳಸಲಾಗಿದೆ. ಈ ಪ್ರಕ್ರಿಯೆಯ ಬಗ್ಗೆ ದಕ್ಷಿಣ ಕೊರಿಯಾದ ಬಳಕೆದಾರರಿಗೆ ಗೂಗಲ್ ಅಥವಾ ಮೆಟಾ ಸ್ಪಷ್ಟ ಮಾಹಿತಿ ನೀಡಿರಲಿಲ್ಲ ಅಥವಾ ಅವರ ಒಪ್ಪಿಗೆಯನ್ನು ಮುಂಚಿತವಾಗಿ ಪಡೆದಿಲ್ಲ . ಇದರಿಂದ ಬಳಕೆದಾರರ ಹಕ್ಕುಗಳ ಉಲ್ಲಂಘನೆಯ ಸಾಧ್ಯತೆ ಮತ್ತು ಅಪಾಯ ಹೆಚ್ಚು ಎಂದು ಹೇಳಬಹುದು.
ಈ ಕಾರಣದಿಂದ ಗೂಗಲ್ಗೆ 49.7 ಮಿಲಿಯನ್ ಡಾಲರ್ ಮತ್ತು ಮೆಟಾಕ್ಕೆ 22.1 ಮಿಲಿಯನ್ ಡಾಲರ್ ದಂಡ ವಿಧಿಸಲಾಗಿದ್ದು ಇದು ವೈಯಕ್ತಿಕ ಮಾಹಿತಿ ಉಲ್ಲಂಘನೆಗಾಗಿ ವಿಧಿಸಿರುವ ಅತ್ಯಧಿಕ ದಂಡವಾಗಿದೆ ಎಂದು ಆಯೋಗ ಹೇಳಿದೆ.





